ಕಲಬುರಗಿ, (ಫೆ.01); ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿನ ಶ್ರೀ ಮಲ್ಲಿಕಾರ್ಜುನ (ಮಲ್ಕಣ್ಣಪ್ಪ) ದೇವರ ಮೂರ್ತಿಯ ಪಲ್ಲಕ್ಕಿ ಉತ್ಸವ ಶ್ರದ್ಧಾಭಕ್ತಿಗಳಿಂದ ನೆರವೇರಿತು.
ಮೂರು ವರ್ಷಕ್ಕೊಮ್ಮೆ ನಡೆಯುವ ಉತ್ಸವವೂ ಬಹಳ ಸಡಗರಿಂದ ಆಚರಿಸಲಾಗುತ್ತದೆ.
ಉತ್ಸವದ ಅಂಗವಾಗಿ ದೇವಾಲಯದಲ್ಲಿನ ದೇವರಿಗೆ ರುದ್ರಾಬಿಷೇಕ, ವಿಶೇಷ ಅಲಂಕಾರ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಯಿತು.
ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಮುಂಜಾನೆ ಜರುಗಿದ ಮಲ್ಲಿಕಾರ್ಜುನ ದೇವರ ಮೂರ್ತಿಯುಳ್ಳ ಅಲಂಕೃತ ಪಲ್ಲಕ್ಕಿ ಯು ದೇವಸ್ಥಾನದ ಪ್ರದಕ್ಷಿಣೆ ಹಾಕುತ್ತಿದ್ದಾಗ ‘ಸುಗೂರ ಎನ್ ಗ್ರಾಮದ ಶ್ರೀ ಮಲ್ಲಿಕಾರ್ಜುನ ಮಹಾರಾಜ ಕೀ ಜೈ’ ಎಂಬ ಘೋಷಣೆ ಕೂಗುತ್ತಾ ಪಲ್ಲಕ್ಕಿಯಲ್ಲಿದ್ದ ಮೂರ್ತಿಯ ನೋಡಿ ಕಣ್ತುಂಬಿಕೊಂಡರಲ್ಲದೆ, ಪಲ್ಲಕ್ಕಿಯನ್ನು ಮುಟ್ಟಿ ನಮಸ್ಕರಿಸಿದರು.
ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಮಹಿಳೆಯರು ಕಳಸ ಹೊತ್ತರೆ, ಭಜನೆ, ಡೊಳ್ಳು, ಕೂಡೆ (ಚತ್ರಿ) ಹಾಗೂ ಭಗವ ದ್ವಜ ಮಕ್ಕಳ ಕೈಯಲ್ಲಿ ರಾರಾಜಿಸಿತು. ತಮಟೆ ವಾದ್ಯಗಳು ಸಂಭ್ರಮವನ್ನು ಇಮ್ಮಡಿಗೊಳಿಸಿದವು.
ಉತ್ಸವದಲ್ಲಿ ನೂರಾರು ಮಂದಿ ಭಾಗಿಯಾಗಿದ್ದು, ಪ್ರಸಾದ ವಿನಿಯೋಗ ಕೈಗೊಳ್ಳಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….