ದೊಡ್ಡಬಳ್ಳಾಪುರ: ಕಾರ್ತಿಕ ಮಾಸದ ಮೊದಲ ಸೋಮವಾರದಂದು ತಾಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಗರ ಹಾಗೂ ತಾಲ್ಲೂಕಿನಾದ್ಯಂತ ಮೊದಲ ಕಾರ್ತಿಕ ಸೋಮವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ನಗರದ ಶ್ರೀನಗರದ ಶ್ರೀ ಮಲೈ ಮಾದೇಶ್ವರ ಸ್ವಾಮಿ ದೇವಾಲಯ, ತೇರಿನ ಬೀದಿ ಚಂದ್ರಮೌಳೇಶ್ವರ, ಸ್ವಯಂಬುಕೇಶ್ವರ (ಸೋಮೇಶ್ವರ) ದೇವಾಲಯ, ಕೊಂಗಾಡಿಯಪ್ಪ ಕಾಲೇಜು ರಸ್ತೆಯಲ್ಲಿನ ಶ್ರೀ ಬಯಲು ಬಸವಣ್ಣ ದೇವಾಲಯ, ಶ್ರೀ ರಾಮಲಿಂಗ ಚಂದ್ರ ಚೌಡೇಶ್ವರಿ ದೇವಾಲಯ, ನಗರೇಶ್ವರ ಸ್ವಾಮಿ, ಸಪ್ತಮಾತೃಕ ಮಾರಿಯಮ್ಮ, ಕಾಶಿ ವಿಶ್ವೇಶ್ವರ.
ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರದ ಕಾಶಿ ವಿಶ್ವನಾಥ ದೇವಾಲಯ, ತಾಲೂಕಿಗೆ ಸಮೀಪದ ಕಣಿವೆಪುರದ ಕಣಿವೆ ಬಸವಣ್ಣ, ಆರೂಢಿಯ ಕೋಡಿಮಲ್ಲೇಶ್ವರ, ಅಂತರಹಳ್ಳಿ ಗ್ರಾಮದಲ್ಲಿನ ತೋಪಿನ ಬಸವೇಶ್ವರಸ್ವಾಮಿ ದೇವಾಲಯಗಳಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕೊಂಡಸಂದ್ರ ಗ್ರಾಮದಲ್ಲಿನ ಶ್ರೀ ಕಾಶಿ ವಿಶ್ವನಾಥ ಸ್ವಾಮಿಯ ಸನ್ನಿಧಿಯಲ್ಲಿ ದೇವರಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ, ಬಿಲ್ವಾರ್ಚನೆ ಮತ್ತು ಪ್ರಸಾದ ವಿನಿಯೋಗ ನೆರವೇರಿತು.