ಚಿಕ್ಕಬಳ್ಳಾಪುರ, (ಮೇ.31); 2024-25ನೇ ಸಾಲಿನ ಶೈಕ್ಷಣಿಕ ವರ್ಷ ಶುಕ್ರವಾರದಿಂದ ಆರಂಭಗೊಂಡಿದ್ದು, ರಜಾ ಮಜದಿಂದ ಶಾಲೆಯತ್ತ ಮುಖ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕರು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಶಾಲಾರಂಭ ಕಾರ್ಯಕ್ರಮಕ್ಕೆ ಮೆರಗು ತಂದರು.
ಇಂದಿನಿಂದ ಶಾಲೆಗಳು ಆರಂಭಗೊಂಡಿದ್ದು, ಬೆಳಗ್ಗೆ ಶಾಲಾ ಆವರಣದಲ್ಲಿ ತಳಿರು ತೋರಣ ಕಟ್ಟಿ. ಹೂವುಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ ಶೃಂಗಾರ ಮಾಡಲಾಗಿತ್ತು. ಶಾಲಾ ಸಮವಸ್ತ್ರ ಧರಿಸಿ, ಸ್ನೇಹಿತರೊಂದಿಗೆ ಗುಂಪು ಗುಂಪಾಗಿ ಶಾಲೆಗೆ ಹೋಗುತ್ತಿದ್ದ ದೃಶ್ಯಗಳು ಕಂಡುಬಂತು.
ದಾಖಲಾತಿ ಆರಂಭ: ಬುಧವಾರದಿಂದಲೇ ಶಾಲೆಗಳು ತೆರೆದರೂ, ಎರಡು ದಿನಗಳ ಕಾಲ ಸಿದ್ಧತೆಗೆ ಅವಕಾಶ ನೀಡಲಾಗಿತ್ತು, ಶುಕ್ರವಾರ ದಾಖಲಾತಿ ನೀಡುವ ಕೆಲಸ ಆರಂಭವಾಗಿದೆ.
ಶಿಕ್ಷಕರ ಕೊಡುಗೆ; ಗೌರಿಬಿದನೂರು ತಾಲೂಕಿನ ಅಲಿಪುರ ಸರ್ಕಾರಿ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಎಂಟನೇ ತರಗತಿಗೆ ದಾಖಲಾದ ಮೊದಲ ವಿದ್ಯಾರ್ಥಿನಿ ನೆನಪು ಎಂಬುವವರಿಗೆ ಶಿಕ್ಷಕರು ನೋಟ್ ಪುಸ್ತಕ ಹಾಗೂ ಪೆನ್, ಪೆನ್ಸಿಲ್ ಗಳನ್ನು ಕಾಣಿಕೆಯಾಗಿ ನೀಡಿ ಶಾಲೆಗೆ ಸ್ವಾಗತ ಕೋರಿದರು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕಿ ವನಜಾಕ್ಷಮ್ಮ, ಸಹಶಿಕ್ಷಕರಾದ ಡಾ.ನವೀನ್ ಕುಮಾರ್, ಷಣ್ಮುಗ, ಅಂಜಿನಪ್ಪ, ಶಿವರಾಜ್ ಇದ್ದರು.
ಸಮವಸ್ತ್ರ ವಿತರಣೆ: ಶಾಲೆ ಆರಂಭವಾದ ಮೊದಲ ದಿನವೇ ಸರ್ಕಾರಿ ಶಾಲೆಗಳಲ್ಲಿ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ದಾಖಲಾಗಿರುವ ಹಾಗೂ ಮುಂದಿನ ತರಗತಿಗೆ ತೇರ್ಗಡೆಯಾಗಿರುವ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….