ದೊಡ್ಡಬಳ್ಳಾಪುರ, (ಸೆ.07); ಮೊದಲ ದಿನ ಅಮ್ಮ ಗೌರಮ್ಮನನ್ನು ಪೂಜಿಸಿದರೆ, ಮರುದಿನ ಅಂದರೆ ಶನಿವಾರ ಗೌರಿಪುತ್ರ, ವಿಘ್ನ ನಿವಾರಕ ಗಣೇಶನ ಪೂಜೆ.
ಹಲವರು ಗಣೇಶನನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮನೆ ಮನೆಗಳಲ್ಲಿ ಕೆಲವರು ಗಣಪನನ್ನು ಪ್ರತಿಷ್ಠಾಪಿಸಿದರೆ, ರಸ್ತೆಗೊಂದರಂತೆ ಗಣೇಶೋತ್ಸವ ಸಮಿತಿ ಗಳಿಂದ ವಿಶೇಷವಾಗಿ ಗಣೇಶನನ್ನು ಪ್ರತಿಷ್ಠಾಪಿಸಿ ಇಡೀ ಬಡಾವಣೆಯ ಜನರನ್ನು ಸೇರಿಸಿಕೊಂಡು ಹಬ್ಬ ಆಚರಿಸಲು ಅಣಿಯಾಗಿದ್ದಾರೆ.
ಹಲವೆಡೆ ವಿಶೇಷ ವೇದಿಕೆಯನ್ನು ನಿರ್ಮಿಸಲಾಗುತ್ತಿತ್ತು. ಮಣ್ಣಿನ ಗಣಪತಿ, ಪೇಪರ್ ಗಣಪತಿ ಸೇರಿದಂತೆ ಹಲವರು ಪರಿಸರ ಸ್ನೇಹಿ ಗಣಪನನ್ನು ಕೂರಿಸಲು ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.
ಪ್ರತಿಷ್ಠಾಪನೆಗೆ ಶುಭಕಾಲ: ಭಾದ್ರಪದ ಶುಕ್ಲಪಕ್ಷ ಚತುರ್ಥಿ ದಿನಾಂಕ 7-9-2024 ಶನಿವಾರ ಶ್ರೀ ವರಸಿದ್ಧಿ ವಿನಾಯಕ ವ್ರತಾಚರಣೆ. ಬೆಳಗ್ಗೆ 8 ರಿಂದ 8.30 ಅಥವಾ ಬೆಳಗ್ಗೆ 10.40 ರಿಂದ 11.00 ಗಂಟೆಯೊಳಗೆ ಪ್ರತಿಷ್ಠಾಪನೆಗೆ ಶುಭಕಾಲ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….