ತೆಲಂಗಾಣ, (ಸೆ.02); ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹೈದರಾಬಾದ್‌ನಲ್ಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಮೆಹಬೂಬಾದ್‌ನ ಮರಿಪೇದಾ ಮಂಡಲ್‌ನಲ್ಲಿನ ಸೇತುವೆ ಮೇಲೆ ಸಾಗುವಾಗ ಕಮ್ಮಮ್ ಜಿಲ್ಲೆ ಗಂಗಾರಾಂ ತಾಂಡಾದ ನಿವಾಸಿಯಾದ ನುನಾವತ್ ಮೋತಿ ಲಾಲ್ ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋದರೆ, ಅವರ ಮಗಳು ನುನಾವತ್ ಅಶ್ವಿನಿ ನೀರಿನಲ್ಲಿ ಮುಳುಗಿ ಜೀವತೆತ್ತಿದ್ದಾರೆ.
ರಾಜ್ಯದಲ್ಲಿನ ಎಲ್ಲಾ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪರಿಣಾಮ ಕಮ್ಮಮ್ ಜಿಲ್ಲೆಯೊಂದರಲ್ಲೇ 110 ಗ್ರಾಮ ಗಳು ಜಲಾವೃತವಾಗಿವೆ. ರಾಜ್ಯದಲ್ಲಿನ ಸಂಚರಿಸುವ 99 ರೈಲುಗಳನ್ನು ರದ್ದುಗೊಳಿಸಲಾಗಿದೆ. ರಾಜ್ಯದ ಬಹುತೇಕ ಕಡೆ ಜನಜೀವನ ಪೂರ್ಣ ಅಸ್ತವ್ಯಸ್ತವಾಗಿದೆ.
ಶಾಲೆಗಳಿಗೆ ರಜೆ: ಹುಸೇನ್ ಸಾಗರ ಸೇರಿದಂತೆ ಬಹಳಷ್ಟು ಜಲಾಶಯಗಳು ಭರ್ತಿ ಯಾಗಿದ್ದು, ಗೇಟ್‌ಗಳನ್ನು ತೆರೆದು ಹೆಚ್ಚುವರಿ ನೀರನ್ನು ಹೊರಹರಿಸಲು ಆರಂಭಿಸುವ ಮೊದಲು ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪರಿಸ್ಥಿತಿ ಗಮನಿಸಿ ಹೈದರಾಬಾದ್‌ನ ಎಲ್ಲಾ ಶಾಲೆಗಳಿಗೂ ಸೋಮವಾರ ರಜೆ ಘೋಷಿಸಲು ತೆಲಂಗಾಣ ಸರಕಾರ ಆದೇಶಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮುಂದಿನ ದಿನಗಳಲ್ಲಿಯೂ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಸನ್ನದ್ದ ಸ್ಥಿತಿಯಲ್ಲಿರುವಂತೆ ತೆಲಂಗಾಣ ಆಡಳಿತಕ್ಕೆ ಭಾರತೀಯ ಹವಮಾನ ಮುನ್ಸೂಚನೆ ನೀಡಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….