ಒಬ್ಬನೇ ಒಬ್ಬ ಅರ್ಹ BPL ಕಾರ್ಡುದಾರನ ಬಿಪಿಎಲ್‌ ಕಾರ್ಡ್‌ ರದ್ದು ಮಾಡಬಾರದು: ಸಿಎಂ ಎಚ್ಚರಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು (BPL), ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸದ, ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಅನರ್ಹರನ್ನು ಗುರುತಿಸಿ ಹಂತ ಹಂತವಾಗಿ ತೆಗೆದು ಹಾಕಬೇಕು. ಆದರೆ ಒಬ್ಬನೇ ಒಬ್ಬ ಅರ್ಹ ಬಿಪಿಎಲ್‌ ಕಾರ್ಡುದಾರನ ಬಿಪಿಎಲ್‌ ಕಾರ್ಡ್‌ ರದ್ದು ಮಾಡಬಾರದು ಎಚ್ಚರಿಕೆ ನೀಡಿದರು‌.

ಅನರ್ಹ ಬಿಪಿಎಲ್‌ ಪಡಿತರ ಚೀಟಿದಾರರು ಸ್ವಯಂ ತಮ್ಮ ಬಿಪಿಎಲ್‌ ಕಾರ್ಡ್‌ಗಳನ್ನು ಹಿಂತಿರುಗಿಸಲು ಕಾಲಾವಕಾಶ ನೀಡಬೇಕು, ಆ ಬಳಿಕ ಅಂತವರಿಗೆ ನೊಟೀಸ್‌ ನೀಡಿ ಕಾರ್ಡುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಈಗಾಗಲೇ 4ಸಾವಿರ ಸರ್ಕಾರಿ ನೌಕರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ, ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಯಡಿ ರೂ.4692 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಕ್ಟೋಬರ್‌ ಅಂತ್ಯದವರೆಗೆ ರೂ. 3253 ಕೋಟಿ ವೆಚ್ಚ ಮಾಡಲಾಗಿದೆ. 4,44,48,294 ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯ ಮುಖ್ಯಾಂಶಗಳು

• ಪಡಿತರ ಹಾಗೂ ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ತಳಹಂತದಲ್ಲಿ ಬಲಪಡಿಸುವ ಮೂಲಕ ಜಾಗೃತಿ ಸಮಿತಿಗಳಲ್ಲಿ ಜನರ ಸಹಭಾಗಿತ್ವವನ್ನು ಹೆಚ್ಚಿಸಬೇಕು. ಸಮಿತಿ ನಿಯಮಿತವಾಗಿ ಸಭೆ ನಡೆಸುವುದನ್ನು ಖಾತ್ರಿಪಡಿಸಬೇಕು.

• ರಾಜ್ಯದಲ್ಲಿ ಒಟ್ಟು 4518 ಪೆಟ್ರೋಲ್‌ ಬಂಕ್‌ಗಳಿದ್ದು, ಡಿಸೆಂಬರ್‌ ಅಂತ್ಯದವರೆಗೆ 503 ಪೆಟ್ರೋಲ್‌ ಬಂಕ್‌ಗಳ ತಪಾಸಣೆ ಮಾಡಲಾಗಿದೆ. ಪೆಟ್ರೋಲ್‌ ಬಂಕ್‌ಗಳ ತಪಾಸಣೆಯನ್ನು ಹೆಚ್ಚಿಸಿ ಅಳತೆ ಮತ್ತು ಗುಣಮಟ್ಟದಲ್ಲಿ ಮೋಸದಂತಹ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು.

• ಕನಿಷ್ಠ ಬೆಂಬಲ ಬೆಲೆ ಅಡಿ ಆಹಾರ ಧಾನ್ಯ ಸಂಗ್ರಹಿಸಲು ಎಲ್ಲಾ ವ್ಯವಸ್ಥೆ ಮಾಡಬೇಕು. ರೈತರಿಗೆ ಸಮಸ್ಯೆಯಾಗದಂತೆ ತ್ವರಿತವಾಗಿ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು.

• ರಾಜ್ಯದಲ್ಲಿ 1,53,69,945 ಪಡಿತರ ಚೀಟಿಗಳಿದ್ದು, 5,30,88,636 ಸದಸ್ಯ ಫಲಾನುಭವಿಗಳಿದ್ದಾರೆ. ಇಲಾಖೆಯಲ್ಲಿ ಒಟ್ಟು 709 ಹುದ್ದೆಗಳು ಖಾಲಿಯಿವೆ.

• ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ ಕರ್ನಾಟಕದಲ್ಲಿ ಬೇರೆ ರಾಜ್ಯಗಳ 13,383 ಫಲಾನುಭವಿಗಳು ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ.

• ಕುಟುಂಬದಲ್ಲಿ ಒಬ್ಬರೇ ಇರುವ, 80 ವರ್ಷ ದಾಟಿದವರಿಗೆ ಮನೆ ಬಾಗಿಲಿಗೆ ಆಹಾರ ಧಾನ್ಯ ಒದಗಿಸುವ ಅನ್ನ-ಸುವಿಧಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. 8,500 ಪಡಿತರ ಚೀಟಿದಾರರು ಯೋಜನೆಯಡಿ ಪ್ರಯೋಜನ ಪಡೆಯುತ್ತಿದ್ದಾರೆ.

ರಾಜಕೀಯ

Video| ಮಧುಗಿರಿ ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಬಾರಿಸಿದ ಪಿಎಸ್‌ಐ.. ಬಿ.ವೈ.ವಿಜಯೇಂದ್ರ ವಾಗ್ದಾಳಿ

Video| ಮಧುಗಿರಿ ಬಿಜೆಪಿ ಅಧ್ಯಕ್ಷನ ಕಪಾಳಕ್ಕೆ ಬಾರಿಸಿದ ಪಿಎಸ್‌ಐ.. ಬಿ.ವೈ.ವಿಜಯೇಂದ್ರ ವಾಗ್ದಾಳಿ

ಬೆಂಗಳೂರು; ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನಿರಂತರ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ ಪ್ರಕರಣಗಳು ನಿರಂತರ ಘಟಿಸುತ್ತಿವೆ. ಜನಸಾಮಾನ್ಯರಿಗೆ ಸುರಕ್ಷತೆ ಒದಗಿಸಲಾಗದ ಸ್ಥಿತಿ ನಿರ್ಮಾಣವಾಗಿದ್ದು ಕಾನೂನು ಸುವ್ಯವಸ್ಥೆ ಸಂಪೂರ್ಣ ನೆಲಕಚ್ಚಿದೆ, ಇದರ ನಡುವೆ

[ccc_my_favorite_select_button post_id="104157"]
ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: Cmsiddaramaiah

ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: Cmsiddaramaiah

ಬೆಂಗಳೂರು: ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಆಗಿಲ್ಲ: ಕ್ಯಾಬಿನೆಟ್ ಉಪ ಸಮಿತಿ ವರದಿಯೇ ಇನ್ನೂ ಬಂದಿಲ್ಲ. ಉಪ ಸಮಿತಿ ವರದಿ ಬರುವ ಮೊದಲೇ ಬಿಜೆಪಿಗೆ ಆತಂಕ ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah)

[ccc_my_favorite_select_button post_id="104099"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
Doddaballapura: ಮನೆಗೆ ವ್ಯಾಪಿಸಿದ ಬೆಂಕಿ.. 5 ಮಕ್ಕಳು ಪಾರು..!

Doddaballapura: ಮನೆಗೆ ವ್ಯಾಪಿಸಿದ ಬೆಂಕಿ.. 5 ಮಕ್ಕಳು ಪಾರು..!

ದೊಡ್ಡಬಳ್ಳಾಪುರ (Doddaballapura): ಹಳ್ಳಕ್ಕೆ ಬಿದ್ದ ಬೆಂಕಿ ಮನೆಗೆ ವ್ಯಾಪಿಸಿ ವಾಸದ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಹೊಸಹಳ್ಳಿಯಲ್ಲಿ ಸಂಭವಿಸಿದೆ. ರಾಮಕ್ಕ ಎನ್ನುವವರ ಮನೆ ಇದಾಗಿದ್ದು, ಇಂದು ಮನೆಯ ಮಾಲೀಕರು ಹೊಲಕ್ಕೆ ತೆರಳಿದ್ದು, ಶನಿವಾರವಾದ ಕಾರಣ ಐದು ಮಂದಿ ಮಕ್ಕಳು ಶಾಲೆ

[ccc_my_favorite_select_button post_id="104154"]
Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ (Doddaballapura): ಕಾರಿನಲ್ಲಿದ್ದವರು ಏಕಾಏಕಿ ಬಾಗಿಲು ತೆರೆದ ಪರಿಣಾಮ ಆಟೋದಲ್ಲಿ ತೆರಳುತ್ತಿದ್ದ ಶಿಕ್ಷಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿಕ್ರಾಸ್ ರಸ್ತೆಯಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ತಾಲೂಕಿನ ಆರೂಢಿಯ ಶ್ರೀ ಅರವಿಂದ ಪ್ರೌಢಶಾಲೆಯ ಶಿಕ್ಷಕ ಸಿದ್ದಲಿಂಗಯ್ಯ ಎಂದು

[ccc_my_favorite_select_button post_id="104081"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!