ತಿರುಪತಿ; ಆಂಧ್ರಪ್ರದೇಶದ ಪ್ರಸಿದ್ಧ ದೇವಾಲಯ ತಿರುಮಲ ತಿರುಪತಿ ದೇವಸ್ಥಾನಕ್ಕೆ (Tirumala) ತೆರಳುವ ಮುಖ್ಯದ್ವಾರದಲ್ಲಿ ಕರ್ನಾಟಕದ ವಾಹನಗಳಿಗೆ ಪದೇ ಪದೇ ಅನಾವಶ್ಯಕ ಕಿರಿಕ್ ಮಾಡುತ್ತಾ, ಭಕ್ತರನ್ನು ಅವಮಾನಿಸುತ್ತಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.
ತಿರುಪತಿಯಲ್ಲಿ ಕನ್ನಡ ಧ್ವಜ ಹಾಕುವಂತಿಲ್ಲ. ಅದರೆ ಇದೀಗ ಧ್ವಜದಲ್ಲಿನ ಕೆಂಪು ಹಳದಿ ಬಣ್ಣದಲ್ಲಿ ಅಕ್ಷರ ಕೂಡ ಕಾರಿನ ಮೇಲೆ ಇರುವಂತಿಲ್ಲ. ಒಂದು ವೇಳೆ ಈ ರೀತಿಯಲ್ಲಿ ಏನಾದರೂ ಇದ್ದರೆ ತಿರುಪತಿಗೆ ಹೋಗುವ ಮಧ್ಯದಲ್ಲೇ ನಿಮ್ಮ ಕಾರಿನಲ್ಲಿ ಇಂಥ ಸ್ಟಿಕ್ಕರ್ ಇದ್ರೆ ಕಿತ್ತು ಹಾಕಿಸುತ್ತಿದ್ದಾರೆ.
ತಿರುಮಲ ಗೇಟ್ ನಲ್ಲಿ ಕನ್ನಡಿಗರು ಅತ್ಯಂತ ಕೆಟ್ಟ ಅನುಭವ ಎದುರಿಸಿದ್ದಾರೆ. ರಕ್ಷಣಾ ಸಿಬ್ಬಂದಿ ಕರ್ನಾಟಕದಿಂದ ಬರುವ ಪ್ರತಿಯೊಂದು ವಾಹನ ತಪಾಸಣೆ ಮಾಡುತ್ತಾರೆ. ಕಾರಿನಲ್ಲಿ ಕನ್ನಡಪರ ಸ್ಟಿಕ್ಕರ್ ಇದ್ರೆ ಕಿತ್ತುಹಾಕ್ತಾರೆ.
ಕರ್ನಾಟಕ ಧ್ವಜ, ಕನ್ನಡ ಬಾವುಟ ಸ್ಟಿಕ್ಕರ್ ಇದ್ರೆ ಮುಲಾಜಿಲ್ಲದೆ ಕಿತ್ತು ಹಾಕುತ್ತಾರೆ. ಯಾಕೆ ಕಿತ್ತು ಹಾಕ್ಕೀರಾ ಅಂದ್ರೆ ನಮಗೆ ಗೊತ್ತಿಲ್ಲ ಎನ್ನುತ್ತಾರೆ.
ಕನ್ನಡ ಬಾವುಟದ ಬಣ್ಣದಲ್ಲಿ ದೇವರ ಹೆಸರು ಬರೆದಿದ್ದಕ್ಕೆ ಕಾರನ್ನು ಅಡ್ಡಗಟ್ಟಿ ಮುಂದಕ್ಕೆ ಹೋಗದಂತೆ ತಡೆದಿದ್ದಾರೆ.
ಸ್ಟಿಕ್ಕರ್ ಗಳನ್ನು ತೆಗೆಯಲು ನಿರಾಕರಿಸಿದರೆ ವಾಪಾಸ್ ಹೋಗುವಂತೆ ದೌರ್ಜನ್ಯ ತೋರಿಸುತ್ತಿದ್ದಾರೆ.
ಕಾರಿನ ಮೇಲೆ ನಮ್ಮ ಬಾವುಟದ ಬಣ್ಣವಾದ ಹಳದಿ ಕೆಂಪು ಬಣ್ಣ ಇರುವುದಕ್ಕೆ ತಿರುಪತಿ ಬೆಟ್ಟದ ಮೇಲೆ ಬಿಡದ ತ ಸಿಬ್ಬಂದಿಗಳು 😡@siddaramaiah @DKShivakumar pic.twitter.com/MH4d4dGr3X
— ಕನ್ನಡಿಗ ದೇವರಾಜ್ (@sgowda79) January 7, 2025
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆದಷ್ಟು ಬೇಗ ರಾಜ್ಯ ಸರ್ಕಾರ ಈ ಕಡೆ ಕೂಡ ಗಮನ ಹರಿಸುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ.