ಚೆನ್ನೈ, (ಜ.12): ನಟಿ ನಯನತಾರಾ ಅವರ ‘ಅನ್ನಪೂರ್ಣಿ’ ಸಿನಿಮಾ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಹಾಗೂ ಲವ್ ಜಿಹಾದ್ ಪ್ರೇರೆಪಿಸುವಂತಿದೆ ಎಂದು ಚಿತ್ರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿನಿಮಾವನ್ನು ನೆಟ್ಪ್ಲಿಕ್ಸ್ ಒಟಿಟಿಯಿಂದ ತೆಗೆದು ಹಾಕಲಾಗಿದೆ.
ಅಲ್ಲದೇ ‘ಹಿಂದೂಗಳು ಮತ್ತು ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ ಮತ್ತು ಆಯಾ ಸಮುದಾಯದ ಭಾವನೆಗೆ ಉಂಟಾದ ನೋವಿಗೆ ನಾವು ಕ್ಷಮೆಯಾಚಿಸುತ್ತೇವೆ’ ಎಂದು ಚಿತ್ರ ನಿರ್ಮಾಣ ಸಂಸ್ಥೆ ಝೀ ಸ್ಟುಡಿಯೋಸ್ ವಿಶ್ವ ಹಿಂದೂ ಪರಿಷದ್ಗೆ ಪತ್ರ ಬರೆದಿದೆ.
‘ಶ್ರೀರಾಮನೂ ಮಾಂಸ ಸೇವಿಸು ತಿದ್ದ’ ಎಂಬ ಸಂಭಾಷಣೆಯೊಂದಿಗೆ ಚಿತ್ರದಲ್ಲಿ ಬ್ರಾಹ್ಮಣ ಪೂಜಾರಿಯ ಮಗಳ ಪಾತ್ರ ಮಾಡಿರುವ ನಯನತಾರಾಗೆ ಮಾಂಸ ಸೇವನೆಗೆ ಪ್ರೋತ್ಸಾಹಿಸಲಾಗಿದೆ ಮತ್ತು ಬಿರಿಯಾನಿ ರುಚಿಯಾಗಲು ನಮಾಜ್ ಮಾಡಬೇಕೆಂದು ನಯನತಾರಾ ನಮಾಜ್ ಮಾಡಿದ್ದಾರೆ.
ಇದಕ್ಕೆ ಹಿಂದೂ ಸಂಘಟನೆಗಳು ಕಿಡಿಕಾರಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….