ದೇವನಹಳ್ಳಿಗೆ ಬಂದ ಪ್ರಧಾನಿ ಸಹೋದರ ಸೋಮಭಾಯಿ ಮೋದಿ.. ಸಂಜೆ ಘಾಟಿ ಭೇಟಿ| ವಿಡಿಯೋ ನೋಡಿ

ಬೆಂಗಳೂರು, (ಜುಲೈ 21): ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಸೋಮಭಾಯಿ ಮೋದಿ ಅವರು ಇಂದು ಕರ್ನಾಟಕಕ್ಕೆ ಪ್ರವಾಸ ಕೈಗೊಂಡಿದ್ದಾರೆ. 

ಗುಜರಾತ್​ನಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೋಮಭಾಯಿ ಮೋದಿ ಅವರು ಬೆಂಗಳೂರಿನ ಯಲಹಂಕದಲ್ಲಿರುವ ಸಾಯಿಬಾಬಾ ದೇವಸ್ಥಾನ ಹಾಗೂ ಟ್ರಸ್ಟ್ ಉದ್ಘಾಟನೆಗೆ ಆಗಮಿಸಿದ್ದಾರೆ. 

ಮೊದಲು ಯಲಹಂಕದ ಸಾಯಿಬಾಬಾ ದೇವಸ್ಥಾನ ಮತ್ತು ಗಂಚಿ ಸಮಾಜ್ ಪೂರ್ಣೇಶ್ವರ್ ದಾಮ್ ಟ್ರಸ್ಟ್ ಗೆ ಭೇಟಿ ನೀಡಲಿದ್ದಾರೆ. 

ಸಂಜೆ 4ಗಂಟೆಗೆ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೂ‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!