ಭುವನೇಶ್ವರ, (ಫೆ.05); ಐದನೇ ಮಹಿಳಾ ಪ್ರೊ ಲೀಗ್ ಹಾಕಿ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಎರಡನೇ ಲೀಗ್ ಹಾಕಿ ಪಂದ್ಯದಲ್ಲಿ ಭಾರತ ಮೊದಲ ಗೋಲು ಬಾರಿಸುವ ಮೂಲಕ ಬಿರುಸಿನ ಆರಂಭಿಸಿತು.
ಆರಂಭದಲ್ಲಿ ಅಬ್ಬರದ ಪ್ರರ್ದಶನ ತೋರಿದ ಆ ಬಳಿಕ ಒಂದೂ ಗೋಲು ಗಳಿಸಲಿಲ್ಲ. ಪಂದ್ಯದ ಅಂತ್ಯಕ್ಕೆ ನೆದರ್ಲೆಂಡ್ಸ್ ತಂಡ ಸತತ 3 ಗೋಲುಗಳು ಬಾರಿಸಿತು. ಈ ಮೂಲಕ 3-1 ಅಂತರದಿಂದ ಜಯ ಸಾಧಿಸಿತು.
ಚೀನಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತದ ವನಿತೆಯರಿಗೆ ಇದು ಎರಡನೇ ಸೋಲಾಗಿದೆ. ಈ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….