ದೊಡ್ಡಬಳ್ಳಾಪುರ, (ಜುಲೈ.09); ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ, ಆರ್.ಎಲ್.ಜಾಲಪ್ಪ ಇನ್ಸ್ಟಿಟ್ಯೂಷನ್ಸ್ ಹಾಗೂ ಆರ್.ಎಲ್.ಜಾಲಪ್ಪ ವೈದ್ಯಕೀಯ ಮಹಾ ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಕೇಂದ್ರ, ಕೋಲಾರ ಇವರ ಸಹಯೋಗದೊಂದಿಗೆ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಕೋಲಾರದ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಈ ಶಿಬಿರವನ್ನು ಡಿಸ್ಟಿಕ್ ಛೇರ್ ಪರ್ಸನ್ ಫಾರ್ ಹೆಲ್ತ್ ರೂಲರ್ ಶಿವಕುಮಾರ್. ಆರ್ ಹಾಗೂ ಡಾ.ಕೈವಾರ ಶ್ರೀನಿವಾಸ್ ಅವರು ಚಾಲನೆಯನ್ನು ನೀಡಿದರು.
ಈ ಶಿಬಿರದಲ್ಲಿ 71 ಸಿಬ್ಬಂದಿಗಳಿಗೆ ಉಚಿತ ತಪಾಸಣೆಯನ್ನು ಮಾಡಿಸಲಾಯಿತು, ಅಗತ್ಯ ಇರುವವರಿಗೆ ಔಷಧವನ್ನು ವಿತರಿಸಲಾಯಿತು.
ಈ ವೇಳೆ ಅಧ್ಯಕ್ಷ ಲಯನ್ ರಾಕೇಶ್.ಜೆ., ಕಾರ್ಯದರ್ಶಿ ಲಯನ್ ಕೆಸಿ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಶ್ರೀನಿವಾಸ ರೆಡ್ಡಿ, ಶ್ರೀ ದೇವರಾಜ ಅರಸ್ ಅಂತರರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲ ಧನಂಜಯ್, ವ್ಯವಸ್ಥಾಪಕ ಎಸ್ ರವಿ ಕುಮಾರ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….