ಕೇರಳ, (ಸೆ.13): ವಿಶ್ವವಿಖ್ಯಾತ ಶಬರಿಮಲೆ ದೇವಸ್ಥಾನದ ಬಾಗಿಲನ್ನು ಓಣಂ ಹಬ್ಬ ಮತ್ತು 5 ದಿನಗಳ ಮಾಸಿಕ ಪೂಜೆ ಹಿನ್ನೆಲೆ ಶುಕ್ರವಾರ ಸಂಜೆ ತೆರೆಯಲಾಗುತ್ತಿದ್ದು, ಸೆ.21 ಭಕ್ತರಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ ಲಭಿಸಲಿದೆ.
ತಂತ್ರಿ ಕಂಡರಾರು ರಾಜೀವರ ಮಾರ್ಗದರ್ಶನದಲ್ಲಿ ಮೇಲ್ಸಂತಿ ಪಿ.ಎನ್.ಮಹೇಶ ನಂಬೂದಿರಿ ಅವರು 5 ಗಂಟೆಗೆ ಗರ್ಭಗುಡಿ ಬಾಗಿಲು ತೆರೆಯಲಿದ್ದಾರೆ.
5 ದಿನ ನಿರಂತರ ಪೂಜೆ ನಡೆಯಲಿದೆ. ಉಪ ದೇವತಾ ದೇಗುಲಗಳ ಬಾಗಿಲನ್ನೂ ತೆರೆಯಲಾಗುತ್ತದೆ. 18 ಪವಿತ್ರ ಮೆಟ್ಟಿಲುಗಳ ಬಳಿ ದೀಪ ಬೆಳಗಿಸಲಾಗುತ್ತದೆ.
ಹೂವಿನ ರಂಗೋಲಿ ಹಾಕಿ ಓಣಂ ಆಚರಿಸಲಾ ಗುತ್ತದೆ. ದೇಗುಲದಲ್ಲಿ ವಿಶೇಷ ಪೂಜೆಗಳೂ ನಡೆಯ ಲಿವೆ. ಸೆ.15 ರಂದು ತಿರುವೋಣಂ ಹಬ್ಬವಿದ್ದು, 13ರ ಸಂಜೆ ಚಾಲನೆಗೊಳ್ಳಲಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….