ಮಂಗಳವಾರ, ಅಕ್ಟೋಬರ್,29, 2024ರ ದೈನಂದಿನ ರಾಶಿ ಭವಿಷ್ಯ| astrology predictions

ಮೇಷ: ನಿಮಗೆ ಪೂರಕ ಬೆಳವಣಿಗೆ ಸಂಭವಿಸುವುದು. ವ್ಯವಹಾರದಲ್ಲಿ ಆತುರದ ನಿರ್ಧಾರ ತಾಳಬೇಡಿ, ಕೌಟುಂಬಿಕ ಬಿಕ್ಕಟ್ಟು ಪರಿಹಾರ.

ವೃಷಭ: ಕೌಟುಂಬಿಕ ವಿಚಾರವೊಂದು ಚಿಂತೆಗೆ ಕಾರಣವಾಗುವುದು. ಅದಕ್ಕೆ ಸುಲಭ ಪರಿಹಾರವಿದೆ. ಆದರೆ ನೀವು ಅದನ್ನು ಕಂಡುಕೊಳ್ಳುತ್ತಿಲ್ಲ.

ಮಿಥುನ: ಆಪೇಷ್ಟರ ಸಂಗದಲ್ಲಿ ಸಂತೋಷ ಅನುಭವಿಸುವಿರಿ. ಕೆಲಸದ ಜಂಜಾಟವಿಲ್ಲ. ಇಂದಿನ ದಿನ ನಿಮಗೆ ಹಳೆ ನೆನಪು ಕೆದಕಲು ಸಹಕಾರಿ.

ಕಟಕ: ಉತ್ಸಾಹದಿಂದ ಕಾರ್ಯ ಮಾಡುವಿರಿ, ಎಲ್ಲವೂ ನೀವು ನಿರೀಕ್ಷಿಸಿದಂತೆ ನಡೆಯುವ ಸಾಧ್ಯತೆ. ಕೌಟುಂಬಿಕ ಸಹಕಾರ, ಸಮಾಧಾನ. ವೃತ್ತಿಯಲ್ಲಿ ಉನ್ನತಿ.

ಸಿಂಹ: ಹಳೆಯ ನೆನಪಿನಲ್ಲಿ ಬದುಕು ಸಾಗಿಸಬೇಡಿ. ಕೆಲವು ವಿಷಯಗಳನ್ನು ಮರೆತು ಮುಂದೆ ಹೋಗಬೇಕು. ಅತಿಯಾದ ಭಾವುಕತೆ ಒಳಿತಲ್ಲ.

ಕನ್ಯಾ: ಅನವಶ್ಯವಾಗಿ ಮಾನಸಿಕ ಒತ್ತಡ ಅನುಭವಿಸುವಿರಿ. ಅದಕ್ಕೆ ಕಾರಣ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿಸುವ ನಿಮ್ಮ ಸ್ವಭಾವ. ಅದನ್ನು ತ್ಯಜಿಸಿರಿ.

ತುಲಾ: ಇತರರು ನಿಮ್ಮ ಕಾರ್ಯವನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ವಂಚನೆಯ ದಾರಿ ಬೇಡ. ಕೆಲಸವನ್ನು ಗಂಭೀರವಾಗಿ ನಿರ್ವಹಿಸಿ.

ವೃಶ್ಚಿಕ: ಮಾನಸಿಕ ಉದ್ವಿಗ್ನತೆ. ಏನೋ ಒತ್ತಡ ಹಾಗಾಗಿ ದಿನದನ್ನು ಸಂತೋಷದಿಂದ ಆಗುವುದಿಲ್ಲ. ಆರೋಗ್ಯದ ಚಿಂತೆ.

ಧನು: ದೇವರ ಅನುಗ್ರಹ ನಿಮಗಿದೆ. ಹಾಗಾಗಿ ಕಷ್ಟದ ಪರಿಸ್ಥಿತಿಯನ್ನೂ ಸುಲಭದಲ್ಲಿ ನಿಭಾಯಿಸುವಿರಿ, ಕೌಟುಂಬಿಕ ಸಹಕಾರ ದೊರಕುವುದು.

ಮಕರ: ಇತರರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಅದರಿಂದ ನಿಮಗೆ ತೊಂದರೆ. ಕುಟುಂಬ ಸದಸ್ಯರ ಜತೆ ದಿನ ಕಳೆಯಿರಿ.

ಕುಂಭ; ಸಂಬಂಧದಲ್ಲಿ ಮಹತ್ತರ ತಿರುವೊಂದು ಉಂಟಾದೀತು. ತಪ್ಪು ನಡೆ ಇಟ್ಟರೆ ಅದು ಪ್ರಮಾದ ಉಂಟು ಮಾಡೀತು. ವಿವೇಕವಿರಲಿ.

ಮೀನ; ನಿಮ್ಮ ಬದುಕಲ್ಲಿ ಸಂಘರ್ಷದ ಸಂಕೇತ ತೋರಿ ಬರುತ್ತಲಿದೆ. ಅದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನ ಪಡಿ. ಮಾನಸಿಕ ಕ್ಷೋಭೆ ಸಂಭವ.