ದೊಡ್ಡಬಳ್ಳಾಪುರ, (ಫೆ.16): ಹೆಚ್ಚುವರಿ ತೆರಿಗೆಯನ್ನು ವಿಧಿಸದೆ ಜನ ಸಾಮಾನ್ಯರ ಹಿತ ಕಾಪಾಡಿರುವ ಸರ್ವ ಸ್ಪರ್ಶಿ ಬಜೆಟ್ ಎನ್ನಬಹುದಾದರೂ.. ಜಿಲ್ಲಾ ಆಸ್ಪತ್ರೆಗೆ ಅನುದಾನ, ಜಿಲ್ಲಾ ಕೇಂದ್ರದ ಕುರಿತಂತೆ ಘೋಷಣೆ ಇಲ್ಲದೆ ಇರುವುದು ನಿರಾಸೆಯನ್ನುಂಟು ಮಾಡಿದೆ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಬೇಸರ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿ ಬಜೆಟ್ ಮೇಲೆ ಹರಿತಲೇಖನಿಗೆ ಪ್ರತಿಕ್ರಿಯೆ ನೀಡಿದ ಅವರು, ದೊಡ್ಡಬಳ್ಳಾಪುರ ಸೇರಿ ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ಮಾಗಡಿ ಮತ್ತು ಬಿಡದಿಯಲ್ಲಿ ರಸ್ತೆ ಮತ್ತು ರೈಲು ಸಂಪರ್ಕದೊಂದಿಗೆ ಉಪನಗರ ಟೌನ್‌ಶಿಪ್‌ಗಳನ್ನಾಗಿ (Satellite Townships) ಅಭಿವೃದ್ಧಿಪಡಿಸಲು ಘೋಷಿಸಿರುವುದು ಸಂತೋಷವಾಗಿದೆ.
ಸರ್ವ ಸ್ಪರ್ಶಿ ಬಜೆಟ್ ಆಗಿದೆ. ಜನ ಸಾಮಾನ್ಯರ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿಲ್ಲ. ಚುನಾವಣೆ ದೃಷ್ಟಿಯಿರಬಹುದು ಮತ್ತೊಂದೆ ಇರಬಹುದು. ಆದರೆ ಇದರಿಂದ ಸಾರ್ವಜನಿಕರಿಗೆ ಅನುಕೂಲಕವಾಗಲಿದೆ. ಮತ್ತೆ ಗ್ಯಾರಂಟಿ ಯೋಜನೆ ಚುನಾವಣೆ ನಂತರ ನಿಂತು ಹೋಗುತ್ತದೆ ಎಂಬ ವಿರೋಧ ಪಕ್ಷದ ಮಾತುಗಳಿಗೆ ಈ ಬಜೆಟ್ ಉತ್ತರ ನೀಡಿದೆ.
ಗ್ಯಾರಂಟಿ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಯೋಜನೆ ಮುಂದುವರಿಯಲಿದ್ದು, ಚುನಾವಣೆ ನಂತರ ಗ್ಯಾರಂಟಿ ಸ್ಥಗಿತವಾಗುತ್ತದೆ ಎಂಬ ಮಾತಿಗೆ ತೆರೆಬಿದ್ದಿದೆ. ಗ್ಯಾರಂಟಿ ಯೋಜನೆ ಉಪಯೋಗ, ದುರುಪಯೋಗದ ಕುರಿತು ನಾ ವಿಮರ್ಶೆ ಮಾಡಲ್ಲ ಕಾರಣ ಈಗಾಗಲೇ ಯೋಜನೆ ಚಾಲ್ತಿಯಲ್ಲಿದೆ.
ಈ ಎಲ್ಲದರ ನಡುವೆ ಬೇಸರದ ವಿಚಾರ ಎಂದರೆ.. ಎಲ್ಲಾ ಜಾಣ ತುಸುಕೋಣ ಎಂಬಂತೆ, ನಮಗೆ ಜಿಲ್ಲಾಸ್ಪತ್ರೆ, ಜಿಲ್ಲಾ ಕೇಂದ್ರದ ಕುರಿತಂತೆ ಯಾವುದೇ ಮಾತಿಲ್ಲದಿರುವುದು ನಿರಾಸೆ ತಂದಿದೆ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….