ರಾಮನಗರ, (ಸೆ.13); ಪಾಪ ಕುಮಾರಸ್ವಾಮಿ ಅವರು ಮಾತನಾಡೋದೆ ಹಾಗೆ.! ಅವರ ಮಾತಿಗೂ, ಕೃತಿಗೂ ಒಂದಕ್ಕೊಂದು ಹೋಲಿಕೆಯಾಗಲ್ಲ, ಕುಮಾರಸ್ವಾಮಿ ಎಲ್ಲಿ ಹೋದರೂ, ಬೆಂಕಿ ಹಚ್ಚೋದೆ ಕೆಲಸ. ಅವರ ಕೆಲಸವೇ ಅದು ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ಮಾಡಿದ್ದಾರೆ.
ಮಾಗಡಿ ಪಟ್ಟಣದಲ್ಲಿ ಆಯೋಜಿಸಿದ್ದ ವಿವಿಧ ಅಭಿವ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾಗಮಂಗಲದ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆಯು ಕಾಂಗ್ರೆಸ್ ಪ್ರಾಯೋಜಿತ ಎಂದು ಎಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆಗೆ ಕಿಡಿಕಾರಿದರು.
ಕುಮಾರಸ್ವಾಮಿ ಅವರು ಯಾವತ್ತೂ ಅಭಿವೃದ್ಧಿ ವಿಚಾರವಾಗಿ ಮತ ಕೇಳಿಲ್ಲ, ಅವರಿಗೆ ಬೆಂಕಿ ಹಚ್ಚೋದೇ ಕೆಲಸ, ಅವರ ಕೆಲಸವೇ ಅದು, ಕಡ್ಡಿ ಇಲ್ಲದೆ ಬೆಂಕಿ ಹಚ್ಚುತ್ತಾರೆ ಎಂದು ವ್ಯಂಗ್ಯ ವಾಡಿದರು.
ಸಂಸದರಾದ 24 ಗಂಟೆ ಒಳಗೆ ಮೇಕೆದಾಟು ಯೋಜನೆಗೆ ಅನುಮತಿ ಕೊಡುತ್ತೆವೆ. ಮೋದಿಯವರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡುತ್ತೆವೆ ಎಂದಿದ್ದರು. ಮೊದಲು ಆ ಕೆಲಸ ಮಾಡಲಿ ಎಂದು ಕಿಡಿಕಾರಿದರು.
ಚನ್ನಪಟ್ಟಣ ಉಪಚುನಾವಣೆ ಹಿನ್ನಲೆ ಗಲಭೆ ಮಾಡಿದ್ದಾರೆ ಎಂಬ ಎಚ್ಡಿಕೆ ಹೇಳಿಕೆಯು ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಕುಮಾರಸ್ವಾಮಿ ಬೆಂಕಿ ಇಡುವ ಕೆಲಸ ಮಾಡುವುದನ್ನು ಮೊದಲು ಬಿಡಲಿ. ನಾಗಮಂಗಲದ ಗಲಭೆ ಪ್ರಕರಣವನ್ನು ಕುಮಾರಸ್ವಾಮಿ ಅವರೇ ತನಿಖೆ ಮಾಡಲಿ. ಅವರನ್ನೆ ತನಿಖಾಕಾರಿಯನ್ನಾಗಿ ನೇಮಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ನಾನೆ ಮನವಿ ಮಾಡುತ್ತೆನೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಯಾವತ್ತೂ ಒಂದು ಧರ್ಮದ ಓಲೈಕೆ ಮಾಡಿಲ್ಲ, ಧರ್ಮದ ವಿಚಾರದಲ್ಲಿ ಯಾರೇ ತೊಂದರೆ ಕೊಟ್ಟರೂ ಸಹಿಸುವುದಿಲ್ಲ. ಗಲಭೆ ಪ್ರಕರಣಕ್ಕೆ ರಾಜಕೀಯ ತಿರುವು ಕೊಡುತ್ತಿರುವುದು ನಾವಲ್ಲ. ಕೆಲ ಮಾಧ್ಯಮ ಹಾಗೂ ವಿಪಕ್ಷಗಳು ಈ ಪ್ರಕರಣವನ್ನು ರಾಜಕೀಯವಾಗಿ ವಿಶ್ಲೇಷಿಸುತ್ತಿದೆ.
ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆ ಆಗಲಿ. ಎಚ್ಡಿಕೆ ತನಿಖೆಯಿಂದಲೇ ಎಲ್ಲವು ಬಯಲಾಗಲಿ. ಯಾವುದೇ ಒಂದು ಧರ್ಮವನ್ನು ಓಲೈಕೆ ಮಾಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಧರ್ಮದ ವಿಚಾರದಲ್ಲಿ ಯಾರೇ ತೊಂದರೆ ಕೊಟ್ಟರೂ ಸಹಿಸುವುದಿಲ್ಲ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….