ದೊಡ್ಡಬಳ್ಳಾಪುರ, (ಜುಲೈ.21); ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ಜು.21 ರಂದು 11ನೇ ವರ್ಷದ ಗಿರಿ ಪ್ರದಕ್ಷಣೆ ನಡೆಯಲಿದೆ.
ಬೆಳಿಗ್ಗೆ 8.30ಕ್ಕೆ ಬೆಟ್ಟದ ತಪ್ಪಲಿನ ಗಣೇಶ ದೇವಾಲಯದಿಂದ ಪ್ರಾರಂಭವಾಗುವ ಗಿರಿ ಪ್ರದಕ್ಷಣೆ ಮಾಡೇಶ್ವರದ ಮೂಲಕ ಸಾಗಲಿದೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಗಿರಿ ಪ್ರದಕ್ಷಣೆ ಮುಕ್ತಾಯವಾದ ನಂತರ ಬೆಟ್ಟದ ತಪ್ಪಲಿನ ದಾಸೋಹ ಭವನದಲ್ಲಿ ಭಕ್ತಾಧಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಗಿರಿ ಪ್ರದಕ್ಷಣೆ ನಡೆಯುವ ಮಾರ್ಗ ಮಧ್ಯದಲ್ಲಿ ಮಜ್ಜಿಗೆ, ಪಾನಕ ವಿತರಣೆಯು ನಡೆಯಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….