ದೊಡ್ಡಬಳ್ಳಾಪುರ, (ಆಗಸ್ಟ್.29): ಹೊಲಕ್ಕೆ ಹೋಗುವ ದಾರಿ ವಿಚಾರಕ್ಕೆ 20ಕ್ಕೂ ಹೆಚ್ಚು ಜನರೊಂದಿಗೆ ಮನೆಗೆ ನುಗ್ಗಿ ಗೋಪಾಲ್ ನಾಯಕ್ ಎಂಬಾತ ಹಲ್ಲೆ ನಡೆಸಿದ್ದಾರೆ ಎಂದು ತಾಲ್ಲೂಕಿನ ಮೇಲಿನ ನಾಯಕರಂಡನಹಳ್ಳಿ ಗ್ರಾಮದ ಅಶ್ವತಮ್ಮ ಮತ್ತು ಸುಬ್ರಮಣಿ ಎಂಬುವವರು ದೂರು ನೀಡಿದ್ದಾರೆ.
ಗೋಪಾಲ್‌ನಾಯಕ್ ಅವರ ಜಮೀನಿಗೆ ರಸ್ತೆ ಸಮಸ್ಯೆಯಿದ್ದು, ಸುಮಾರು ದಿನಗಳಿಂದ ಜಗಳ ನಡೆಯುತ್ತಲೇ ಇದೆ ಎನ್ನಲಾಗಿದೆ.
ಪೊಲೀಸ್ ಠಾಣೆಯಲ್ಲಿ ಪರಸ್ಪರ ಇಬ್ಬರು ದೂರು ದಾಖಲಿಸಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗಿ ದೌರ್ಜನ್ಯ ನಡೆಸಲಾಗಿದೆ. ಮಹಿಳೆ ಮಕ್ಕಳು ಎನ್ನದೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಗಲಾಟೆಯಿಂದಾಗಿ ಗಾಯಗೊಂಡಿರುವ ಅಶ್ವತಮ್ಮ,ಸುಬ್ರಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸಾಧಿಕ್ ಪಾಷಸ್ಥಳ ಪರಿಶೀಲನೆ ನಡೆಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….