ದೆಹಲಿ, (ಜುಲೈ.12); 1975ರ ಜೂನ್.25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದನ್ನು ಉಲ್ಲೇಖಿಸಿ ಜೂನ್.25ರಂದು ‘ಸಂವಿಧಾನ್ ಹತ್ಯಾ ದಿವಸ್ ಎಂದು ಆಚರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಘೋಷಿಸಿದೆ.
ಇದಕ್ಕೆ ಟಕ್ಕರ್ ನೀಡಿರುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ, ಹಿರಿಯ ನಾಯಕ ಜೈರಾಮ್ ರಮೇಶ್, ಈ ಬಾರಿಯ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್.4ರಂದು ಪ್ರಕಟವಾಗಿದ್ದು, ಆ ದಿನ ಬಿಜೆಪಿಗೆ ನಿರ್ಣಾಯಕ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲಾಗಿದೆ. ಸಂಪೂರ್ಣ ಬಹುಮತ ಕಾಣದ ಬಿಜೆಪಿಯು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ NDA ಮಿತ್ರಪಕ್ಷಗಳ ಬೆಂಬಲದಿಂದ ಸರ್ಕಾರ ರಚಿಸಿದ್ದಾರೆ.
ಇದು ಮೋದಿಯವರ ನೈತಿಕ ಸೋಲು ಎಂದು ಇಂಡಿಯಾ ಕೂಟ ಬಣ್ಣಿಸಿದ್ದು, ಆ ದಿನವನ್ನು ‘ಮೋದಿಮುಕ್ತಿ ದಿವಸ್ ಎಂದು ಆಚರಿಸಲಾಗುವುದು ಎಂದು ಹೇಳಿದೆ.
ಕಳೆದ 10 ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿ ಹೇರಿದ್ದ ಮೋದಿಯವರು, ‘ಜೈವಿಕ ಅಲ್ಲದ ಪ್ರಧಾನಿಯ ಬೂಟಾಟಿಕೆಯಲ್ಲಿ ಮತ್ತೊಂದು ಹೆಡ್‌ಲೈನ್-ಹಪಾಹಪಿ ಕಸರತ್ತು ನಡೆದಿದೆ’ ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….