ಬೆಂಗಳೂರು, (ಆಗಸ್ಟ್.26); ರಾಜ್ಯ ರಾಜಕೀಯ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ನಡುವೆಯೇ, ಮತ್ತೆ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಕೆಡವಲು ‘ಆಪರೇಷನ್ ಕಮಲ’ದ ಆರೋಪಗಳು ಮುನ್ನೆಲೆಗೆ ಬಂದಿದ್ದು, ಬಿಜೆಪಿಯಿಂದ ಒಬ್ಬೊಬ್ಬ ಶಾಸಕರಿಗೆ ನೂರು ಕೋಟಿ ರುಪಾಯಿ ಆಫರ್ ಬಂದಿದೆ ಎನ್ನಲಾಗುತ್ತಿದೆ.
ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ, ಜೆಡಿಎಸ್ ಪ್ರಯತ್ನಿಸುತ್ತಿದೆ ಎನ್ನುವ ಕಾಂಗ್ರೆಸ್ ನಾಯಕರ ಆರೋಪದ ನಡುವೆಯೇ, ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ ಪ್ರಯತ್ನಿಸಲಾಗುತ್ತಿದೆ ಎನ್ನುವುದು ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕೆಲ ಶಾಸಕರು ಈ ವಿಷಯವನ್ನು ಬಹಿರಂಗಪಡಿಸಿದ್ದು, ಬಿಜೆಪಿಯ ನಾಯ ಕರು ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ, ನೂರು ಕೋಟಿ ಆಮಿಷ ಒಡ್ಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.
ಆಪರೇಷನ್ ಕಮಲಕ್ಕೆ ಮುಂದಾಗಿಲ್ಲ ಎನ್ನುವ ಬಿಜೆಪಿ ನಾಯಕರ ಹೇಳಿಕೆಯ ನಡುವೆಯೂ, ಶಾಸಕರೇ ಈ ರೀತಿಯ ಆರೋಪ ಮಾಡುತ್ತಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ 100 ಕೋಟಿಯವರೆಗೆ ಹಣದ ಆಮಿಷ ಒಡ್ಡುತ್ತಿದ್ದಾರೆ. ನಾವು ಇದಕ್ಕೆಲ್ಲ ಬಲಿ ಯಾಗಲ್ಲ’ ಎಂದು ಬಾಂಬ್ ಸಿಡಿಸಿರು ವುದು ರಾಜ್ಯ ರಾಜಕೀಯದಲ್ಲಿ ಸಂಚಲ ಮೂಡಿಸಿದೆ.
ಈ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್ ಸರಕಾರವನ್ನು ಬೀಳಿಸಲು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆ. ಆಪರೇಷನ್ ಕಮಲಕ್ಕಾಗಿ ಕಾಂಗ್ರೆಸ್‌ನ ಹಲವು ಶಾಸಕರನ್ನು ಸಂಪರ್ಕಿಸಿದ್ದಾರೆ. 50 ರಿಂದ 100 ಕೋಟಿವರೆಗೂ ಆಮಿಷ ಒಡ್ಡಿದ್ದಾರೆ.
ನನ್ನನ್ನೂ ದೂರವಾಣಿಯಲ್ಲಿ ಬಿಜೆಪಿ ನಾಯಕರೊಬ್ಬರು ಸಂಪರ್ಕಿಸಿ 100 ಕೋಟಿ ಕೊಡುತ್ತೇವೆ. ಆಪರೇಷನ್ ಕಮಲಕ್ಕೆ ರೆಡಿಯಾಗು ಎಂದು ಹೇಳಿದ್ದರು. ಆದರೆ ಇದಕ್ಕೆ ನಾನು ಇಡೀ ಫೋನು ನನ್ನ ಹತ್ರ ಇದೆಲ್ಲ ನಡೆಯಲ್ಲ. ನಮ್ಮೆ ಐಟಿ-ಇಡಿ ಎಂದೆಲ್ಲ ಹೆದರಿಸುತ್ತಿರಿ. ಈ ಆಪರೇಷನ್ ಕಮಲ ಮಾಡುತ್ತಿರುವ ನಿಮಗೆ ಐಟಿ-ಇಡಿ ಭಯ ಇಲ್ವಾ, ನಾನೇ ಫೋನ್ ಮಾಡಿ ಹೇಳುತ್ತೇನೆ ಎಂದು ಹೇಳಿದ ತಕ್ಷಣ 1 ಬಿಜೆಪಿ ನಾಯಕರು ಫೋನ್ ಕಟ್ ಮಾಡಿದರು ಎಂದು ಆರೋಪಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….