ದೊಡ್ಡಬಳ್ಳಾಪುರ, (ಸೆ.07); ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಗೌರಿ ಹಬ್ಬ ಶುಕ್ರವಾರ ಅತ್ಯಂತ ಸಂಭ್ರಮದಿಂದ ನಡೆಯಿತು.
ನಗರದ ಗಲ್ಲಿ ಗಲ್ಲಿಗಳಲ್ಲಿ ಮಣ್ಣಿನ ಗೌರಿ-ಗಣೇಶನ ಮೂರ್ತಿಗಳ ಮಾರಾಟ ಎಲ್ಲೆಡೆ ಕಳೆಗಟ್ಟಿತ್ತು. ಕೆಲವರು ಗುರುವಾರ ಸಂಜೆಯೇ ಮೂರ್ತಿಗಳನ್ನು ಮನೆಗೆ ತಂದಿದ್ದರೆ, ಇನ್ನು ಕೆಲವರು ಶುಕ್ರವಾರ ಬೆಳಗ್ಗೆಯೇ ಮೂರ್ತಿಗಳನ್ನು ಮನೆಗೆ ತಂದು ಪೂಜಿಸಿದರು.
ಕಳಸ ಇಡುವ ಸಂಪ್ರದಾಯವುಳ್ಳವರು ದೇವಿಗೆ ಸಂಪ್ರದಾಯಬದ್ದವಾಗಿ ಕಳಸವಿಟ್ಟು ಸೀರೆ-ಕುಪ್ಪಸ ದೊಂದಿಗೆ ಗೌರಿಯನ್ನು ಬಗೆ ಬಗೆಯ ಹೂವು, ಹಣ್ಣು ಗಳಿಂದ ಅಲಂಕರಿಸಿದ್ದರು. ರಾಹುಕಾಲಕ್ಕೆ ಮುನ್ನವೇ ಮಹಾಮಂಗಳಾರತಿ “ ಮಾಡಿ ಗೌರಿಗೆ ಬಾಗೀನ ಅರ್ಪಿಸಿದರು.
ಗಂಡನ ಮನೆಯಿಂದ ತವರು ಮನೆಗೆ ಆಗಮಿಸಿದ್ದ ಹೆಣ್ಣು ಮಕ್ಕಳಿಗೆ ಬಾಗೀನ ನೀಡಿದರು. ಸಂಜೆ ಕೂಡ ದೀಪ ಹಚ್ಚಿ ವಿದ್ಯುದ್ದೀಪಗಳಿಂದ ದೇವರ ಗುಡಿಯನ್ನು ಅಲಂಕರಿಸಿ ಆರತಿ ಬೆಳಗಿ ಮುತ್ತೈದೆಯರಿಗೆ ಅರಿಶಿನಿ-ಕುಂಕುಮದ ಬಾಗೀನ ನೀಡಲಾಯಿತು.
ಮಕ್ಕಳು, ಮಹಿಳೆಯರು ರೇಷ್ಮೆ ಬಟ್ಟೆಗಳನ್ನು ಧರಿಸಿ ನೆರೆ ಹೊರೆಯವರ ಮನೆಗಳಿಗೆ ಭೇಟಿ ನೀಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಹಬ್ಬದವೆಂದರೆ ಸಿಹಿ ಅಡುಗೆಗಳು ಪ್ರಧಾನವಾಗಿರುತ್ತವೆ. ಹೀಗಾಗಿ ಕೆಲವರು ಘಮ ಘಮ ಹೋಳಿಗೆ ಮಾಡಿದರೆ, ಇನ್ನು ಕೆಲವರು ಪಾಯಸ ಇತ್ಯಾದಿಗಳೊಂದಿಗೆ ಹಬ್ಬದ ಅಡುಗೆ ಮಾಡಿ ಸವಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….