ಬೆಂಗಳೂರು, (ಸೆ.15): ನಾಗಮಂಗಲ ಗಲಭೆಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಅವರೇ ಮಾಡಿಸಿರ ಬಹುದು. ಆಶಾಂತಿ ಮೂಡಿ ಸುವ ಉದ್ದೇಶದಿಂದ ಅವರ ಸೂಚನೆ ಮೇಲೆಯೇ ಗಲಭೆ ಆಗಿರಬಹುದು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಆರೋಪ ಮಾಡಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿ ಎಲ್ಲವನ್ನೂ ಬೇರೆಯವರ ಮೇಲೆ ಆರೋಪ ಮಾಡುತ್ತಾರೆ. ನಾನೂ ಅವರಂತೆಯೇ ಎಚ್‌ಡಿ ಕುಮಾರಸ್ವಾಮಿ ಅವರೇ ಗಲಭೆ ಮಾಡಿಸಿರಬಹುದು ಎಂದು ಹೇಳುತ್ತೇನೆ ಎಂದರು.
ಕುಮಾರಸ್ವಾಮಿ ಅವರಂತೆ ನಾನೂ ರಾಜಕೀಯ ಹೇಳಿಕೆ ನೀಡುತ್ತಿದ್ದೇನೆ. ಸರ್ಕಾರ ತುಷ್ಠಿಕರಣ ಮಾಡುತ್ತಿಲ್ಲ. ಕುವೆಂಪು ಅವರ ಸರ್ವಜ ನಾಂಗದ ಶಾಂತಿಯ ತೋಟ ಎಂಬ ಸಂದೇಶದಂತೆ ಆಡಳಿತ ನಡೆಸುತ್ತಿದ್ದೇವೆ.
ಒಂದೊಂದು ದಿನ ಒಂದೊಂದು ಜಾತಿ, ಧರ್ಮದ ಬಗ್ಗೆ ಮಾತನಾಡುವ ಅವರು ಮೊದಲು ತಮ್ಮ ಮಾತುಗಳನ್ನು ಮೆಲುಕು ಹಾಕಲಿ ಎಂದು ತಿರುಗೇಟು ನೀಡಿದರು.
ಸಿಎಂ ಇಳಿಸಲು ಕುತಂತ್ರ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನಾಗಮಂಗಲಕ್ಕೆ ಬಂದು ನಷ್ಟಕ್ಕೊಳಗಾದವರಿಗೆ ಪರಿಹಾರ ನೀಡಿರುವುದು ಸಂತೋಷ, ಆದರೆ, ‘ಸಿಎಂ ಇಳಿಸುವ ಕುತಂತ್ರ’ ಎಂದಿ ರುವುದು ಸರಿಯಲ್ಲ ಎಂದು ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದರು.
ನಾಗಮಂಗಲಕ್ಕೆ ಬಂದು ಅವರು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಮಾತನಾಡುವುದು ಎಷ್ಟರಮಟ್ಟಿಗೆ ಸರಿ? ಕುಮಾರಸ್ವಾಮಿ ನನ್ನಂತೆ ಸಾಮಾನ್ಯ ಮಂತ್ರಿಯಲ್ಲ. ಎರಡು ಬಾರಿ ರಾಜ್ಯದ ಸಿಎಂ ಆಗಿದ್ದವರು. ಜನರಿಗೆ ಏನು ಸಂದೇಶ ಕೊಡಬೇಕಿತ್ತು? ಆದರೆ ಅವರು ಕೊಟ್ಟಿದ್ದೇನು? ಅವರ ಹೇಳಿಕೆ ಪ್ರತಿಕ್ರಿಯಿಸದಿರುವುದೇ ಸೂಕ್ತ ಎಂದರು. ವಿಪಕ್ಷ ನಾಯಕ ಆರ್.ಅಶೋಕ್ ಎಲ್ಲಿಂದ ಪರಿಹಾರ ಕೊಡುತ್ತೀರಿ ಎಂದು ಅಧಿಕಾರಿಗಳನ್ನು ಕೇಳಿದ್ದಾರೆ.
ನಾನು ಈಗಾಗಲೇ ಸಿಎಂ ಬಳಿ ಪರಿಹಾರ ಕುರಿತು ಮಾತನಾಡಿದ್ದೇನೆ. ಕಾನೂನಿನಲ್ಲಿ ನಷ್ಟ ಪರಿಹಾರಕ್ಕೆ ಅವಕಾಶ ಇಲ್ಲ. ಆದರೂ ಪರಿಹಾರ ಕೊಡಿಸಲು ಮುಖ್ಯಮಂತ್ರಿ ಅವರನ್ನು ಒಪ್ಪಿಸಿದ್ದೇನೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–