ಬಸ್ ನಿಂದ ಕೆಳಗಿಳಿಸಿ 23 ಪ್ರಯಾಣಿಕರ ಕಗ್ಗೊಲೆ..!| ವಿಡಿಯೋ

ಬಲೂಚಿಸ್ತಾನ, (ಆಗಸ್ಟ್.26); ಖಾಸಗಿ ಬಸ್ ಒಂದನ್ನು ತಡೆದ ಉಗ್ರರು ಪ್ರಯಾಣಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿ ಕಗ್ಗೋಲೆಗೈದಿರುವ ಘಟನೆ  ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೋಮವಾರ ನಡೆದಿದೆ. 

ಈ ಮಾರಣಹೋಮದಲ್ಲಿ 23 ಮಂದಿ ಪ್ರಯಾಣಿಕರು ಹತರಾಗಿದ್ದಾರೆ.

ಬಲೂಚಿಸ್ತಾನದ ರಾರಾಶಾಮ್ ಪ್ರದೇಶದಲ್ಲಿರುವ ಮುಸಬೈಲ್ ನಲ್ಲಿ ಈ ಘಟನೆ ನಡೆದಿದೆ. 

ಮುಸಖೇಲ್‌ನ ರಾರಶಮ್ ಜಿಲ್ಲೆಯಲ್ಲಿ ದಾಳಿಕೋರರು ಪಂಜಾಬ್ ಪ್ರಯಾಣಿಕರು ಮತ್ತು ಟ್ರಕ್‌ಗಳ ಮೇಲೆ ಗುಂಡು ಹಾರಿಸುವ ಮೊದಲು ಅವರ ಗುರುತನ್ನು ಪರಿಶೀಲಿಸಲು ಬಸ್‌ನಿಂದ ಕೆಳಗಿಳಿಸಿದ್ದಾರೆ ಎಂದು ವರದಿಯಾಗಿದೆ. 

ಇದುವರೆಗೂ ಯಾವುದೇ ಉಗ್ರ ಸಂಘಟನೆ ಈ ಘಟನೆಯ ಜವಾಬ್ದಾರಿ ಹೊತ್ತುಕೊಂಡಿಲ್ಲ. ಸ್ಥಳಕ್ಕೆ ರಕ್ಷಣಾ ಪಡೆಗಳು ಹಾಗೂ ಆಂಬುಲೆನ್ಸ್ ಗಳು ತೆರಳಿ ಮೃತದೇಹಗಳ ರವಾನೆಯಲ್ಲಿ ತೊಡಗಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!