ಕರ್ನಾಟಕವೀಗ ಮತಾಂಧರಿಗೆ ಸ್ಲೀಪರ್‌ ಸೆಲ್‌ ಆಗಿದೆ: ಆರ್.ಅಶೋಕ

ಕೋಲಾರ: ವಕ್ಫ್‌ ಅಧಿಕಾರಿಗಳು ರೈತರ ಬಳಿ ಬಂದರೆ ಜಮೀನಿಗೆ ಕಾಲಿಡಲು ಬಿಡಬಾರದು. ರೈತರಿಗೆ ನೋಟಿಸ್‌ ಬಂದರೆ ಕೂಡಲೇ ಅದನ್ನು ಬಿಜೆಪಿ ಮುಖಂಡರಿಗೆ ತಿಳಿಸಬೇಕು. ರೈತರ ಪರವಾಗಿ ನಾವು ಸದಾ ಹೋರಾಟ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ವಕ್ಫ್‌ ಮಂಡಳಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

10 ಸಾವಿರ ಕೋಟಿ ರೂಪಾಯಿಯನ್ನು ಮುಸ್ಲಿಮರಿಗೆ ನೀಡುತ್ತೇನೆ ಎಂದು ಕಾಂಗ್ರೆಸ್‌ ಘೋಷಿಸಿತ್ತು. ಅವರ ಮತ ಗಳಿಸಲು ಕಾಂಗ್ರೆಸ್‌ ಏನು ಬೇಕಾದರೂ ಮಾಡುತ್ತದೆ. ಈಗ ವಕ್ಫ್‌ ಮೂಲಕ ಕಾಂಗ್ರೆಸ್‌ ರೈತರ ಜಮೀನು ಕಬಳಿಸುತ್ತಿದೆ. ಕೆಎಸ್‌ಆರ್‌ಟಿಸಿಯ ಸ್ಲೀಪ್‌ ಲೈಕ್‌ ಎ ಬೇಬಿ ಎಂಬಂತೆ, ಮುಸ್ಲಿಂ ಮೂಲಭೂತವಾದಿಗಳು ಹಾಗೂ ಭಯೋತ್ಪಾದಕರು ಕರ್ನಾಟಕದಲ್ಲಿ ಆರಾಮವಾಗಿ ನಿದ್ರಿಸುವ ವಾತಾವರಣ ಸೃಷ್ಟಿಯಾಗಿದೆ ಎಂದರು.

ಮುಸ್ಲಿಮ್‌ ಗಲಭೆಕೋರರು ಪೊಲೀಸ್‌ ಠಾಣೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದನ್ನು ಕೂಡ ವಾಪಸ್‌ ಪಡೆದು ಮುಸ್ಲಿಮರನ್ನು ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಯತ್ನಿಸಿದ್ದಾರೆ. ಮುಡಾ ಹಗರಣದ ನಂತರವಂತೂ ಪ್ರತಿ ದಿನ ಹಣೆಗೆ ಕುಂಕುಮ ಇಡುತ್ತಿದ್ದಾರೆ. ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗಿ ಅವರೇ ಬೊಟ್ಟು ಇಟ್ಟುಕೊಂಡಿದ್ದಾರೆ. ಮಾಧ್ಯಮದವರು ಮುಡಾ ಹಗರಣದ ಬಗ್ಗೆ ಪ್ರಶ್ನೆ ಮಾಡಿದರೆ, ಅವನು ಬಿಜೆಪಿ ಏಜೆಂಟಾ ಎಂದು ಪ್ರಶ್ನೆ ಮಾಡುತ್ತಾರೆ. ಸಿದ್ದರಾಮಯ್ಯನವರು ನಮ್ಮ ಮುಂದೆ ಟೋಪಿ ಇಡುವುದಿಲ್ಲ. ಆದರೆ ರೈತರ ಮುಂದೆ ಹೋಗಿ ಟೋಪಿ ಹಾಕಿದ್ದಾರೆ ಎಂದು ಟೀಕಿಸಿದರು.

ಕೋರ್ಟ್‌ನಲ್ಲಿ ಕೇಸ್‌ ನಡೆಯುತ್ತಿರುವಾಗ ನೋಟಿಸ್‌ ವಾಪಸ್‌ ಪಡೆದರೆ, ಕೇಸು ಬಿದ್ದುಹೋಗುವುದಿಲ್ಲ. ಅದೇ ರೀತಿ ವಕ್ಫ್‌ ನೋಟಿಸ್‌ ವಾಪಸ್‌ ಮಾಡಿದರೆ ಸಮಸ್ಯೆ ಮುಗಿಯುವುದಿಲ್ಲ. ರಾಜ್ಯದ ಪ್ರತಿಯೊಬ್ಬರೂ ತಮ್ಮ ಆಸ್ತಿಯ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕು.

ಕೋಲಾರದ ಗಣೇಶನ ದೇವಸ್ಥಾನವೇ ವಕ್ಫ್‌ ಅಡಿಯಲ್ಲಿ ಬರುತ್ತದೆ. ಮಾರಮ್ಮನ ಗುಡಿ ಹೋಗಿ ಈಗ ವಕ್ಫ್‌ ಗುಡಿ ಆಗುತ್ತದೆ. ಯಾವುದೇ ಕಾರಣಕ್ಕೂ ಹಿಂದೂಗಳ ಜಾಗ ವಕ್ಫ್‌ಗೆ ಹೋಗಲು ಬಿಡುವುದಿಲ್ಲ, ಕಾಲಂ 11 ರಲ್ಲಿ ವಕ್ಫ್‌ ಬೋರ್ಡ್‌ ಎಂಬುದನ್ನು ತೆಗೆದುಹಾಕಬೇಕು. ನಮ್ಮ ಪ್ರಾಣವನ್ನಾದರೂ ಕೊಟ್ಟು ರೈತರ ಜಮೀನು ಉಳಿಸುತ್ತೇವೆ ಎಂದರು.

ಸಿಬಿಐ ತನಿಖೆಗೆ ವಹಿಸಿ

ವಕ್ಫ್ ನಲ್ಲಿ ಭೂಮಿ ಲೂಟಿಯಾಗಿದ್ದರೆ ಅದನ್ನು ಸಿಬಿಐ ತನಿಖೆಗೆ ವಹಿಸಲಿ. ಕಾಂಗ್ರೆಸ್ ಪಕ್ಷದಲ್ಲೇ ನೂರೆಂಟು ಸಮಸ್ಯೆಗಳಿವೆ. ಅದನ್ನು‌ ನೋಡುವುದು ಬಿಟ್ಟು ಇದಕ್ಕೆ ಬಿಜೆಪಿ ಕಾರಣ ಎಂದು ಆರೋಪ ಮಾಡುತ್ತಿದ್ದಾರೆ. ಜಮೀನು ಲೂಟಿಯನ್ನು ಸಿಬಿಐಗೆ ವಹಿಸಿದರೆ ಸತ್ಯಾಂಶ ಹೊರಬರಲಿದೆ ಎಂದರು.

ರೈತರಿಗೆ ಕನ್ನ

ಅನ್ನ ಕೊಡುವ ರೈತನಿಗೆ ಕನ್ನ ಹಾಕುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಸಚಿವ ಜಮೀರ್‌ ಅಹ್ಮದ್‌ ಅವರು ಅಧಿಕಾರಿಗಳ ಮುಂದೆ ಹೋಗಿ, ಎಲ್ಲ ಆಸ್ತಿಗಳನ್ನು ವಕ್ಫ್‌ ಬೋರ್ಡ್‌ಗೆ ಸೇರಿಸಿ ರೈತರನ್ನು ಹೊರಕ್ಕೆ ತಳ್ಳಬೇಕೆಂದು ಸೂಚನೆ ನೀಡಿದ್ದಾರೆ. ವಕ್ಫ್‌ ಬೋರ್ಡ್‌ನ ನಿರ್ದೇಶಕರಾಗಿದ್ದವರು ವಿಧಾನಸೌಧವೇ ನಮ್ಮದು ಎಂದಿದ್ದಾರೆ. ಇನ್ನೂ ಕೆಲ ಮುಖಂಡರು ಸಂಸತ್ತು ನಮ್ಮದು ಎಂದಿದ್ದಾರೆ. ಇಷ್ಟಾದರೂ ಸಚಿವರಾಗಲೀ, ಮುಖ್ಯಮಂತ್ರಿಯಾಗಲೀ ಇದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಹಿಂದೆ ಮುಸ್ಲಿಮರಿಗಾಗಿ ಶಾದಿ ಭಾಗ್ಯ ನೀಡಿದ್ದರು. ಅಂದರೆ ಬೇರೆ ಧರ್ಮದಲ್ಲಿ ಬಡವರೇ ಇಲ್ಲ ಎಂದರ್ಥ. ಇದೇ ರೀತಿ ಮಾಡಿ ರಾಜ್ಯವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಇದು ನಾಡಪ್ರಭು ಕೆಂಪೇಗೌಡರು ಕಟ್ಟಿದ ನಾಡು. ಇದನ್ನು ಪಾಕಿಸ್ತಾನವಾಗಲು ಬಿಡಲ್ಲ. ಅಂಬೇಡ್ಕರ್‌ ಸಂವಿಧಾನ ಬೇಕಿದ್ದವರು ಮಾತ್ರ ಈ ರಾಜ್ಯದಲ್ಲಿ ಇರಬೇಕು. ಷರಿಯಾ ಕಾನೂನು ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಬೇಕು. ಕಾಂಗ್ರೆಸ್‌ ಸರ್ಕಾರ ನಗರ ನಕ್ಸಲರನ್ನು ಬಳಸಿಕೊಂಡಿದ್ದು, ಇವರು ಎಲ್ಲದಕ್ಕೂ ಸಂವಿಧಾನ ರಕ್ಷಣೆ ಎಂದು ಹೇಳುತ್ತಾರೆ ಎಂದು ಹೇಳಿದರು.

ವಕ್ಫ್‌ ಬೋರ್ಡ್‌ ಎಂಬ ಬೆಂಕಿ ರಾಕ್ಷಸ ಕರ್ನಾಟಕಕ್ಕೆ ಬಂದಿದೆ. ಅದಕ್ಕೆ ಊಟ, ಬಟ್ಟೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಆದರೆ ರೈತರು ಹೆದರಬೇಕಿಲ್ಲ. ಯಾವುದೇ ರೈತರಿಗೆ ನೋಟಿಸ್‌ ಬಂದರೆ ಅದನ್ನು ಬಿಜೆಪಿಗೆ ತಿಳಿಸಿದರೆ ಅವರ ಪರವಾಗಿ ಹೋರಾಟ ಮಾಡುತ್ತೇವೆ. ರೈತರ ಪರವಾಗಿ ಸದಾ ನಾವು ಇದ್ದೇವೆ. ರೈತರು ವಕ್ಫ್‌ ಅಧಿಕಾರಿಗಳನ್ನು ಜಮೀನಿಗೆ ಬಿಡಬಾರದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಲವ್‌ ಜಿಹಾದ್‌ ಮುಗಿದು ಲ್ಯಾಂಡ್‌ ಜಿಹಾದ್‌ ಬಂದಿದೆ. ಕರ್ನಾಟಕವೀಗ ಮತಾಂಧರಿಗೆ ಸ್ಲೀಪರ್‌ ಸೆಲ್‌ ಆಗಿದೆ. ನೋಟಿಸ್ ನೀಡಿದ ಅಧಿಕಾರಿಗಳನ್ನು ಸರ್ಕಾರ ಒದ್ದು ಜೈಲಿಗೆ ಹಾಕಲಿ ಎಂದರು.

ರಾಜಕೀಯ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ನನ್ನ ಆಯಸ್ಸನ್ನು ಭಗವಂತ ನನ್ನ ತಂದೆಗೆ ಧಾರೆ ಎರಿಬೇಕು; ನಿಖಿಲ್‌ ಕುಮಾರಸ್ವಾಮಿ

ಕುಮಾರಣ್ಣ ಆರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ, ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ: ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="113069"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಅಪಘಾತ.. ಯುವಕನ ಬಲಿ ಪಡೆದ ಸಿಮೆಂಟ್ ಲಾರಿ..!

ಮತ್ತೊಂದು ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸಾಗುತ್ತಿದ್ದ ಯುವಕನ ಮೇಲೆರಗಿದ (Accident) ಲಾರಿ, ಸ್ಥಳದಲ್ಲಿಯೇ ಬಲಿ ಪಡೆದಿರುವ ಘಟನೆ

[ccc_my_favorite_select_button post_id="113040"]

ಆರೋಗ್ಯ

ಸಿನಿಮಾ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

Darshan; ‘ಇದ್ರೇ ನೆಮ್ಮದಿಯಾಗ್ ಇರ್ಬೇಕ್’ ಹಾಡು ಬಿಡುಗಡೆ.. Video ಲಿಂಕ್ ಇಲ್ಲಿದೆ ನೋಡಿ

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ದಿ ಡೆವಿಲ್ ಸಿನಿಮಾದ 'ಇದ್ರೇ ನೆಮ್ಮದಿಯಾಗ್ ಇರ್ಬೇಕ್' ಹಾಡು ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

[ccc_my_favorite_select_button post_id="113046"]
error: Content is protected !!