ದೊಡ್ಡಬಳ್ಳಾಪುರ, (ಆಗಸ್ಟ್.31): ಕಡೇ ಶ್ರಾವಣ ಶನಿವಾರದ ಅಂಗವಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದ ದೇವಾಲಯಗಳಲ್ಲಿ ವಿಶೇಷ ಪೂಜೆ ಅಲಂಕಾರ, ಪ್ರಸಾದ ವಿನಿಯೋಗ ನಡೆಯುತ್ತಿದ್ದು, ಭಕ್ತರ ದಂಡೆ ಹರಿದು ಬರುತ್ತಿದೆ.
ಪ್ರತಿ ಶ್ರಾವಣ ಶನಿವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕಡೆಯ ವಾರವಾದ ಹಿನ್ನೆಲೆಯಲ್ಲಿ ಕೆಲ ದೇವಾಲಯಗಳಲ್ಲಿ ಅನ್ನಸಂತರ್ಪಣೆಯೂ ನಡೆಯುತ್ತಿದೆ.
ತಾಲೂಕಿನ ಮಧುರೆ ಹೋಬಳಿಯಲ್ಲಿರುವ ಚಿಕ್ಕಮಧುರೆ (ಕನಸವಾಡಿ) ಪುಣ್ಯಕ್ಷೇತ್ರದ ಶ್ರೀ ಶನಿಮಹಾತ್ಮ ದೇವಾಲಯ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರ ವಿಶೇಷ ಪೂಜೆಗಳು ಆರಂಭವಾಗಿವೆ.
ಕನಸವಾಡಿಯಲ್ಲಿನ ಇತಿಹಾಸ ಪ್ರಸಿದ್ದ ಶನಿಮಹಾತ್ಮ ಸ್ವಾಮಿ ದೇವಾಲಯ, ತಾಲೂಕಿನ ಅರಳುಮಲ್ಲಿಗೆಯ ಲಕ್ಷ್ಮೀ ಚೆನ್ನಕೇಶವಸ್ವಾಮಿ ದೇವಾಲಯ, ನಗರದ ನೆಲದಾಂಜನೇಯಸ್ವಾಮಿ ದೇವಾಲಯ, ಖಾಸ್‍ಬಾಗ್‍ನ ರಥಸಪ್ತಮಿ ಶನೇಶ್ವರ ದೇವಾಲಯ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ.
ವೆಂಕಟರಮಣಸ್ವಾಮಿ ದೇವಾಲಯ, ರಾಜಘಟ್ಟದ ಆಂಜನೇಯಸ್ವಾಮಿ ದೇವಾಲಯು, ಹೊಸಹಳ್ಳಿಯ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ, ಮಲ್ಲೋಹಳ್ಲಿ ರಂಗನಾಥಸ್ವಾಮಿ ದೇವಾಲಯ ಮೊದಲಾದ ಕಡೆ ಶ್ರಾವಣ ಮಾಸದ ಅಂಗವಾಗಿ ಬೆಳಗಿನ ಜಾವ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.
ತಾಲೂಕಿನ ಕನಸವಾಡಿ ಪುಣ್ಯಕ್ಷೇತ್ರದ ಶನಿಮಹಾತ್ಮ ದೇವಾಲಯದಲ್ಲಿ ಬೆಳಗ್ಗೆ 3 ಗಂಟೆಯಿಂದಲೇ ಸಾಲಿನಲ್ಲಿ ನಿಂತ ಸಾವಿರಾರು ಭಕ್ತಾದಿಗಳು ಶ್ರೀ ಶನಿಮಹಾತ್ಮಸ್ವಾಮಿ ಹಾಗೂ ಜೇಷ್ಠಾದೇವಿಯ ದರ್ಶನ ಪಡೆಯುತ್ತಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….