ಬೆಂಗಳೂರು, (ಜುಲೈ.21); ನಗರ ಡಿಸಿಎಫ್ ರವೀಂದ್ರ ಸೂಚನೆಯ ಮೇರೆಗೆ ರಾಜ್ಯ ಅಪರಾಧ ನಿಯಂತ್ರಣ ಕೋಶ (ಜಾಗೃತ) ಹಾಗೂ ಕೆ ಆರ್ ಪುರಂ ಅರಣ್ಯ ವಲಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು ಕೋಟ್ಯಾಂತರ ರೂ ಮೌಲ್ಯದ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೆಆರ್ ಪುರಂ ಅರಣ್ಯ ವಲಯದ ಅರಣ್ಯಾಧಿಕಾರಿಗಳಾದ ರಘು, ಅಮೃತ್.ಎ., ದೇಸಾಯಿ, ಸಿದ್ದರಾಜು.ಟಿ., ಅಶ್ವಿನ್.ಎಂ.ಜೆ ಈ ಕಾರ್ಯಚರಣೆ ನಡೆಸಿದ್ದಾರೆ.
ಖಚಿತವಾದ ಮಾಹಿತಿಯ ಮೇರೆಗೆ ದೂರವಾಣಿ ನಗರದ ಐಟಿಐ ಕಾರ್ಖಾನೆಯ ಗೋದಾಮಿನ ಮೇಲೆ ದಾಳಿ ನಡೆಸಲಾಗಿದ್ದು, ಈ ವೇಳೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಸುಮಾರು ಎರಡು ವರೆಕೋಟಿ ಮೌಲ್ಯದ 4000kg ಶ್ರೀಗಂಧದ ಮರದ ತುಂಡುಗಳ ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಪ್ರಕರಣ ದಾಖಲು ಮಾಡಲಾಗಿದ್ದು, ಇಷ್ಟು ಬಾರಿ ಪ್ರಮಾಣದ ಗಂಧದ ಮರದ ತುಂಡುಗಳನ್ನು ದಾಸ್ತಾನು ಮಾಡಿದವರು ಯಾರು..? ಯಾವ ಕಾರಣಕ್ಕೆ ಎಂಬ ಮಾಹಿತಿ ತನಿಖೆಯ ನಂತರ ತಿಳಿದು ಬರಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….