ದೊಡ್ಡಬಳ್ಳಾಪುರ, (ಆಗಸ್ಟ್ 28): ಬೆಡ್ಡಿಂಗ್ ತುಂಡಾಗಿ ಗೇರ್ ಬಾಕ್ಸ್ ಎದೆ ಮೇಲೆ ಬಿದ್ದ ಪರಿಣಾಮ ಕ್ಯಾಂಟರ್ ಕೆಳಗೆ ದುರಸ್ತಿ ಮಾಡುತ್ತಿದ್ದ ಮೆಕ್ಯಾನಿಕ್ ಸಾವನಪ್ಪಿರುವ ಘಟನೆ ತಾಲೂಕಿನ ಹಮಾಮ್ ಬಳಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಪಾಲನಜೋಗಹಳ್ಳಿ ನಿವಾಸಿ 51 ವರ್ಷದ ಮನ್ಸೂರ್ ಷಾ ಎಂದು ಗುರುತಿಸಲಾಗಿದೆ.
ಮಂಗಳವಾರ ಕ್ಯಾಂಟರ್ ಇಂಜಿನ್ ಜಾಕ್ ಬಳಸಿ ಮೇಲಕ್ಕೆ ಎತ್ತಿ ಗೇರ್ ಬಾಕ್ಸ್ ರಿಪೇರಿ ಮಾಡುವಾಗ ಆಕಸ್ಮಿಕವಾಗಿ ಗೇರ್ ಬಾಕ್ಸಿನ ಬೆಡ್ಡಿಂಗ್ ತುಂಡಾಗಿ ಕ್ಯಾಂಟರ್ ಕೆಳಗೆ ಅಂಗಾತ ಮಲಗಿದ್ದ ಮನ್ಸೂರ್ ಷಾ ಅವರ ಮೇಲೆ ಬಿದ್ದಿದ್ದು, ಕಿವಿ ಮತ್ತು ಮೂಗಿನಿಂದ ರಕ್ತ ಸ್ತ್ರಾವವಾಗಿದೆ.
ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರು, ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.
ಮೃತ ಮನ್ಸೂರ್ ಅವರು ಮಡದಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….