ದೊಡ್ಡಬಳ್ಳಾಪುರ: ತಾಲೂಕಿನ ವಿವಿಧ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಇಂದು ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್‍ಯಗಳು ನಡೆಯಲಿದ್ದು, ದೇವಾಲಯಗಳು, ತಳಿರು ತೋರಣ ದೀಪಾಲಂಕಾರದಿಂದ ಅಲಂಕೃತವಾಗಿವೆ Video.
ನಗರದ ಗಂಗಾಧರಪುರ, ರೋಜೀಪುರದಲ್ಲಿನ ಪ್ರಸನ್ನ “ವೀರಾಂಜನೇಯಸ್ವಾಮಿ” ದೇವಾಲಯದಲ್ಲಿ ಮಧ್ಯಾಹ್ನ 12ಕ್ಕೆ ಹನುಮಜಯಂತಿ ಅಂಗವಾಗಿ ರಥೋತ್ಸವ ನಡೆಯಲಿದೆ. ಇದರ ಅಂಗವಾಗಿ ಕಳೆದ 11 ದಿನಗಳಿಂದ ಹನುಮಜಯಂತಿ ಅಂಗವಾಗಿ ವಿವಿಧ ಭಜನಾ ಮಂಡಳಿಗಳ ವತಿಯಿಂದ ರಾತ್ರಿ ಹಗಲು ನಿರಂತರವಾಗಿ ಭಜನೆಗಳು ನಡೆದಿದ್ದು ಹನುಮ ಜಯಂತಿಯಂದು ಮುಕ್ತಾಯವಾಗಲಿವೆ.
ನಗರದ ನೆಲದಾಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆ 5 ಗಂಟೆಗೆ ಪಂಚಮೃತ ಅಭಿಷೇಕ, 7 ಗಂಟೆಗೆ ಸುರಭಿ ಭಜನಾ ಮಂಡಲಿಯವರಿಂದ ಭಜನೆ ಕಾರ್‍ಯಕ್ರಮ, 8.30ಕ್ಕೆ ಶ್ರೀ ರಾಮತಾರಕ ಹೋಮ, ಸಂಜೆ ನೆಲದಾಂಜನೇಯ ಸ್ವಾಮಿ ಪ್ರಾಕಾರೋತ್ಸವ ವಿಶೇಷ ಅಲಂಕಾರ ಪೂಜಾ ಕಾರ್‍ಯಕ್ರಮಗಳು ನಡೆಯಲಿದೆ.
ಅರಳು ಮಲ್ಲಿಗೆ ಬಾಗಿಲು ಸರ್.ಎಂ.ವಿಶ್ವೇಶ್ವರಯ್ಯ ವೃತ್ತದ ಶ್ರೀ ಪ್ರಸನ್ನ ಆಂಜಿನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಬೆಳಿಗ್ಗೆ 6ಗಂಟೆಗೆ ಮಹಾಭಿಷೇಕ, 9 ಗಂಟೆಗೆ “ಶೇಷ ಅಲಂಕಾರ, 10 ಗಂಟೆಗೆ ವಿಷ್ಣು ಸಹಸ್ರ ನಾಮ ಪಾರಾಯಣ,ದೇವರ ನಾಮಗಳ ಗಾಯನ, ಸಂಜೆ 9 ಗಂಟೆಗೆ ಆಂಜನೇಯಸ್ವಾಮಿ ಮೆರವಣಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ತಾಲೂಕಿನ ರಾಜಘಟ್ಟದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ಶ್ರೀ ರಾಮತಾರಕ ಹೋಮ, ಹೂವಿನ ಅಲಂಕಾರ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಡಿಯೋ ನೋಡಿ 👇
ರೈಲ್ವೆ ನಿಲ್ದಾಣ ವೃತ್ತದ ಬಳಿಯ ಪ್ರಸನ್ನ ಆಂಜನೇಯಸ್ವಾಮಿ, ತಾಲೂಕಿನ ಕೊಡಿಗೆಹಳ್ಳಿಯ ಅಭಯ ಆಂಜನೇಯಸ್ವಾಮಿ ದೇವಾಲಯ, ಮಜರಾಹೊಸಹಳ್ಳಿಯ ಆಂಜನೇಯಸ್ವಾಮಿ, ಸಿದ್ದೇನಾಯಕನ ಹಳ್ಳಿ, ಅರಳುಮಲ್ಲಿಗೆ ಕೆರೆ ಏರಿ ಅಭಯ ಆಂಜನೇಯಸ್ವಾಮಿ, ಶಿವಪುರ ಗೇಟ್, ರಾಗಿರಾಯನ ಗುಡ್ಡ, ಕೆರೆ ಏರಿ ಆಂಜನೇಯಸ್ವಾಮಿ ಮೊದಲಾಗಿ ನಗರ ಹಾಗೂ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ ಪೂಜಾ ಕಾರ್ಯಕ್ರಮಗಳು ಜರುಗಲಿವೆ.