ಬೆಂಗಳೂರು ಗ್ರಾಮಾಂತರ ಜಿಲ್ಲೆ: ಆನೇಕಲ್ ಮತ್ತು ದೊಡ್ಡಬಳ್ಳಾಪುರ ಉಪ ವಿಭಾಗಗಳ ಡಿಎಸ್‌ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿಗಳು 12 ಮಂದಿ ಕಳ್ಳರನ್ನು ಬಂಧಿಸಿದ್ದಾರೆ.
ನಿನ್ನೆ ಎಸ್ಪಿ ಕಚೇರಿ ಆವರಣದಲ್ಲಿ ನಡೆಸಲಾದ ಪ್ರಾಪರ್ಟಿ ಪೆರೆಡ್‌ನಲ್ಲಿ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿಕೆ ಬಾಬಾ ಅವರು, ಆನೇಕಲ್ ಹಾಗೂ ದೊಡ್ಡಬಳ್ಳಾಪುರ ಉಪ ವಿಭಾಗಗಳ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 12ಜನ ಕಳ್ಳರನ್ನು ಬಂಧಿಸಲಾಗಿದ್ದು ಅವರಿಂದ ಸುಮಾರು 40 ಲಕ್ಷ ರೂ ಮೌಲ್ಯದ ಬೈಕ್ ಮತ್ತು 550 ಗ್ರಾಂ ಚಿನ್ನಾಭರಣ ಹಾಗೂ 10ಲಕ್ಷ ಮೌಲ್ಯದ ಚೆರಸ್ ಚಾಕೋಲೇಟ್ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಬೈಕ್, ಚಿನ್ನಾಭರಣ ಕಳೆದುಕೊಂಡ ಮಾಲೀಕರಿಗೆ ಹಿಂತಿರುಗಿಸಲಾಯಿತು.