ಬೆಂಗಳೂರು, (ಆಗಸ್ಟ್.26): ಕ್ಯಾಬ್ ಚಾಲಕರೊಬ್ಬರು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮಗನ ಮೃತದೇಹದ ಮುಂದೆ ಕಣ್ಣೀರಿಡುತ್ತಾ ತಾಯಿಯೂ ಸಹ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವೇರಿಪುರದಲ್ಲಿ ನಡೆದಿದೆ.
ಅರುಣ್ ಕುಮಾರ್ (37) ಆತ್ಮಹತ್ಯೆಗೆ ಶರಣಾದ ಕ್ಯಾಬ್ ಚಾಲಕ. ಸರಸ್ವತಿ (78) ಮೃತ ತಾಯಿ, ಕ್ಯಾಬ್ ಚಾಲಕನಾಗಿದ್ದ ಅರುಣ್ ಕುಮಾರ್ ಸಾಲ ಮಾಡಿಕೊಂಡಿದ್ದರು. ಅಲ್ಲದೆ ಕಳೆದ 1 ವರ್ಷದ ಹಿಂದೆ ಬೆನ್ನುಮೂಳೆ ಮುರಿತಕ್ಕೊಳಗಾಗಿದ್ದ ತಾಯಿ ಹಾಸಿಗೆ ಹಿಡಿದಿದ್ದರು. ಸಹೋದರರು ಬೇರೆಡೆ ವಾಸವಿದ್ದುದರಿಂದ ತಾಯಿಯ ಯೋಗ ಕ್ಷೇಮವನ್ನ ತಾನೇ ನೋಡಿಕೊಳ್ಳುತ್ತಿದ್ದ ಅರುಣ್ ಕುಮಾರ್ ಖಿನ್ನತೆಗೊಳಗಾಗಿದ್ದರು.
ಭಾನುವಾರ ಮಧ್ಯಾಹ್ನ ಡೆತ್‌ನೋಟ್ ಬರೆದಿಟ್ಟು, ಮನೆಯ ರೂಮಿನಲ್ಲಿ ಅರುಣ್‌ಕುಮಾರ್ ನೇಣಿಗೆ ಶರಣಾಗಿದ್ದಾರೆ. ಬಳಿಕ ಮಗನ ಮೃತದೇಹದ ಮುಂದೆ ತಾಯಿಯೂ ಕೊನೆಯುಸಿರೆಳೆದಿದ್ದಾರೆ.
ಮೃತನ ಸಹೋದರ ನೀಡಿರುವ ದೂರಿನನ್ವಯ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ವರದಿಯಾಗಿದೆ.
ಅರುಣ್ ತಾಯಿ ಸರಸ್ವತಿ ಒಂದು ವರ್ಷದ ಹಿಂದೆ ಬಿದ್ದು ಬೆನ್ನಿನ ಮೂಳೆ ಮುರಿದುಕೊಂಡಿದ್ದರು. ಹಾಗಾಗಿ ಬೆಡ್ ರೆಸ್ಟ್ ನಲ್ಲಿದ್ದರು. ಕುಮಾರ್‌ಗೆ ಸಹೋದರರು ಕೂಡ ಇದ್ದಾರೆ, ಆದರೆ ತಾಯಿಯ ಕಷ್ಟದ ದಿನದಲ್ಲಿ ನೆರಳಾಗೊ ಬದಲು ಮನೆಯಿಂದಲೇ ದೂರ ಹೋಗಿದ್ದರು.
ತಾಯಿಯ ಸಂಪೂರ್ಣ ಜವಾಬ್ದಾರಿ ಅರುಣ್ ಮೇಲೆಯೇ ಇತ್ತು. ಹಾಗಾಗಿ ಒಂದು ವರ್ಷದಿಂದ ತಾನೇ ತಾಯಿಯ ಆರೈಕೆ ಮಾಡುತ್ತಿದ್ದ. ಜತೆಗೆ ಕ್ಯಾಬ್ ಕೂಡ ಓಡಿಸುತ್ತಿದ್ದ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….