ಹೊಸನಗರ, (ಜುಲೈ.12): ಬೆಳಗ್ಗೆ ಹಾಸಿಗೆಯಿಂದ ಎದ್ದು ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋದ ಯುವಕನಿಗೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.
ರಿಪ್ಪನ್ ಪೇಟೆ ಬಳಿಯ ಗವಟೂರಿನ ಹಳೂರು ಗ್ರಾಮದ 19 ವರ್ಷದ ಕಾರ್ತಿಕ್ ಮೃತ ದುರ್ದೈವಿ.
ಬೆಳಗ್ಗಿನ ಮನೆ ಮುಂಭಾಗದಲ್ಲಿರುವ ಐಬಿಎಕ್ಸ್ ಬೇಲಿಯ ಬಳಿಯಲ್ಲಿ ಮೂತ್ರ ವಿಸರ್ಜನೆ ಮಾಡುವಾಗ ವಿದ್ಯುತ್ ಪ್ರವಹಿಸಿ ಬೇಲಿಯ ಮೇಲೆಯೇ ಕಾರ್ತಿಕ್ ಬಿದ್ದಿದ್ದಾನೆ.
ಇದನ್ನು ಗಮನಿಸಿದ ಮನೆಯವರು, ಸ್ಥಳೀಯರ ನೆರವಿನೊಂದಿಗೆ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ದುರದೃಷ್ಟವಶತ್ ಅಷ್ಟರಲ್ಲಾಗಲೇ ಕಾರ್ತಿಕ್ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ತಿಕ್ ಪ್ರಥಮ ವರ್ಷದ ಬಿಬಿಎ ಓದುತ್ತಿದ್ದ. ಸದ್ಯ ರಿಪ್ಪನ್‌ಪೇಟೆ ಠಾಣೆ ಸಿಬ್ಬಂದಿ, ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….