ದೊಡ್ಡಬಳ್ಳಾಪುರ, (ಮೇ.31): ತಾಲ್ಲೂಕಿನ ಮಧುರೆ ಹೋಬಳಿ ಕಮ್ಮಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದಾರಿಗೆ ಅಡ್ಡಲಾಗಿ ಚಪ್ಪಡಿ ಕಲ್ಲು ನಿಲ್ಲಿಸಿ ಬಂದ್ ಮಾಡಿದ್ದರಿಂದ ಶಾಲೆಗೆ ಬಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೀದಿಯಲ್ಲಿ ನಿಲ್ಲುವಂತಾಗಿದ್ದ ಮಾಧ್ಯಮಗಳ ವರದಿಗೆ ಹೆಚ್ಚೆತ್ತ ಅಧಿಕಾರಿಗಳು ಕಮ್ಮಸಂದ್ರ ಗ್ರಾಮಕ್ಕೆ ದೌಡಾಯಿಸಿ, ಶಾಲಾ ಮಕ್ಕಳನ್ನು ಶಾಲೆಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಲೆಗೆ ತೆರಳಲು ತನ್ನ ಜಮೀನಿನಲ್ಲಿ ದಾರಿ ಮಾಡಿಕೊಟ್ಟಿದ್ದ ರೈತ ಆ ರಸ್ತೆಯಲ್ಲಿ ಅಡ್ಡಲಾಗಿ ದೊಡ್ಡ ಚಪ್ಪಡಿ ಕಲ್ಲುಗಳನ್ನು ನೆಟ್ಟಿದ್ದಾನೆ. ಜಮೀನು ವಿವಾದದ ಕಾರಣದಿಂದ ರೈತ ಈ ಕ್ರಮ ಕೈಗೊಂಡಿದ್ದ.
ಎಲ್ಲೆಡೆ ಸರ್ಕಾರಿ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಸಿದ್ದರಾಗಿದ್ದಾರೆ. ಆದರೆ ಕಾಳಜಿ ಹೀನ ಅಧಿಕಾರಿಗಳಿಂದಾಗಿ ಸರ್ಕಾರಿ ಶಾಲೆಯ ಮಕ್ಕಳು ಬೀದಿಯಲ್ಲಿ ನಿಲ್ಲುವಂತಾಗಿದ್ದಲ್ಲದೆ, ರಾಜ್ಯಾದ್ಯಂತ ಶಾಲೆಗಳು ಆರಂಭವಾಗುತ್ತಿದ್ದರೆ, ಇಲ್ಲಿ ರಜೆ ಷೋಷಿಸಿರುವ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದರಿಂದ ಹೆಚ್ಚೆತ್ತ ಬಿಇಒ ಬೆಳಗ್ಗೆಯೇ ಗ್ರಾಮಕ್ಕೆ ದೌಡಾಯಿಸಿ, ಶಾಲೆಯ ಪಕ್ಕದ ಜಮೀನಿನ ಮೂಲಕ ಮಕ್ಕಳು ಶಾಲೆಗೆ ತೆರಳಲು ಅವಕಾಶ ನೀಡುವಂತೆ ತೋಟದ ಮಾಲೀಕರಿಗೆ ಮನವಿ ಮಾಡಿದರು, ಮಾಲೀಕ ಅನುಮತಿ ಬಳಿಕ ನಂತರ ಮಕ್ಕಳನ್ನು ಶಾಲೆಗೆ ಕಳುಹಿಸಿ, ಪಾಠ ಪ್ರವಚನಕ್ಕೆ ಅವಕಾಶ ಮಾಡಿಕೊಟ್ಟರು.
ನಂತರ ಸ್ಥಳಕ್ಕೆ ತಹಶಿಲ್ದಾರ್, ಬಿಇಒ, ತಾಪಂ ಇಒ ಮುಂತಾದ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆದಿದರು. ಕಲ್ಲು ನೆಟ್ಟಿದ್ದ ಜಮೀನಿನ ರೈತ ಸ್ಥಳಕ್ಕೆ ಬರದೆ ಇರುವ ಕಾರಣ ಪರ್ಯಾಯ ಮಾರ್ಗ ಹುಡುಕಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಎದರುರಾಯಿತು.
ಅಂತಿಮವಾಗಿ ಶಾಲೆಯ ಬಳಿಯಿರುವ ಹಳ್ಳಕ್ಕೆ ಸೇತುವೆ ನಿರ್ಮಿಸುವುದು, ಅಲ್ಲಿಯವರೆಗೆ ಇಂದಿನ ಅವಕಾಶ ನೀಡಲಾಗಿರುವ ತೋಟದ ಮೂಲಕವೇ ಮಕ್ಕಳು ಶಾಲೆಗೆ ತೆರಳಲು ನಿರ್ಣಯ ಕೈಗೊಳ್ಳಲಾಯಿತು.
ಅಲ್ಲದೆ ಶಾಲೆ ನಿರ್ಮಿಸಲು ಸೂಕ್ತ ಸರ್ಕಾರಿ ಸ್ಥಳವನ್ನು ಹುಡುಕುವಂತೆ ಕಂದಾಯ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….