ಜಾರ್ಖಂಡ್, (ಫೆ.05); ದೇಶದ ಗಮನ ಸೆಳೆದಿದ್ದ ಜಾರ್ಖಂಡ್ ವಿಧಾನಸಭೆ ವಿಶ್ವಾಸಮತ ಯಾಚನೆಯಲ್ಲಿ ನೂತನ ಮುಖ್ಯಮಂತ್ರಿ ಚಂಪೈ ಸೊರೇನ್ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ತನ್ನ ಸರ್ಕಾರ ಸುಭದ್ರವಾಗಿರುವುದನ್ನು ಸಾಬೀತು ಪಡಿಸಿದ್ದಾರೆ.
ಮುಖ್ಯಮಂತ್ರಿ ಚಂಪೈ ಸೊರೆನ್ ಅವರ ನೇತೃತ್ವದ ಜಾರ್ಖಂಡ್ ಸರ್ಕಾರವು 47 ಶಾಸಕರು ಬಹುಮತದ ಬೆಂಬಲ ತೋರಿಸಿದರೆ, 29 ಶಾಸಕರು ವಿಪಕ್ಷ ಸದಸ್ಯರ ಬೆಂಬಲದಲ್ಲಿದ್ದರು.
ಒಟ್ಟು 81 ಸದಸ್ಯರ ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂ 29 ಶಾಸಕರನ್ನು ಹೊಂದಿದ್ದು ಮಿತ್ರ ಪಕ್ಷ ಕಾಂಗ್ರೆಸ್ 17 ಶಾಸಕರನ್ನು ಹೊಂದಿದೆ. ಆರ್‌ಜೆಡಿ ಮತ್ತು ಸಿಪಿಐ (ಎಂಎಲ್) ತಲಾ ಒಂದು ಶಾಸಕರನ್ನು ಹೊಂದಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು 41 ಶಾಸಕರ ಬೆಂಬಲದ ಅಗತ್ಯವಿತ್ತು.
ಫೆಬ್ರವರಿ 2ರಂದು ಚಂಪೈ ಸೊರೇನ್ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದು ಜಾರ್ಖಂಡ್ ರಾಜ್ಯಪಾಲ ಸಿಪಿ ರಾಧಾಕೃಷ್ಣನ್ ಅವರು ಚಂಪೈ ಸೊರೇನ್ ಅವರಿಗೆ ಮುಂದಿನ 10 ದಿನಗಳಲ್ಲಿ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಪ್ರದರ್ಶಿಸುವಂತೆ ಸೂಚಿಸಿದ್ದರು. ಅದರಂತೆ ಇಂದು ಚಂಪೈ ಸೊರೇನ್ ವಿಶ್ವಾಸ ಮತವನ್ನು ಸಾಬೀತು ಮಾಡಿದ್ದಾರೆ.
ಇದೇ ರೀತಿ ಬಿಹಾರದಲ್ಲಿಯೂ ಫೆ.12 ರಂದು ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಬಹುಮತ ಸಾಬೀತು ಪಡಿಸಬೇಕಿದೆ. ಅಂದು ಸಲೀಸಾಗಿ ಆಗುತ್ತಾ.. ಹೈ ಡ್ರಾಮಾ ನಡೆಯುತ್ತಾ ನೋಡಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….