ಆಸ್ಪತ್ರೆ ಸಾಗಿಸುವ ವೇಳೆ ಅಣ್ಣನ ಹೆಗಲ ಮೇಲೆಯೇ ತಂಗಿ ಸಾವು!| ವೈರಲ್ ವಿಡಿಯೋ ನೋಡಿ

ಲಖಿಂಪುರ ಖೇರಿ, (ಜುಲೈ.12); ಉತ್ತರ ಪ್ರದೇಶದ ಕೆಲವೆಡೆ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಇದರ ನಡುವೆ ಲಖಿಂಪುರ ಖೇರಿಯಲ್ಲಿ ತ್ವರಿತ ಚಿಕಿತ್ಸೆ ದೊರಕದ ಕಾರಣ, ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಣ್ಣನ ಹೆಗಲ ಮೇಲೆಯೇ ತಂಗಿ ಸಾವನಪ್ಪಿರುವ ಘಟನೆ ವರದಿಯಾಗಿದೆ.. 

ಲಖಿಂಪುರ ಖೇರಿ ಜಿಲ್ಲೆಯಲ್ಲಿ ಹದಿಹರೆಯದ ಶಿವಾನಿ ಎಂಬ ಬಾಲಕಿ ಟೈಫಾಯಿಡ್​ನಿಂದ ಬಳಲಿದ್ದಾಳೆ. ಆದರೆ ಮಳೆಯಿಂದಾಗಿ ರಸ್ತೆಗಳು ಕೊಚ್ಚಿಹೊಗಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ಅಣ್ಣ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆ ತೆರಳಿದ್ದಾನೆ. ವಿಪರ್ಯಾಸ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮದ್ಯದಲ್ಲಿ ಶಿವಾನಿ ಕೊನೆಯುಸಿರೆಳೆದಿದ್ದಾಳೆ. 

ಮಳೆಯಿಂದಾಗಿ ಉತ್ತರ ಪ್ರದೇಶದ ಕೆಲವೆಡೆ ಪ್ರವಾಹ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಸಹ ಕೊಚ್ಚಿಹೋಗಿವೆ. ಇದರಿಂದಾಗಿ ಸಂಪರ್ಕ ಸಾಧಿಸುವುದು ಕಷ್ಟವಾಗಿದೆ.

ಹಾಗಾಗಿ ಸಹೋದರ ತನ್ನ ಸಹೋದರಿಗೆ ಚಿಕಿತ್ಸೆ ನೀಡಲು ಹೆಗಲ ಮೇಲೆ ಹೊತ್ತುಕೊಂಡು ಕಾಲು ದಾರಿಯಲ್ಲಿ ಸಾಗಿದ್ದಾನೆ. ಆದರೆ ಬಾಲಕಿ ಅಣ್ಣನ ಹೆಗಲ ಮೇಲೆಯೇ ಸಾವನ್ನಪ್ಪಿದ್ದಾಳೆ.

ಸದ್ಯ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣ ವೈರಲ್​ ಆಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!