ಮಂಡಿ, (ಜುಲೈ.12): ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಾಣಾವತ್, ಯಾರಾದರೂ ತಮ್ಮನ್ನು ಭೇಟಿ ಆಗಬೇಕಿದ್ದರೆ ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದಿದ್ದಾರೆ.
ನನ್ನ ಭೇಟಿ ಆಗಬೇಕಾದರೆ ಮಂಡಿ ಕ್ಷೇತ್ರದ ಮತದಾರರೇ ಆಗಿದ್ದರೂ ಭೇಟಿಗೆ ಬರುವ ವೇಳೆ ಅವರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯ ಎಂದು ಕಂಗನಾ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ವಿಕ್ರಮಾದಿತ್ಯ ಸಿಂಗ್ ಗುರುವಾರ ಬಿಜೆಪಿ ನಾಯಕಿ ಮತ್ತು ಮಂಡಿ ಸಂಸದೆ ಕಂಗನಾ ರಣಾವತ್ ವಿರುದ್ಧ ವಾಗ್ದಾಳಿ ನಡೆಸಿದರು, ನಂತರ ಯಾರಾದರೂ ತಮ್ಮ ಕೆಲಸವನ್ನು ಮಾಡಬೇಕಾದರೆ, ಅವರು ತಮ್ಮ ಆಧಾರ್ ಕಾರ್ಡ್‌ನ ಪ್ರತಿಯೊಂದಿಗೆ ಲಿಖಿತವಾಗಿ ಕಳುಹಿಸಬಹುದು ಎಂದು ಹೇಳಿದರು.
ಕಂಗನಾ ಅವರನ್ನು ಭೇಟಿಯಾಗಲು ಯಾರಿಗೂ ಆಧಾರ್ ಕಾರ್ಡ್ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕಿ ಕಂಗನಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ನನ್ನನ್ನು ಭೇಟಿಯಾಗಲು ಯಾರಿಗೂ ಆಧಾರ್ ಕಾರ್ಡ್ ಅಗತ್ಯವಿಲ್ಲ, ರಾಜ್ಯದ ಯಾವುದೇ ಮೂಲೆಯಿಂದ ಯಾರಾದರೂ ತಮ್ಮ ಕೆಲಸಕ್ಕಾಗಿ ನನ್ನನ್ನು ಭೇಟಿ ಮಾಡಬಹುದು” ಎಂದು ವಿಕ್ರಮಾದಿತ್ಯ ತಮ್ಮ ಫೇಸ್‌ಬುಕ್ ಹ್ಯಾಂಡಲ್‌ನಲ್ಲಿ ಬರೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಂಗನಾ ವಿರುದ್ಧ ಮಂಡಿಯಿಂದ ಸ್ಪರ್ಧಿಸಿದ್ದರು.
ಇನ್ನೂ ಕಂಗನಾ ಹೇಳಿಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ರೀತಿಯ ವರ್ತನೆಯಿಂದಲೇ ಭದ್ರತಾ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….