ಪ್ರತಿಯೊಂದು ಮನೆಯು, ಪ್ರತಿಯೊಂದು ಬೀದಿಯು ಕತ್ತಲೆಯನ್ನ ಕಳೆದು ಬೆಳಕನ್ನ ಹರಡಿಸುವ ಹಬ್ಬವೇ ದೀಪಾವಳಿ. ಇನ್ನೂ ಈ ಹಬ್ಬಕ್ಕೆ ತನ್ನದೇ ಆದ ಪ್ರಾಶಸ್ತ್ಯ ಹಾಗೂ ಸಂಪ್ರದಾಯ ಇದೆ.
ನಮ್ಮಲ್ಲಿ ಈ ಆಚರಣೆಯು ಅನಾದಿಕಾಲದಿಂದಲೂ ಬಂದಿರುವಂತದ್ದು, ಸುಳ್ಳಿನ ವಿರುದ್ಧ ಸತ್ಯದ ಗೆಲುವು, ದುಷ್ಟರ ವಿರುದ್ಧ ಒಳ್ಳೆಯವರ ಗೆಲುವು, ಅಂಧಕಾರದ ವಿರುದ್ದ ಬೆಳಕಿನ ಗೆಲುವು ಹೀಗೆ ನಮ್ಮ ಜೀವನದಲ್ಲಿ ಸುಖ, ಸಂಪತ್ತು, ಒಳ್ಳೆಯ ಆರೋಗ್ಯ, ನೀಡುವಂತಹ ಹಬ್ಬವೇ ದೀಪಾವಳಿ.
ಈ ಹಬ್ಬವನ್ನು ಆಚರಿಸುವ ಹಿನ್ನೆಲೆ, ಅಂದು ಬಲೀಂದ್ರ ಚಕ್ರವರ್ತಿ ಎಂಬ ರಾಕ್ಷಸ ಉತ್ತಮ ಗುಣಶಾಲಿ, ಅವನು ಪ್ರಹ್ಲಾದನ ಮೊಮ್ಮಗ, ರಾಕ್ಷಸ ವಂಶದಲ್ಲಿ ಹುಟ್ಟಿದರೂ ಕೂಡ ಅತ್ಯಂತ ಶಿಷ್ಠ, ಸಾತ್ವಿಕ ಸ್ವಭಾವದವನು. ಪರಮ ಭಾಗವತ ವಿಷ್ಣು ಭಕ್ತನಾದಂತಹ ಬಲೀಂದ್ರನು ರಾಕ್ಷಸರ ರಾಜನಾಗಿದ್ದ.
ಅವನು ಒಳ್ಳೆಯವನಾರೂ (right man in the wrong party) ಅವನ ತಂಡ ಯಾವ್ದಿತ್ತು ರಾಕ್ಷಸರ ಪಡೆ ತುಂಬಾ ದುಷ್ಟರ ತಂಡವಾಗಿತ್ತು, ‘ಸತ್ಯಲೋಕ’ವನ್ನು ಹೊರತುಪಡಿಸಿ, ಅಥಳ ವಿತಳ, ಪಾತಾಳ, ರಸತಳ, ಭೂಲೋಕ ಎಲ್ಲಾ ಲೋಕಗಳನ್ನ ಅಪಹರಿಸಿಬಿಟ್ಟಿದ್ದರು.
ರಾಕ್ಷಸರ ಸ್ವಭಾವವೇ ಹಾಗೆ!. ಅಲ್ಲಿನ ಯಕ್ಷ ಗಂಧರ್ವ, ಕಿನ್ನರ, ಕಿಂಪುರುಷ, ವಿಧ್ಯದರರು, ಪ್ರಾಣಿ -ಪಕ್ಷಿಗಳು, ಮಾನವರು, ಎಲ್ಲರನ್ನೂ ವಶಪಡಿಸಿಕೊಂಡು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದರು, ಹೀಗೆ ಎಲ್ಲಾ ಲೋಕಗಳ ಪೀಡಿತರಾಗಿರುವ ರಾಕ್ಷಸರನ್ನು ನಿಯಂತ್ರಿಸಲಾಗದೆ, ಎಲ್ಲವನ್ನೂ ಕಳೆದುಕೊಂಡ ಮನುಷ್ಯರು ದಿಕ್ಕಾಪಾಲಾಗಿ ಅಲೆ ಯುತ್ತಿದ್ದರಂತೆ ಎಲ್ಲಾ ಮಹಾವಿಷ್ಣುವಿನಲ್ಲಿ ಪ್ರಾರ್ಥಿಸುತ್ತಾರೆ.
ದೇವತೆಗಳ ಪ್ರಾರ್ಥನೆ& ಕಶ್ಯಪ ಮಹರ್ಷಿಯ ತಪಸ್ಸಿನ ಫಲವಾಗಿ ವಿಷ್ಣುವು ಅದಿತೆಯ ಗರ್ಭದಲ್ಲಿ “ವಾಮನಮೂರ್ತಿಯಾಗಿ” ಜನಿಸುತ್ತಾನೆ. ತೇಜೋಮಯನಾದ ಪುಟ್ಟ ಬಾಲಕ ಒಂದು ಛತ್ರಿಯನ್ನು ಹಿಡಿದು ಕೈಯಲ್ಲಿ ಕಮಂಡಲವನ್ನ ಹಿಡಿದುಕೊಂಡು ಬ್ರಹ್ಮಚಾರಿಯ ವೇಷದಲ್ಲಿ ಕೃಷ್ಣರ್ಚನೆಯನ್ನು ನೆನೆಯುತ್ತಾ ವೇದಂತಗಳನ್ನ ಹೇಳುತ್ತ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ನೇರವಾಗಿ ಬಲೀಂದ್ರನ ಯಜ್ಞಕ್ಕೆ ಹೋಗುತ್ತಾನೆ.
ಅಷ್ಟೊತ್ತಿಗೆ ಬಲೀಂದ್ರನು ಯಜ್ಞವನ್ನು ಆಚರಿಸುತ್ತಿದ್ದ, ಯಜ್ಞವನ್ನು ಆಚರಿಸುವ ಸಂದರ್ಭದಲ್ಲಿ ಯಾರೇ ಬಂದು ಧಾನ ಕೇಳಿದರು ಇಲ್ಲ ಎಂದು ಹೇಳಬಾರದು ಅದು (ಹರ್ಶ್ಯ) ಸಂಸ್ಕೃತಿ.
ಬಲೀಂದ್ರ, ಬಾಲಕನಿಗೆ ಏನು ಬೇಕು ಕೇಳು ಎಂದಾಗ ಮೂರು ಹೆಜ್ಜೆ ಇಡುವಷ್ಟು
ಜಾಗ ನೀಡು ಎಂದು ಕೇಳುತ್ತಾನೆ. ಆಗ ಬಲೀಂದ್ರ ಅನ್ನುತ್ತಾನೆ ಕೇವಲ ಈ ನಿನ್ನ ಪುಟ್ಟ ಮೂರು ಹೆಜ್ಜೆ ಇಡುವಷ್ಟೇನಾ..? ಬೇರೆ ಏನಾದರೂ ದೊಡ್ಡದಾಗಿ ಕೇಳು ಎನ್ನುತ್ತಾನೆ.
ಆ ಬಾಲಕನು ಇಲ್ಲ ನನಗೆ ಮೂರು ಹೆಜ್ಜೆ ಇಡುವಷ್ಟೇ ಸಾಕು ಎಂದಾಗ, ಶುಕ್ರಾಚಾರ್ಯರಿಗೆ ವಿಷ್ಣುಪುರಾಣದಲ್ಲಿ ವಾಮನ ರೂಪದ ಬಗ್ಗೆ ಅರಿವಿದ್ದರಿಂದ, ಬಲೀಂದ್ರನಿಗೆ ಹೇಳುತ್ತಾನೆ ಬಾಲಕನ ರೂಪದಲ್ಲಿ ಇರುವುದು ವಿಷ್ಣು ಎಂದು, ಹಾಗ ಬಲೀಂದ್ರನು ಒಂದು ವೇಳೆ ಪರಮ ಭಾಗವತ ವಿಷ್ಣುವೇ ಆಗಿದ್ದಲ್ಲಿ ಅವರಿಗೆ ಧಾನ ನೀಡಿದ ಭಾಗ್ಯನನ್ನದಾಗುತ್ತದೆ ಎಂದು ಬಾಲಕನಿಗೆ ಧಾನ ನೀಡುತ್ತಾನೆ.
ಆಗ ಬಾಲಕನು ವಾಮನ ರೂಪತಾಳಿ ಆಕಾಶಕ್ಕೆ ಒಂದು ಹೆಜ್ಜೆ ಇಡುವನು & ಭೂಲೋಕಕ್ಕೆ ಒಂದು ಹೆಜ್ಜೆ, ಎರಡನೇ ಹೆಜ್ಜೆ ಎರಡು ಲೋಕವನ್ನು ಆವರಿಸಿತ್ತು ಇನ್ನೂ ಮೂರನೆಯ ಹೆಜ್ಜೆ ಎಲ್ಲಿಡಲಿ ಎಂದಾಗ, ನನ್ನ ಅಂಧಕಾರ & ಅಹಂಕಾರ ಕಳೆಯಲಿ ನನ್ನ ತಲೆ ಮೇಲೆ ಇಡಿ ಎನ್ನುವನು.
ವಿಷ್ಣುವು ಬಲೀಂದ್ರನನ್ನು ಪಾತಾಳಕ್ಕೆ ತುಳಿಯುತ್ತಾನೆ. ಬಲೀಂದ್ರ ನಿಷ್ಠವಂತನಾದ್ದರಿಂದ ವಾಮನ ರೂಪತಾಳಿದ ವಿಷ್ಣುವು ಬಲೀಂದ್ರನ ಬಾಗಿಲನ್ನು ಕಾಯುತ್ತಾನಂತೆ & ವಾಮನವಾತರದ ವಿಷ್ಣುವನ್ನು ಸ್ಮರಿಸುವ ದಿನವೇ ಬಲಿಪಾಡ್ಯಮಿ, (ದೀಪಾವಳಿ) ಎನ್ನುವರು.
ಮಾಹಿತಿ; ಸಿಂಧೂ ಜಿ ಸಿ (ತುಮಕೂರು ವಿವಿ)