5ರೂ.ಗೆ ಅನ್ನ ಕೊಡುವ ಇಂದಿರಾ ಕ್ಯಾಂಟೀನ್ ರಾಷ್ಟ್ರಕ್ಕೆ ಮಾದರಿ ಎಂದ ಸಚಿವ ಸಂತೋಷ ಲಾಡ್: ಹುಬ್ಬಳ್ಳಿ ಧಾರವಾಡ ಪ್ಯಾಕೇಜ್ ವಿವರ ಹೇಗಿದೆ ನೋಡಿ

ಧಾರವಾಡ (ಸೆಪ್ಟೆಂಬರ್ 13); ಕರ್ನಾಟಕ ರಾಜ್ಯ ಸರಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಬಡವರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ ಹಾಗೂ ಎಲ್ಲ ಸಾರ್ವಜನಿಕರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಕೇವಲ ಐದು ರೂಪಾಯಿಗೆ ಊಟ, ಉಪಹಾರ ನೀಡುತ್ತಿರುವುದು ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಅವರು ನಗರದ ಮಿನಿವಿಧಾನಸೌಧ ಬಳಿ ಇರುವ ಇಂದಿರಾ ಕ್ಯಾಂಟೀನ್‍ದಲ್ಲಿ ಇಂದಿರಾ ಕ್ಯಾಂಟೀನ್ ಹೊಸ ದರ ಪಟ್ಟಿ ಮತ್ತು ವಿವಿಧ ಆಹಾರಗಳ ಪೂರೈಕೆಗೆ ಚಾಲನೆ ನೀಡಿ, ಮಾತನಾಡಿದರು.

ಇಂದಿರಾ ಕ್ಯಾಂಟೀನ್ ಅನ್ನುವುದು, ರಾಜ್ಯ ಸರಕಾರದ ಮಹತ್ವದ ಕೊಡುಗೆಯಾಗಿದೆ. ಜಿಲ್ಲೆಯ ಅವಳಿ ನಗರದಲ್ಲಿ 9 ಇಂದಿರಾ ಕ್ಯಾಂಟೀನ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಇಂದಿರಾ ಕ್ಯಾಂಟೀನ್‍ದಿಂದ ಪ್ರತಿದಿನ 500 ಜನರಿಗೆ ಊಟ ಪೂರೈಸುವ ಗುತ್ತಿಗೆ ನೀಡಲಾಗಿದೆ. ಅದರಂತೆ ಇಂದಿರಾ ಕ್ಯಾಂಟೀನ್‍ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಅವರು ಹೇಳಿದರು.

ಇಂದಿರಾ ಕ್ಯಾಂಟೀನ್ ರುಚಿ ಸವಿದ ಸಚಿವ, ಡಿಸಿ: ಸಚಿವ ಸಂತೋಷ ಲಾಡ್ ಅವರು ಇಂದು ಧಾರವಾಡ ನಗರದಲ್ಲಿ ಇಂದಿರಾ ಕ್ಯಾಂಟೀನ್‍ದಲ್ಲಿ ಹೊಸ ದರದ ಪಟ್ಟಿ ಬಿಡುಗಡೆ ಮಾಡಿ, ವಿವಿಧ ಪ್ರಕಾರದ ಉಪಹಾರ ಸೆವಿಸಿದರು.

ಕ್ಯಾಂಟೀನ್‍ದಲ್ಲಿ ಸಚಿವ ಸಂತೋಷ ಲಾಡ್ ಹಾಗೂ ಡಿಸಿ ದಿವ್ಯ ಪ್ರಭು ಅವರು ಐದು ರೂ. ಹಣ ಕೊಟ್ಟು ಟೋಕನ್ ಖರೀದಿಸಿದರು. ನಂತರ ಸಚಿವರು ಜೋಳದ ರೊಟ್ಟಿ ಊಟ ಸವಿದರು. ಡಿಸಿ ದಿವ್ಯ ಪ್ರಭು ಅವರು ಇಡ್ಲಿ, ಅವಲಕ್ಕಿ ಮತ್ತು ಶ್ಯಾವಿಗೆ ಸಿಹಿ ಸವಿದರು. 

ಈ ಸಂದರ್ಭದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಪಾಲಿಕೆ ಸದಸ್ಯ ಡಾ.ಮಯೂರ ಮೋರೆ, ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ಗಳಿಗೆ ಎರಡು ಪ್ಯಾಕೇಜ್‍ಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. 

ಹುಬ್ಬಳ್ಳಿ (ಪ್ಯಾಕೇಜ್ 1): ಪ್ಯಾಕೇಜ್ 1 ರಲ್ಲಿ ಹುಬ್ಬಳ್ಳಿಯ ಕಿಮ್ಸ್ ಆವರಣ, ಹೊಸ ಬಸ್ ನಿಲ್ದಾಣ, ಎಸ್.ಎಮ್.ಕೃಷ್ಣ ನಗರ, ನ್ಯೂ ಇಂಗ್ಲೀಷ ಶಾಲೆ, ಸೋನಿಯಾ ಗಾಂಧಿ ನಗರದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಪ್ರತಿ ಕ್ಯಾಂಟೀನ್‍ದಲ್ಲಿ ಬೆಳಗಿನ ಉಪಹಾರ 500, ಮಧ್ಯಾಹ್ನದ ಊಟ 500, ರಾತ್ರಿ ಊಟ 500 ಸೇರಿ ಒಟ್ಟು 1500 ಜನರಿಗೆ ಊಟ, ಉಪಹಾರ ಪೂರೈಸಲಾಗುತ್ತಿದೆ.

 ಒಟ್ಟಾರೆ ಒಂದು ವರ್ಷಕ್ಕೆ ಬೆಳಗಿನ ಉಪಹಾರ-912500, ಮಧ್ಯಾಹ್ನದ ಊಟ-912500, ರಾತ್ರಿ ಊಟ-912500, ಒಟ್ಟು 2737500 ಜನರಿಗೆ ಆಹಾರ ಪೂರೈಸಲಾಗುತ್ತಿದೆ.

  ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. 

ಧಾರವಾಡ (ಪ್ಯಾಕೇಜ್ 2): ಪ್ಯಾಕೇಜ್ 2 ರಲ್ಲಿ ಧಾರವಾಡದ ಹೊಸ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಹುಬ್ಬಳ್ಳಿಯ ಉಣಕಲ್, ಬೆಂಗೇರಿ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್‍ಗಳಿಗೆ ಪ್ರತಿದಿನ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದೆ.

  ಪ್ರತಿ ಒಬ್ಬ ಫಲಾನುಭವಿಗಳಿಗೆ ಬೆಳಿಗಿನ ಉಪಹಾರಕ್ಕೆ ನೀಡುವ ರೂ 5, ಮಧ್ಯಾಹ್ನ ಊಟ ರೂ 10, ರಾತ್ರಿ ಊಟ ರೂ.10 ಒಟ್ಟು 25 ಆಗುತ್ತದೆ. ಅಂದಾಜು ದರ ಪಟ್ಟಿಯ ಪ್ರಕಾರ ಉಪಹಾರಕ್ಕೆ ನೀಡುವ ರೂ 12.4, ಮಧ್ಯಾಹ್ನ ಊಟ ರೂ 24.8, ರಾತ್ರಿ ಊಟ ರೂ. 24.8 ಒಟ್ಟು ರೂ.62 ಆಗುತ್ತದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 9 ಇಂದಿರಾ ಕ್ಯಾಂಟೀನ್‍ನಲ್ಲಿ ವಾರದ ಏಳು ದಿನಗಳಲ್ಲಿ ಬೆಳಗಿನ ಉಪಹಾರವು ಬೆಳಿಗ್ಗೆ 7.30 ರಿಂದ 10 ಗಂಟೆಯವರಿಗೆ, ಮಧ್ಯಾಹ್ನ ಊಟ ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಹಾಗೂ ರಾತ್ರಿ ಊಟ ಸಂಜೆ 6 ರಿಂದ 8 ರವರೆಗೆ ಆಹಾರದ ಒದಗಿಸಲಾಗುತ್ತದೆ. 

ಭಾನುವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಪುದೀನಾ ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಕೇಸರಿ ಬಾತ್, ಖಾರಾ ಬಾತ್ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್), 

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆ ಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆ ಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಸೋಮವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಮಂಡಕ್ಕಿ (120 ಗ್ರಾಮ್ಸ್).

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ(100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್), 

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಮಂಗಳವಾರ:

ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಖಾರಾ ಬಾತ್ (225ಗ್ರಾಮ್ಸ್) ಚಟ್ನಿ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಬುಧವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಕರಿಬೇವು ಚಟ್ನಿ (100 ಗ್ರಾಮ್ಸ್), ಐಟಂ 2 ರಲ್ಲಿ ಅವಲಕ್ಕಿ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬೀನ್ಸ್ ಸಾಂಬಾರ್ (150 ಗ್ರಾಮ್ಸ್) ಹಾಗೂ ಮೊಸರನ್ನ (100 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ಮೊಸರನ್ನ(100 ಗ್ರಾಮ್ಸ್), 

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೂಲಂಗಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಗುರುವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ವೆಜ್ ಪಲಾವ್ (225ಗ್ರಾಮ್ಸ್) ರೈತಾ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಮೊಳಕೆಕಾಳು ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಬದನೆಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಶುಕ್ರವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬಾರ್ (100 ಗ್ರಾಮ್ಸ್), ಐಟಂ 2 ರಲ್ಲಿ ಚಿತ್ರನ್ನಾ (225 ಗ್ರಾಮ್ಸ್) ಚಟ್ನಿ (100 ಗ್ರಾಮ್ಸ್)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಹಿರೇಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ರಾಗಿ ಅಂಬಲಿ (75 ಎಂ.ಎಲ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್) ರಾಗಿ ಅಂಬಲಿ (75 ಎಂ.ಎಲ್),

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಅಲ್ಸಂದೆಕಾಳು ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಚಪಾತಿ (2 ಸಂಖ್ಯೆ) ಸಾಗು (40 ಗ್ರಾಮ್ಸ್)

ಶನಿವಾರ: ಬೆಳಗಿನ ಉಪಹಾರ: ಐಟಂ 1 ರಲ್ಲಿ 3 ಇಡ್ಲಿ (150 ಗ್ರಾಮ್ಸ್) ಸಾಂಬರ್ (100 ಗ್ರಾಮ್ಸ್), ಐಟಂ 2 ರಲ್ಲಿ ಆಲೂಬಾತ್ (225ಗ್ರಾಮ್ಸ್) ಚಟ್ನಿ (100)

ಮಧ್ಯಾಹ್ನದ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ಕುಂಬಳಕಾಯಿ ಸಾಂಬಾರ್ (150 ಗ್ರಾಮ್ಸ್) ಹಾಗೂ ಕೀರ್ (75 ಎಂ.ಎಲ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್) ಕೀರ್ (75 ಎಂ.ಎಲ್)

ರಾತ್ರಿ ಊಟ: ಐಟಂ 1 ರಲ್ಲಿ ಅನ್ನ (300 ಗ್ರಾಮ್ಸ್), ನುಗ್ಗೇಕಾಯಿ ಸಾಂಬಾರ್ (150 ಗ್ರಾಮ್ಸ್), ಐಟಂ 2 ರಲ್ಲಿ ಜೋಳದ ರೋಟ್ಟಿ (2 ಸಂಖ್ಯೆ) ಸೊಪ್ಪು ಪಲ್ಯ (100 ಗ್ರಾಮ್ಸ್)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಧರ್ಮಸ್ಥಳದ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ: ಬಿ.ವೈ. ವಿಜಯೇಂದ್ರ

ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ವಿಚಾರದಲ್ಲಿ ಮಧ್ಯಂತರ ವರದಿಯನ್ನೂ ಒಳಗೊಂಡಂತೆ ಗೊಂದಲಕ್ಕೆ ಗೃಹ ಸಚಿವರು ತೆರೆ ಎಳೆಯುವ ವಿಶ್ವಾಸದಲ್ಲಿ ನಾವು ಇದ್ದೇವೆ: ಬಿ.ವೈ.ವಿಜಯೇಂದ್ರ (B.Y. Vijayendra)

[ccc_my_favorite_select_button post_id="112771"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!