ಬೆಂಗಳೂರು, (ಸೆ.12): ಈ ಬಾರಿಯ ಮಹಾಲಯ ಅಮಾವಾಸ್ಯೆಯಂದೇ ಗಾಂಧಿಜಯಂತಿ (ಅ.2) ಇರುವ ಹಿನ್ನೆಲೆಯಲ್ಲಿ ಪಿತೃಗಳಿಗೆ (ಹಿರಿಯರಿಗೆ) ಮಾಂಸಾಹಾರದ ನೈವೇದ್ಯ ನೀಡಲು ಸಮಸ್ಯೆ ಎದುರಾಗುವುದರಿಂದ ವಿಶೇಷ ಸಂದರ್ಭವೆಂದು ಪರಿಗಣಿಸಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟ ನಿಷೇಧಿಸದಂತೆ ಜಯಪ್ರಕಾಶ ನಾರಾಯಣ ವಿಚಾರ ವೇದಿಕೆ ಸರ್ಕಾರಕ್ಕೆ ಮನವಿ ಮಾಡಿದೆ.
ಗಾಂಧಿ ಜಯಂತಿ ಯಂದು ರಾಜ್ಯದಲ್ಲಿ ಪ್ರಾಣಿ ವಧೆ ಮತ್ತು ಮಾಂಸ ಮಾರಾಟವನ್ನು ರಾಜ್ಯ ಸರ್ಕಾರ ನಿಷೇಧಿಸುತ್ತಾ ಬಂದಿದೆ. ಆದರೆ ಈ ಬಾರಿ ಅ.2ರಂದು ಮಹಾಲಯ ಅಮಾವಾಸ್ಯೆ ಬಂದಿದೆ.
ಮಹಾಲಯವನ್ನು ಪಿತೃಪಕ್ಷ ವೆಂದೂ ಆಚರಿಸಲಾಗುತ್ತಿದೆ. ಅಂದು ಮಾಂಸಾಹಾರ ಸೇವಿಸುವವರು ತಮ್ಮ ಪಿತೃಗಳಿಗೆ ಮಾಂಸಾಹಾರವನ್ನು ನೈವೇದ್ಯ ನೀಡುವ ಪ್ರತೀತಿಯಿದೆ. ಆದರೆ, ಈ ಬಾರಿ ಗಾಂಧಿ ಜಯಂತಿ ಕಾರಣ ಆ ದಿನ ಪ್ರಾಣಿ ವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧವಿರಲಿದೆ. ಅದರ ಪರಿಣಾಮ ಪಿತೃ ಗಳಿಗೆ ಮಾಂಸಾಹಾರ ನೈವೇದ್ಯ ಇಡಲು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….