ಮೈಸೂರು, (ಸೆ.16); ಮೇಲಾಧಿಕಾರಿ ನಿಂದನೆ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಲೂಕು ಕಚೇರಿಯ ಎಫ್ಡಿಎ ಕೊನೆಯುಸಿರೆಳೆದಿದ್ದಾರೆ.
ಮಡಿಕೇರಿ ತಹಸೀಲ್ದಾರ್ ಕಚೇರಿ ಬಿಲ್ಲಿಂಗ್ ವಿಭಾಗದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಎಫ್ಡಿಎ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಜ್ವಲ್ (32) ಸಾವನ್ನಪ್ಪಿದವರು.
ತಹಶಿಲ್ದಾರ್ ಪ್ರವೀಣ್ ಹಾಗೂ ಶಿರಸ್ತೇದಾರ್ ಗುರುರಾಜ್ ಕಿರುಕುಳದಿಂದ ತಮ್ಮ ಪತಿ ಸಾವನ್ನಪ್ಪಿದ್ದಾರೆ ಎಂದು ಪ್ರಜ್ವಲ್ ಪತ್ನಿ ಬಿ.ಜೆ.ಶ್ರುತಿ ಈ ಇಬ್ಬರು ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಜ್ವಲ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾ ದರೂ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಸಿಬ್ಬಂದಿ ಮುಂದೆ ಅವಾಚ್ಯ ಶಬ್ದಗಳಿಂದ ನಿಂದನೆ: ಕಳೆದ ಆರು ತಿಂಗಳಿಂದ ಈ ಇಬ್ಬರು ಅಧಿಕಾರಿಗಳು ಕಚೇರಿ ಸಿಬ್ಬಂದಿ ಮುಂದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕ ವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತಾಯಿ, ಪತ್ನಿ ಜತೆ ನೋವು ಹೇಳಿಕೊಂಡಿದ್ದ ಮೃತ ಪ್ರಜ್ವಲ್.
ಇತ್ತೀಚೆಗೆ ಫೆಸ್ಟಿವಲ್ ಅಡ್ವಾನ್ಸ್ ಬಿಲ್ನಲ್ಲಿ ತಹಶಿಲ್ದಾರ್ ಸಹಿ ಹೋಲಿಕೆ ಆಗಿರಲಿಲ್ಲ. ಇದನ್ನೇ ನೆಪ ಮಾಡಿಕೊಂಡು ‘ನೀನೇ ಸಹಿ ಮಾಡಿದ್ದೀಯ’ ಎಂದು ಪ್ರಜ್ವಲ್ ವಿರುದ್ದ ಆರೋಪಿಸಿದ್ದ ತಹಸೀಲ್ದಾರ್ ಪ್ರವೀಣ್, ಸಸ್ಪೆಂಡ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಕಾಲು ಹಿಡಿದು ಬೇಡಿಕೊಂಡರೂ ಬಾಯಿಗೆ ಬಂದಂತೆ ಮಾತನಾಡಿದ್ದರು. ಇದರಿಂದ ಮನ ನೊಂದ ಪ್ರಜ್ವಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುವಾಗಲೇ ಪೊಲೀಸರನ್ನು ಭೇಟಿ ಮಾಡಲು ಬಯಸಿದ್ದರು.
ಲಿಖಿತ ಹೇಳಿಕೆಯನ್ನು ಮೈಸೂರಿನ ಅಶೋಕಪುರಂ ಠಾಣೆಗೆ ಕಳುಹಿಸಿದ್ದರು. ಆದರೆ, ಪೊಲೀಸರು ಬರುವ ಮುನ್ನವೇ ಪ್ರಜ್ವಲ್ ಸಾವಿಗೀಡಾದರು ಎಂದು ಪತ್ನಿ ಬಿ.ಜೆ.ಶ್ರುತಿ ಈ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….