ಚಿಕ್ಕಬಳ್ಳಾಪುರ, (ಫೆ.01): ತೆರೆದ ಚರಂಡಿಗೆ ಬಿದ್ದು ಯುವಕನೊಬ್ಬಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಮೃತನನ್ನು ತಾಲೂಕಿನ ರಾಮಪಟ್ಟ ಗ್ರಾಮದ 30 ವರ್ಷದ ನಾಗರಾಜ್ ಎಂದು ಗುರುತಿಸಲಾಗಿದೆ.
ಮಂಗಳವಾರ ತಡ ರಾತ್ರಿ ಚರಂಡಿಗೆ ಬಿದ್ದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಮೃತನು ಗಾರೆ ಕೆಲಸ ಮಾಡಿಕೊಂಡು ನಗರದ ಬಾಪೂಜಿ ನಗರದಲ್ಲಿನ ತನ್ನ ಅಕ್ಕನ ಮನೆಯಲ್ಲಿ ವಾಸವಿದ್ವ, ಮದ್ಯ ಸೇವಿಸಿ ತಡರಾತ್ರಿ ಮನೆಗೆ ಹೋಗುವ ವೇಳೆ ನಗರದ ಎಂಜಿ ರಸ್ತೆಯ ಅರಣ್ಯ ಇಲಾಖೆ ಕಚೇರಿ ಬಳಿಯ ಮೋರಿಗೆ ಆಯತಪ್ಪಿ ಬಿದ್ದು ಮೃತಪಟ್ಟಿರಬಹುದೆಂದು ಪೋಲಿಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಮೋರಿಯಲ್ಲಿ ಹೆಣ ಕಂಡ ಸಾರ್ವಜನಿಕರು ನಗರ ಠಾಣಾ ಪೋಲಿಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಪೋಲಿಸರು ಶವವನ್ನು ಮೋರಿಯಿಂದ ಮೇಲೆತ್ತಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….