ದೊಡ್ಡಬಳ್ಳಾಪುರ, (ಸೆ.12): ಮಗನೇ ತಾಯಿಯ ಕುತ್ತಿಗೆ ಚುಚ್ಚಿ ಕೊಂದಿರುವ ಘಟನೆ ತಾಲೂಕಿನ ಮುದ್ದನಾಯಕನಹಳ್ಳಿ ಬಳಿ ಎರಡು ದಿನಗಳ ಹಿಂದೆ ನಡೆದಿದೆ. ರತ್ನಮ್ಮ (56 ವರ್ಷ) ತನ್ನ ಮಗನಿಂದಲೇ ಕೊಲೆಯಾದ ದುರ್ದೈವಿ.
ಮಗ ಗಂಗರಾಜು ದುಷ್ಕೃತ್ಯ ಎಸಗಿರುವ ಆರೋಪಿ. ಕುಡಿದ ಮತ್ತಿನಲ್ಲಿದ್ದ ಗಂಗ ರಾಜು ಜಗಳ ತೆಗೆದು ತನ್ನ ತಾಯಿಯ ಕತ್ತನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿ ಯಾಗಿದ್ದ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಪ್ರಕಟವಾದ ಮಾಧ್ಯಮ ವರದಿಯ ನೋಡಿ ದುಃಖವಾಯಿತು ಎತ್ತ ಸಾಗುತ್ತಿದೆ ಸಮಾಜ? ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು? ದೇಹ ಉಸಿರು ನೀಡ ಜನ್ಮಕೊಟ್ಟ ತಾಯಿ ದೇವರಿಗೆ ಎನ್ನುತ್ತದೆ ಸನಾತನ ಧರ್ಮ ಅಂಥ ಮಾತುಗಳೆ ಸುಳ್ಳಾಗುತ್ತಿದೆ ಎಂದು ಹಿರಿಯ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್ ಖಾತೆಯಲ್ಲಿ ಈ ಕುರಿತು ತಮ್ಮ ತಾಯಿ ಫೋಟೋ ಮತ್ತು ಸೀರೆಯನ್ನು ಶೇರ್ ಮಾಡಿರುವ ಅವರು, ವರದಿಯ ನೋಡಿ ದುಃಖವಾಯಿತು ಎತ್ತ ಸಾಗುತ್ತಿದೆ ಸಮಾಜ? ಇನ್ನೆಂಥ ದುರ್ದಿನ ಕಾದಿದೆ ಮುಂದೆ ನೋಡಲು? ದೇಹ ಉಸಿರು ನೀಡ ಜನ್ಮಕೊಟ್ಟ ತಾಯಿ ದೇವರಿಗೆ ಎನ್ನುತ್ತದೆ ಸನಾತನ ಧರ್ಮ ಅಂಥ ಮಾತುಗಳೆ ಸುಳ್ಳಾಗುತ್ತಿದೆ.
ಇದಕ್ಕೆಲ್ಲಾ ಕಾರಣ ಯಾಂತ್ರಿಕ ಚಿಂತನೆ ಸಸಿಯಲ್ಲೆ ಸರಿಮಾಡದ ಮರ ಹೆಮ್ಮರವಾದಾಗ ಸರಿಮಾಡಲಾಗುತ್ತದೆಯೇ? ಮಕ್ಕಳಿಗೆ ಭಯವಿಲ್ಲದೆ ಮುದ್ದು ತಿದ್ದಲಾಗದ ವಿದ್ಯಾಲಯ ನಮಗ್ಯಾಕೆ ಎನ್ನುವ ಸಮಾಜ.ಜಗತ್ತೆ ಮೊಬೈಲ್ ಆದ ದಿನಗಳು ಆಡುವ ವಯಸಲ್ಲಿ ವ್ಯೆಸನ ಹಣದ ಬೆಲೆ ಅರಿಯದವರ ಹಟಕ್ಕೆ ವಾಹನ ಕೊಡುಗೆ ಅವನಿಗಿದೆ ನನಗಿಲ್ಲಾ ಎಂಬ ದ್ವೇಷಗುಣ ಬೆವರು ಹರಿಸದೆ ಎಲ್ಲಾ ಸೌಲತ್ತು ಬೇಕೆಂಬ ಆಸೆ.
ತಾತ ಅಜ್ಜಿ ಅತ್ತೆಮಾವ ದೊಡ್ಡಪ್ಪ ಚಿಕಪ್ಪ ಸಂಬಂಧ ಅರಿವಿರದ ಒಡೆದ ಕುಟುಂಬದ ಕಂದಮ್ಮಗಳು ದೇವರು ಧರ್ಮದ ಭಯ ಆಚರಣೆ ಇಲ್ಲದ ಜೀವನದಲ್ಲಿ ಎಲ್ಲಿಂದ ಸುಸಂಸ್ಕೃತ ಜೀವಗಳು ಹುಟ್ಟಿ ವಂಶ ಬೆಳಗಬಲ್ಲವು?
ತಾಯಿಗಾಗಿ ಅವಳ ಸಂತಸಕ್ಕಾಗಿ ಬಾಳಿದ ನಮಗೆ 29ವರ್ಷಕ್ಕೆ ಅಮ್ಮನ ಕಳೆದುಕೊಂಡ ನತದೃಷ್ಟ ನಾನು.. ಅಮ್ಮ ಹಾಕಿದ ಗೆರೆ ಕಲಿಸಿದ ನೀತಿಪಾಠ ಕೈತೊರಿದ ದೇವರ ಪಾದ,ಕಲಿಸಿದ ನೀತಿ ಗುರುಹಿರಿಯರ ಮೇಲಿನ ಭಕ್ತಿ, ಬದುಕಿನ ಹಾಗು ಸಮಾಜದ ಮೇಲಿನ ಭಯ ನಮ್ಮ ಬದುಕಿನ ನಿತ್ಯ ಪೂಜೆಯಂತೆ ಆಚರಣೆ ನನ್ನ 62ನೆ ವಯಸ್ಸಲ್ಲು ಪಾಲಿಸಿ ಅಮ್ಮನ ವಸ್ತುಗಳು ದೇವರ ಕೋಣೆಯಲ್ಲಿ ದೇವರ ಸಮವಾಗಿ ಪೂಜಿಸುತ್ತೇನೆ ಎಂದಿದ್ದಾರೆ.
ಅಮ್ಮನನ್ನೆ ಕೊಲೆಮಾಡಿದ ಮಗ ಎಂದು ಓದಿ ಭಾವುಕನಾಗಿ ನನ್ನ ದಿನಚರಿ ಕಾರ್ಯವೆ ಮರೆತು ಸ್ನಾನ ಪೂಜೆ ಇಲ್ಲದೆ ಶವದಂತೆ ಕೂತುಬಿಟ್ಟೆ!! ತಾಯಿ ದೇವರು ಎಂದವರಿಗೆ ತಾಯಿ ಇಲ್ಲಾ ಗೌರವಿಸದಿರುವವರಿಗೆ ತಾಯಿ ಎಂಥ ವಿಚಿತ್ರ ದೇವರ ಲೀಲೆ.
ಒಂದಂತು ಸತ್ಯ ತಂದೆತಾಯಿ ನೋಯಿಸಿದವರು ನರಕ ಇಲ್ಲೆ ಅನುಭವಿಸುತ್ತಾರೆ ಮಾತೃದೇವೋಭವ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–