ಚಿತ್ರದುರ್ಗ, (ಆಗಸ್ಟ್.26): ಸೈಬರ್ ವಂಚಕರು ದಿನೇ ದಿನೇ ಹೊಸ ಹೊಸ ಮಾರ್ಗಗಳನ್ನ ಹುಡುಕಿಕೊಳ್ಳುತ್ತಾ ಇರುತ್ತಾರೆ. ಹಳೆಯ ಐಡಿಯಾದಲ್ಲಿ ಜನ ಅಲರ್ಟ್ ಆದರೆ ಅವರ ಬಳಿ ಇನ್ನಷ್ಟು ಐಡಿಯಾಗಳು ರೆಡಿ ಇರುತ್ತವೆ. ಆದರೆ ತಮಾಷೆ ಎಂದರೆ ಸೈಬರ್ ಕಳ್ಳರ ಬಗ್ಗೆ ಓದಿ, ತಿಳಿದುಕೊಂಡ ವಿದ್ಯಾವಂತರೆ ಮೋಸ ಹೋಗುತ್ತಾರೆ. ಕೆಲಸದ ಒತ್ತಡವೋ ಏನೋ ಸೈಬರ್ ವಂಚಕರು ಹೇಳಿದ ಮಾತನ್ನ ಬೇಗ ನಂಬಿ ಮೋಸ ಹೋಗುವ ಜನರೇ ಹೆಚ್ಚು. ಇದಿಒಗ ದುರ್ಗದಲ್ಲೂ ಅಂತದ್ದೇ ಘಟನೆ ನಡೆದಿದೆ. ಆದರೆ ಒಂದೆರಡು ಸಾವಿರ ಅಲ್ಲ ಬರೋಬ್ಬರಿ ಕೋಟಿ ಲೆಕ್ಕದಲ್ಲಿ ಹಣ ವಂಚಿಸಿದ್ದಾರೆ.
ಚಿತ್ರದುರ್ಗದಲ್ಲಿ ಹಿರಿಯ ವೈದ್ಯರಾಗಿದ್ದಾರೆ ಶ್ರೀನಿವಾಸ್ ಶೆಟ್ಟಿ. ಹಲವು ವರ್ಷಗಳಿಂದಾನೂ ಚಿತ್ರದುರ್ಗದಲ್ಲಿದ್ದಾರೆ. ಆದರೆ ಇವರಿಗೆ ಬಂದ ಒಂದೇ ಒಂದು ಕರೆಯಿಂದ 1 ಕೋಟಿ 27ಲಕ್ಷ ರೂಪಾಯಿ ಕಳೆದುಕೊಳ್ಳುವಂತೆ ಮಾಡಿದೆ.
ಆ ವಂಚಕರು ಹೇಳಿದ್ದು ಇಷ್ಟೆ. ನಾವೂ TRAI & ಮುಂಬೈ ಪೊಲೀಸರು ಎಂದು ಹೇಳಿದ್ದರು. ಪೊಲೀಸ್ ಹೆಸರು ಹೇಳಿದ ಕೂಡಲೇ ಡಾ.ಶೆಟ್ಟಿ ಅವರು ಮಾತಾಡುವುದಕ್ಕೆ ಶುರು ಮಾಡಿದರು. ಅದು ಆ ವಂಚಕರಿಗೆ ಸುಲಭ ಮಾರ್ಗವಾಯಿತು. ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿದ್ದರು.
ವಾಟ್ಸಪ್ ಕಾಲ್ & ನಾರ್ಮಲ್ ಕಾಲ್ ಮಾಡಿ ನಂಬಿಸಿದ್ದರು. ವೈದ್ಯರು ಅವರೇಳಿದ ನಿಯಮಗಳನ್ನು ಪಾಲನೆ ಮಾಡುತ್ತಾ ಹೋದರು. ಇದರಿಂದ ಡಾ.ಶೆಟ್ಟಿ ಅವರ ಖಾತೆಯಿಂದ ವಂಚಕರ ಖಾತೆಗೆ 1ಕೋಟಿ 27ಲಕ್ಷ ಹಣ ವರ್ಗಾವಣೆಯಾಗಿತ್ತು.
ಆಮೇಲೆ ತಾವೂ ಮೋಸ ಹೋಗಿರುವುದು ಡಾ.ಶೆಟ್ಟಿಗೆ ತಿಳಿದಿದೆ. ಈ ಘಟನೆ ಶುಕ್ರವಾರ ನಡೆದಿದ್ದು ಶನಿವಾರ ಈ ಸಂಬಂಧ ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….