ಚಿಕ್ಕಬಳ್ಳಾಪುರ, (ಫೆ.05); ನಾನೇ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಅಭ್ಯರ್ಥಿ, ಬಿಜೆಪಿ, ಜೆಡಿಎಸ್ ವರಿಷ್ಠರು ಬೆಂಬಲ ನೀಡಿದ್ದಾರೆಂದು ಪ್ರತಿಸ್ಪರ್ಧಿಗಳಿಗೆ ಬಿಸಿ ಮುಟ್ಟಿಸಿದ್ದ ಮಾಜಿ ಸಚಿವ ಡಾ.ಕೆ.ಸುಧಾಕರ್ ಏಕಾಏಕಿ ಮಾತಿನ ದಾಟಿ ಬದಲಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿ, ಲೋಕ ಸಭೆಯ ಎಲ್ಲ 543 ಕ್ಷೇತ್ರಗಳಲ್ಲೂ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಕಾರ್ಯನಿರ್ವಹಿಸಲಿರುವ ನರೇಂದ್ರ ಮೋದಿಯವರೇ ಅಭ್ಯರ್ಥಿ.
ತಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುವ ಬಯಕೆ ಎಲ್ಲೂ ವ್ಯಕ್ರಪಡಿಸಿಲ್ಲ. ಮಾಧ್ಯಮಗಳಿಗೂ ಹೇಳಿಲ್ಲ. ಆದರೆ ತಾವೇ ಸ್ಪರ್ಧಿಸಬೇಕೆಂದು ಒಂದೇ ಸಮನೆ ಒತ್ತಾಯಿಸುತ್ತಿರುವ ಅಭಿಮಾನಿ ಮತ್ತು ಬೆಂಬಲಿಗರನ್ನು ಸಮಾಧಾನಪಡಿಸಲು ಖಾಸಗಿ ಕಾರ್ಯಕ್ರಮದಲ್ಲಿ ಪೂರಕವಾಗಿದೆ ವಾತಾವರಣ, ಮಾಡೋಣ ಎಂದಿದ್ದೇನೆ. ಅದನ್ನು ಸಿರಿಯಸ್ ಆಗಿ ತಗೆದುಕೊಳ್ಳುವ ಅಗತ್ಯವಿಲ್ಲ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಹೊಂದಾಣಿಕೆಯಾಗಿದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಣಯದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ. 543 ಕ್ಷೇತ್ರಗಳಲ್ಲೂ ಪ್ರಧಾನಿ ಮೋದಿ ಅವರೇ ಅಭ್ಯರ್ಥಿ ಆ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….