ಹರಿತಲೇಖನಿ ದಿನಕ್ಕೊಂದು ಕಥೆ: ಒಳ್ಳೆಯ ಮನಸ್ಸು

ಏರ್ ಹೋಸ್ಟೇಸ್‌ರನ್ನು ಕರೆದು ಫ್ಲೈಟ್‌ನಲ್ಲಿ ಸೀಟು ಬದಲಾಯಿಸು ಎಂದು ಕೇಳಿದಳು ಒಬ್ಬ ಮಹಿಳೆ.. ಆದರೆ ಆಕೆ ಏನು ಮಾಡಿದಳು ಗೊತ್ತಾ..?

ತುಂಬಿದ್ದ ವಿಮಾನದೊಳಕ್ಕೆ ಸುಂದರವಾದ ಪ್ರಯಾಣಿಕಳೊಬ್ಬಳು ಪ್ರವೇಶಿಸಿ ತನ್ನ ಸೀಟಿಗಾಗಿ ಹುಡುಕಾಡಿದಳು.

ಎರಡೂ ಕೈಗಳು ಇಲ್ಲದ ಒಬ್ಬ ವ್ಯಕ್ತಿಯ ಪಕ್ಕ ತನ್ನ ಸೀಟು ಇರುವುದನ್ನು ನೋಡಿ, ಆತನ ಪಕ್ಕದಲ್ಲಿ ಕೂರಲು ಯೋಚಿಸುತ್ತಿದ್ದಳು!! ಆ “ಸುಂದರವಾದ ಮಹಿಳೆ” ಏರ್ ಹೋಸ್ಟೆಸ್‍ಳನ್ನು ಕರೆದಳು.

“ನಾನು ಇಲ್ಲಿ ಕೂತು ಸುಖವಾಗಿ ಪ್ರಯಾಣ ಮಾಡಲು ಸಾಧ್ಯವಾಗಲ್ಲ. ನನ್ನ ಸೀಟನ್ನು ಬದಲಾಯಿಸುತ್ತೀರಾ?” ಎಂದು ಕೇಳಿದಳು.

“ಮೇಡಂ! ದಯವಿಟ್ಟು ಕಾರಣ ತಿಳಿದುಕೊಳ್ಳಬಹುದಾ?” ಕೇಳಿದಳು ಏರ್ ಹೋಸ್ಟೆಸ್. 

ಇಂತಹವರೆಂದರೆ ನನಗೆ ಅಸಹ್ಯ. ಇವರ ಪಕ್ಕ ಕುಳಿತು ಪ್ರಯಾಣಿಸುವುದು ನನಗಿಷ್ಟವಿಲ್ಲ” ಎಂದಳು ಆ ಸುಂದರ ಮಹಿಳೆ. ನೋಡಲು ಸುಂದರವಾಗಿ – ಅಂದವಾಗಿ- ಸಭ್ಯಳಂತೆ ಕಾಣಿಸುತ್ತಿದ್ದರೂ ಆಕೆ ಬಾಯಿಂದ ಬಂದ ಈ ಮಾತನ್ನು ಕೇಳಿ ಏರ್ ಹೋಸ್ಟೆಸ್ ತುಂಬಾ ಚಕಿತಗೊಂಡಳು.

ಆ ಸುಂದರವಾದ ಮಹಿಳೆ ಮತ್ತೆ ತನಗೆ “ಈ ಸೀಟು ಬೇಡ ಬೇರೆ ಸೀಟು ಬೇಕೆಂದು ಡಿಮ್ಯಾಂಡ್ ಮಾಡಿದಳು.” “ಸ್ವಲ್ಪ ಹೊತ್ತು ಸಂಯಮದಿಂದ ಇರಿ. ನಾನು ನಿಮ್ಮ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ” ಎಂದು ಏರ್ ಹೋಸ್ಟೆಸ್ ಎಲ್ಲಿಯಾದರೂ ಸೀಟು ಖಾಲಿ ಇದೆಯೇನೋ ಎಂದು ಹುಡುಕಿದಳು. ಆದರೆ ಎಲ್ಲೂ ಸಿಗಲಿಲ್ಲ.

ಆ ಏರ್ ಹೋಸ್ಟೆಸ್ ಮತ್ತೆ ಬಂದು “ಮೇಡಂ! ಈ ಎಕನಾಮಿ ಕ್ಲಾಸ್‍ನಲ್ಲಿ ಸೀಟುಗಳೆಲ್ಲಾ ಸಂಪೂರ್ಣ ತುಂಬಿಹೋಗಿವೆ ಆದರೂ ನಮ್ಮ ವಿಮಾನದಲ್ಲಿ ಪ್ರಯಾಣಿಸುವ ವ್ಯಕ್ತಿಗಳು ಕಂಫರ್ಟ್‍ಗಾಗಿ ಸಂಪೂರ್ಣವಾಗಿ ಪ್ರಯತ್ನಿಸುವ ಪಾಲಸಿ ನಮ್ಮದು. ಕ್ಯಾಪ್ಟನ್ ಜತೆಗೆ ಮಾತನಾಡಿ ಬಂದು ಹೇಳುತ್ತೇನೆ ಸ್ವಲ್ಪ ತಾಳ್ಮೆಯಿಂದ ಇರಿ.” ಎಂದು ಕ್ಯಾಪ್ಟನ್ ಬಳಿಗೆ ಹೋದಳು.

ಕೆಲವು ಕ್ಷಣಗಳ ಬಳಿಕ ಮತ್ತೆ ಬಂದು “ಮೇಡಂ! ನಿಮಗುಂಟಾದ ಅಸೌಖರ್ಯಕ್ಕೆ ಚಿಂತಿತರಾಗಿದ್ದೇವೆ. ಈ ವಿಮಾನದ ಫಸ್ಟ್ ಕ್ಲಾಸ್‌ನಲ್ಲಿ ಒಂದೇ ಒಂದು ಸೀಟು ಖಾಲಿ ಇದೆ ನಮ್ಮವರ ಜತೆ ಮಾತನಾಡಿ ಒಂದು ಅಸಾಮಾನ್ಯ ನಿರ್ಧಾರ ತೆಗೆದುಕೊಂಡೆವು.

ಎಕನಾಮಿ ಕ್ಲಾಸ್‌ನಲ್ಲಿನ ವ್ಯಕ್ತಿಯನ್ನು ಫಸ್ಟ್ ಕ್ಲಾಸ್‌ಗೆ ಕಳುಹಿಸುತ್ತಿರುವುದು ನಮ್ಮ ಕಂಪೆನಿ ಇತಿಹಾಸದಲ್ಲೇ ಮೊದಲು.

ಆ ಸುಂದರವಾದ ಮಹಿಳೆ ಖುಷಿಯಾಗಿ ಏನೋ ಹೇಳುವ ಹೊತ್ತಿಗೆ. ಏರ್ ಹೋಸ್ಟೆಸ್ ಆಕೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯೊಂದಿಗೆ..!

ಸಾರ್..! ದಯವಿಟ್ಟು ಎಕನಾಮಿ ಕ್ಲಾಸ್ ನಿಂದ ಫಸ್ಟ್ ಕ್ಲಾಸ್‌ ಒಳಗೆ ಬರುತ್ತೀರಾ? ಸಂಸ್ಕಾರ ಗೊತ್ತಿಲ್ಲದ ವ್ಯಕ್ತಿ ಪಕ್ಕದಲ್ಲಿ ಕುಳಿತು ಪ್ರಯಾಣಿಸುವ ದುರದೃಷ್ಟವನ್ನು ನಾವು ನಿಮಗೆ ತಪ್ಪಿಸಬೇಕೆಂದಿದ್ದೇವೆ.” ಎಂದಳು

ಏರ್ ಹೋಸ್ಟೆಸ್ ಮಾತುಗಳನ್ನು ಕೇಳಿದ ಉಳಿದ ಪ್ರಯಾಣಿಕರೆಲ್ಲರೂ ಒಮ್ಮೆಲೆ. ಚಪ್ಪಾಳೆ ತಟ್ಟುತ್ತಾ ಆ ನಿರ್ಧಾರವನ್ನು ಸ್ವಾಗತಿಸಿದರು. ಆ ಸುಂದರವಾದ ಮಹಿಳೆ ಮುಖ ಬಾಡಿಹೋಯಿತು. ಆಗ ಆ ವ್ಯಕ್ತಿ ಎದ್ದು ನಿಂತು. ನಾನೊಬ್ಬ ಮಾಜಿ ಸೈನಿಕ.

ಕಾಶ್ಮೀರ್ ಬಾರ್ಡರ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ನನ್ನ ಎರಡೂ ಕೈಗಳನ್ನು ಕಳೆದುಕೊಂಡೆ. ಮೊದಲು ಈಕೆಯ ಮಾತುಗಳನ್ನು ಕೇಳಿದ ಬಳಿಕ ಇಂತಹವರಿಗಾಗಿಯೇ ನಮ್ಮ ಜೀವನವನ್ನು ಪಣವಾಗಿ ಇಟ್ಟಿದ್ದು’ ಎನ್ನಿಸಿತು. ಆದರೆ, ನಿಮ್ಮೆಲ್ಲರ ಪ್ರತಿಕ್ರಿಯೆ ನೋಡಿದ ಬಳಿಕ ದೇಶಕ್ಕಾಗಿ ನನ್ನ ಎರಡು ಕೈಗಳು ಕಳೆದುಕೊಂಡಿದ್ದಕ್ಕೆ ಹೆಮ್ಮೆ ಪಡುತ್ತಿದ್ದೇನೆ” ಎಂದು ಪ್ರಯಾಣಿಕರ ಚಪ್ಪಾಳೆ ನಡುವೆ ಫಸ್ಟ್ ಕ್ಲಾಸ್‌ನೊಳಕ್ಕೆ ಹೊರಟುಹೋದರು.

ಆ ಸುಂದರವಾದ ಮಹಿಳೆ ಎರಡು ಸೀಟ್‌ಗಳಲ್ಲಿ ಒಬ್ಬಳೇ ನಾಚಿಕೆಯಿಂದ ಕುಸಿದುಬಿದ್ದಳು. ಸೌಂದರ್ಯ ಎಂದರೆ ಕಣ್ಣಿಗೆ ಕಾಣಿಸುವ ಮುಖದಲ್ಲೋ, ಮೆನುವಿನಲ್ಲೋ ಅಲ್ಲ…

ಉನ್ನತವಾದ ಆಲೋಚನೆಗಳು ಉನ್ನತವಾದ ಭಾವನೆಗಳು ಇರುವ ಒಳ್ಳೆಯ ಮನಸ್ಸಿನಲ್ಲಿ ಇರುತ್ತದೆ.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ: ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="112771"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!