ಹಂಪಿ, (ಫೆ.05); 36 ವರ್ಷಗಳ ಬಳಿಕ ಮತ್ತೆ ಪ್ರೇಮಲೋಕ ಸಿನಿಮಾ ಮಾಡ್ತಾ ಇದ್ದೀನಿ. ಮುಂದಿನ ವರ್ಷಕ್ಕೆ ಆ ಸಿನಿಮಾವನ್ನು ನಿಮ್ಮ ಮುಂದೆ ಇಡುತ್ತೇನೆ ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಘೋಷಿಸಿದ್ದಾರೆ.
ಹಂಪಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಉತ್ಸವಕ್ಕೆ ಬರಲು 36 ವರ್ಷ ತಗೊಂಡಿದೆ. ಅಂದರೆ ಪ್ರೇಮಲೋಕ ಸಿನಿಮಾ ತೆರೆಕಂಡು 36 ವರ್ಷ ಆಗಿದೆ. ಈಗ ಮತ್ತೆ ಪ್ರೇಮಲೋಕ ಸಿನಿಮಾ ಆರಂಭಿಸುವ ವೇಳೆ ಹಂಪಿ ಉತ್ಸವ ನನ್ನನ್ನು ಕರೆಸಿಕೊಂಡಿದೆ.
ಪ್ರೇಮಲೋಕ ಸಿನಿಮಾ ಮಾಡಿ 36, 38 ವರ್ಷ ಆಯಿತು. ಆ ಒಂದು ಸಿನಿಮಾ ಇಂದಿಗೂ ಮೆಲುಕು ಹಾಕುತ್ತೆ ಎಂದರೆ.. ನಾವು ಮಾಡುವ ಒಳ್ಳೆಯ ಕೆಲಸ ನಮ್ಮನ್ನು ಎಷ್ಟು ವರ್ಷ ಬೇಕಾದ್ರೂ ಬದಕಿಸುತ್ತೆ ಎಂಬುದಕ್ಕೆ ಆ ಪ್ರೇಮಲೋಕನೆ ಸಾಕ್ಷಿ.
ಒಂದು ವರ್ಷದಿಂದ ಎಲ್ಲರೂ ನನ್ನನ್ನು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದುಕೊಳ್ಳುತ್ತಿದ್ದಾರೆ. ಆದರೆ ಸುಮ್ಮನೆ ಕುಳಿತಿಲ್ಲರೀ, ಮತ್ತೆ ಪ್ರೇಮಲೋಕವನ್ನು ಕಟ್ಟಿಕೊಡಲಿದ್ದೇನೆ. ಮತ್ತೆ ಮನೆ ಮನೆಯಲ್ಲಿ ನೀವು ಹಾಡು ಮೆಲುಕುಹಾಕಬೇಕು.
ನಾ ಗನ್ ಇಡ್ಕೋಂಡ್ ವೈಲೆನ್ಸ್ ಮಾಡ್ಕೊಂಡ್ ಬರಲ್ಲ. ನನಗೆ ಪ್ರೀತಿ ಮಾತ್ರ ಮಾಡೋದ್ ಗೊತ್ತು. ಇಲ್ಲಿಂದ ಒಂದ್ ಮಾತ್ ಕೊಟ್ ಹೋಗ್ತಿನಿ ಮುಂದಿನ ವರ್ಷಕ್ಕೆ ಪ್ರೇಮಲೋಕ ಸಿದ್ಧವಾಗುತ್ತೆ. ಧೈರ್ಯವಾಗಿ ಬಂದ್ ನಿಲ್ತಿನಿ. ನಿಮಗೆ ಇಷ್ಟವಾಗುವ ಸಿನಿಮಾವನ್ನೆ ಮಾಡ್ತಿನಿ.
ಈ ಸಿನಿಮಾ ಪ್ರತಿಮನೆಯಲ್ಲಿಯೂ ಮತ್ತೆ ಗುನುಗಬೇಕು.. ಕಡಿಮೆ ಹಾಡಿರಲ್ಲ ಬರೀ 20ರಿಂದ 25 ಹಾಡುಗಳಿರುತ್ತೆ. ನನಗೆ ಸಿನಿಮಾ ಮಾಡೋದ್ ಬಿಟ್ರೆ ಬೇರೆ ಗೊತ್ತಿಲ್ಲ. ಎಷ್ಟು ದುಡ್ ಹೋಗಲಿ, ಎಷ್ಟು ದುಡ್ ಬರಲಿ. ನಿಮ್ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದರು.
ಯಾವುದೇ ಕಾರ್ಯಕ್ರಮ ಯಶಸ್ವಿ ಆಗಬೇಕಾದರೆ ಆಯೋಜಕರ ಉದ್ದೇಶ ಪ್ರಮುಖವಾದದ್ದು. ಅದರಂತೆ ಸಚಿವರಾದ ಜಮೀರ್ ಅಹ್ಮದ್ ಅವರ ಕಾಳಜಿಯಿಂದ ಈ ಹಂಪಿ ಉತ್ಸವ ಅದ್ದೂರಿಯಾಗಿ ನಡೆಯುತ್ತಿದೆ.
ಹಬ್ಬಗಳ ಆಚರಣೆ ಮನೆಯ ಮಂದಿ ಒಂದಾಗಲು ಕಾರಣವಾದರೆ, ಹಂಪಿಯಂತ ಉತ್ಸವಗಳು ಊರುಗಳು ಒಂದಾಗಲೆಂದು. ನಾವೆಲ್ಲ ಒಟ್ಟಾಗಿದ್ದೇವೆ, ಒಂದಾಗಿದ್ದೇವೆ ಎಂಬುದನ್ನು ಸಾರಲು ನಡೆಯುತ್ತಿದೆ.
ಹಂಪಿ, ವಿಜಯನಗರ ಹೆಸರು ಸುಮ್ಮನೆ ಬಂದಿಲ್ಲ ಹೆಸರು ಹೇಳಿದ ತಕ್ಷಣ ರೋಮಾಂಚನವಾಗುತ್ತೆ. ಏಕೆಂದರೆ ಇಲ್ಲಿನ ಒಂದ್ ಒಂದು ಕಲ್ಲು. ಒಂದ್ ಒಂದು ಸ್ವರ ಹೇಳುತ್ತೆ. ಒಂದ್ ಒಂದು ಕಥೆ ಹೇಳುತ್ತೆ ಎಂದು ರವಿಚಂದ್ರನ್ ಪ್ರಶಂಸೆ ವ್ಯಕ್ತಪಡಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….