ಬೆಂಗಳೂರು, (ಫೆ.16); ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳು (ಅಭಿಮಾನಿಗಳು) ರಾತ್ರಿಯಿಂದಲೇ ಅವರ ಮನೆಗೆ ಆಗಮಿಸಿ ಹುಟ್ಟುಹಬ್ಬ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಇದೇ ವೇಳೆ ವಿಶೇಷವಾಗಿ ದರ್ಶನ್ ನಟನೆಯ ‘ಡೆವಿಲ್’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ಕಾಟೇರ ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ದರ್ಶನ್ ನಟನೆಯ ಹೊಸ ಸಿನಿಮಾಗಳೂ ಘೋಷಣೆಯಾಗಿವೆ. ಪ್ರಕಾಶ್ ಜಯರಾಮ್ ನಿರ್ದೇಶನದ ‘ಡೆವಿಲ್’ ಚಿತ್ರೀಕರಣ ಶುರುವಾಗಿದೆ. ನಂತರ ಪ್ರೇಮ್ ನಿರ್ದೇಶನ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾ ಆರಂಭವಾಗಲಿದೆ.
ಹುಟ್ಟುಹಬ್ಬದ ಸಂದರ್ಭದಲ್ಲಿ ದರ್ಶನ್ ನಟನೆಯ 59ನೇ ಚಿತ್ರದ ಘೋಷಣೆಯೂ ಆಗಿದೆ. ಆ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಲಿದ್ದು, ಶೈಲಜಾ ನಾಗ್ ಮತ್ತು ಬಿ. ಸುರೇಶ್ ನಿರ್ಮಿಸಲಿದ್ದಾರೆ. ಈ ಸಿನಿಮಾದ ಮೂಲಕ ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್‌ನಲ್ಲಿ ಮೂರನೇ ಸಿನಿಮಾ ಬರಲಿದೆ.
ಮಧ್ಯರಾತ್ರಿ ವೇಳೆಗೆ ಅವರ ನಟನೆಯ ಮುಂದಿನ ಸಿನಿಮಾ ‘ಡೆವಿಲ್’ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಈ ಟೀಸರ್ ನೋಡಿದ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಹೊಸ ರೀತಿಯಲ್ಲಿ ಈ ಟೀಸರ್ ಮೂಡಿ ಬಂದಿದೆ. ಹಿಂದೆಂದೂ ನೋಡಿರದ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವವರು ಇಷ್ಟ ಆಗಿದ್ದಾರೆ.
ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್ ಎಂದು ಹೇಳಿ ದರ್ಶನ್ ಅವರು ಜೋರಾಗಿ ನಗುತ್ತಾರೆ. ಈ ಟೀಸರ್ ಗಮನ ಸೆಳೆದಿದೆ. ದರ್ಶನ್ ಹಾವ-ಭಾವ ಇಷ್ಟ ಆಗಿದೆ. ಅವರ ಲುಕ್ ಕೂಡ ಬೇರೆಯದೇ ರೀತಿಯಲ್ಲಿ ಇದೆ.
ಇಂದು ದರ್ಶನ್ ಚಿತ್ರರಂಗಕ್ಕೆ ಬಂದು 25 ವರ್ಷ ಆದ ಹಿನ್ನೆಲೆಯಲ್ಲಿ ಡಿ-ಪರ್ವ ಸಂಭ್ರಮಾಚರಣೆಯೂ ನಡೆಯಲಿದೆ.
ಡೆವಿಲ್ ಸಿನಿಮಾ ಟೀಸರ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….