ಉತ್ತರ ಪ್ರದೇಶ, (ಫೆ.16); ಮನೆ ಕಟ್ಟಿ ನೋಡು.ಮದುವೆ ಮಾಡಿ ನೋಡು..ಎಂಬ ಗಾದೆಯನ್ನು ಹಿರಿಯರು ಹೇಳಿದ್ದಾರೆ. ಈ ಗಾದೆ ಮಾತಿನ ಮೊದಲನೇ ಭಾಗಕ್ಕೆ ಹರ್ಷದ್ ಎಂಬ ವ್ಯಕ್ತಿಯ ಮದುವೆ ಕಥೆ ಸಾಕ್ಷಿಯಾಗಿದೆ.
ಉತ್ತರ ಪ್ರದೇಶದ ಮೂಲದ 35 ವರ್ಷದ ಹರ್ಷದ್ ಮದುವೆ ಆದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. 3.7 ಅಡಿ ಎತ್ತರ ಇರುವ ಹರ್ಷದ್ ಕುಳ್ಳಗಿದ್ದಾನೆ ಎಂಬ ಕಾರಣಕ್ಕೆ ಹೆಣ್ಣು ಸಿಕ್ಕಿರಲಿಲ್ಲ. ಸತತ15 ವರ್ಷಗಳ ಆತನ ಕಾಯುವಿಕೆಗೆ ಕೊನೆಗೂ ಫಲ ಸಿಕ್ಕಿದ್ದು, 4 ಅಡಿ ಎತ್ತರದ ಸೋನಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಎತ್ತರದ ಕಾರಣಕ್ಕೆ ಯಾರು ಹೆಣ್ಣು ಕೊಟ್ಟಿರಲಿಲ್ಲ. ಈತ ಕುಳ್ಳಗಿರುವುದನ್ನು ಯಾರು ಎಷ್ಟೇ ಅಪಹಾಸ್ಯ ಮಾಡಿದರೂ ಸಂಗಾತಿ ಹುಡುಕುವ ಭರವಸೆ ಕಳೆದುಕೊಂಡಿರಲಿಲ್ಲವಂತೆ ಹರ್ಷದ್! ಆತನ ಛಲಕ್ಕೆ ನೆಟ್ಟಿಗರು ಹ್ಯಾಟ್ಸ್ ಆಫ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮದುವೆಯಾಗಲು ಹೆಣ್ಣು ಹುಡುಕಾಟ ಹೆಚ್ಚಾಗಿದೆ. ಎಲ್ಲವೂ ಸೌಖ್ಯವಾಗಿದ್ದವರಿಗೂ ಬೇಗನೆ ಹೆಣ್ಣು ಸಿಗುತ್ತಿಲ್ಲ ಎಂಬುದು ಬಹು ಚರ್ಚೆಯ ವಿಷಯ. ಏತನ್ಮಧ್ಯೆ, 15 ವರ್ಷ ಹುಡುಗಿಗಾಗಿ ಹುಡುಕಾಡಿ ಕೊನೆಗೆ ಮದುವೆಯಾಗಿದ್ದಾನೆ ಈತನ ತಾಳ್ಮೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….