ಚಾಮರಾಜನಗರ, (ಫೆ.01); ಆನೆ ಫೋಟೋ ಕ್ಲಿಕ್ಕಿಸಲು ಕಾರಿನಿಂದ ಕೆಳಗಿಳಿದ ಇಬ್ಬರು ಪ್ರಯಾಣಿಕರು ಕಾಡಾನೆ ದಾಳಿಯಿಂದ ಸ್ವಲ್ಪದರಲ್ಲೆ ಪಾರಾಗಿರುವ ಘಟನೆ ಜಿಲ್ಲೆಯ ಗಡಿ ಭಾಗದ ಕೇರಳದ ಮುತ್ತಂಗ ಚೆಕ್ಪೋಸ್ಟ್ ಬಳಿ ನಡೆದಿದೆ.
ಬಂಡೀಪುರ ಸುಲ್ತಾನ್ಬತ್ತೇರಿ ರಸ್ತೆಯಲ್ಲಿರುವ ಮುತ್ತಂಗ ಚೆಕ್ ಪೋಸ್ಟ್ ಸಮೀಪ ಕಾಡಾನೆ ಕಂಡು ಫೋಟೋ ಕ್ಲಿಕ್ಲಿಸಲು ಕಾರಿನಿಂದ ಇಬ್ಬರು ಪ್ರಯಾಣಿಕರು ಕೆಳಗಿಳಿದಿದ್ದಾರೆ. ಈ ವೇಳೆ ಕಾಡಾನೆ ಅಟ್ಟಾಡಿಸಿಕೊಂಡು ಬಂದಿದೆ.
ಆನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿರುವಾಗಲೇ ಓರ್ವ ಪ್ರಯಾಣಿಕ ಎಡವಿ ಬಿದ್ದಿದ್ದಾನೆ. ಈ ವೇಳೆ ಅಟ್ಟಾಡಿಸಿಕೊಂಡು ಬಂದ ಆನೆ ಕೆಳಗೆ ಬಿದ್ದ ಪ್ರಯಾಣಿಕನಿಗೆ ಹಿಂಗಾಲಿನಿಂದ ಒದ್ದು ವಾಪಸ್ಸಾಗಿದೆ.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕ ಪಾರಾಗಿದ್ದಾನೆ. ಈ ಘಟನೆಯ ವಿಡಿಯೋ ಪ್ರಯಾಣಿಕರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….