ದೊಡ್ಡಬಳ್ಳಾಪುರ, (ಆಗಸ್ಟ್.26); ತಾಲೂಕಿನ ಮೆಳೇಕೋಟೆ ಕ್ರಾಸ್‍ನ ಶ್ರೀ ಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ಗ್ರಾಮೀಣ ಶಾಲೆಯಲ್ಲಿ (ಎಸ್.ಜೆ.ಸಿ.ಆರ್) ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.
ನರ್ಸರಿ ಹಂತದ ವಿದ್ಯಾರ್ಥಿಗಳು ಕೃಷ್ಣ ಹಾಗೂ ರಾಧೆ ವೇಷಧರಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಗಳಾದ ಮೆಳೆಕೋಟೆ ಗ್ರಾಮ ಪಂಚಾಯತಿಯ ಪಿಡಿಒ ಗಂಗಬೈರಪ್ಪ ಹಾಗೂ ಮಠದ ಭಕ್ತರಾದ ರಾಜಶೇಖರವರು ನೆರವೇರಿಸಿದರು.
ಈ ವೇಳೆ ಮಾತನಾಡಿದ ಪಿಡಿಒ ಗಂಗಭೈರಪ್ಪ, ಕಾಲಕ್ಕೆ ತಕ್ಕಂತೆ ಮಕ್ಕಳ ಬಗ್ಗೆ ಹಾಗೂ ಅವರ ಶಿಕ್ಷಣದ ಬಗ್ಗೆ ಪೋಷಕರು ಹೆಚ್ಚು ಕಾಳಜಿ ವಹಿಸಿ ಉತ್ತಮ ರೀತಿಯಲ್ಲಿ ಬೆಳಸಿ ಎಂದು ತಿಳಿಸಿದರು.
ರಾಜಶೇಖರ್ ಮಾತನಾಡಿ, ಇತ್ತೀಚಿನ ದಿನಗಳಲಿ ಚಿಕ್ಕ ಮಕ್ಕಳು ಮೊಬೈಲ್‍ಗೆ ಹೆಚ್ಚು ಅವಲಂಬಿತರಾಗಿದ್ದಾರೆ, ಆದಷ್ಟು ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಮುನ್ನಡೆಯಲು ಪೋಷಕರು ಸಹಕರಿಸಿ ಎಂದು ತಿಳಿಸಿದರು.
ಎಲ್‌ಕೆಜಿ ಹಾಗೂ ಯೂಕೆಜಿಯ ಮಕ್ಕಳು ಶ್ರೀ ಕೃಷ್ಣನ ಅವತಾರ ಹಾಗೂ ಲೀಲೆಗಳ ಬಗ್ಗೆ ತಿಳಿಸಿದರು. ಆ ನಂತರ ಶ್ರೀ ಕೃಷ್ಣನ ಹಾಡಿಗೆ ನೃತ್ಯ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ಹೆಚ್.ಎಲ್.ವಿಜಯಕುಮಾರ್, ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….