ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಚತುರ್ದಶಿ ಜನವರಿ.12.2025 ಭಾನುವಾರ: ಈ ದಿನ ಆಲಸ್ಯವನ್ನು ಬಿಟ್ಟು ಸೂರ್ಯ ನಮಸ್ಕಾರವನ್ನು ಮಾಡಿದರೆ ಎಲ್ಲರಿಗೂ ಸಹ ಆರೋಗ್ಯದಲ್ಲಿ ಅತ್ಯಂತ ದೃಢವಾದ ನಿಶ್ಚಯವಾದ ಅನುಗ್ರಹವಾಗುತ್ತದೆ. Astrology
ಮೇಷ ರಾಶಿ: ಅತ್ಯಂತ ಶುಭದಿನ. ಧನಾಗಮವಾಗುವ ಸೂಚನೆ, ಬಂದು ಮಿತ್ರರಲ್ಲಿ ಸ್ವಲ್ಪ ಕಲಹ, ಆರೋಗ್ಯದಲ್ಲಿ ಏರುಪೇರು, ಮೌನದಿಂದ ಕಾರ್ಯ ಸಾಧನೆ, ವಿದ್ಯಾರ್ಥಿಗಳಿಗೆ ಒಳ್ಳೆಯ ಭವಿಷ್ಯ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)
ವೃಷಭ ರಾಶಿ: ಎಲ್ಲಾ ಕಾರ್ಯದಲ್ಲೂ ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ಆದರೆ ಈ ದಿನ ಸ್ವಲ್ಪ ಯೋಚಿಸಿ ತೀರ್ಮಾನಗಳನ್ನು ಮಾಡಿ. ಒಳ್ಳೆ ಕಾರ್ಯಕ್ಕೆ ಗುರುಗಳ ಅನುಗ್ರಹವಿದೆ. (ಪರಿಹಾರಕ್ಕಾಗಿ ದುರ್ಗಾದೇವಿ ಆರಾಧನೆ ಮಾಡಿ)
ಮಿಥುನ ರಾಶಿ: ಧರ್ಮ ಕಾರ್ಯದಲ್ಲಿ ಹಿನ್ನಡೆ. ಮನಸ್ಸಿನಲ್ಲಿ ಒಳ್ಳೆಯ ಕೆಲಸವನ್ನು ಮಾಡಬೇಕೆಂಬ ಹಠ. ಆದರೆ ಸಾಧ್ಯವಾಗುವುದಿಲ್ಲ, ಸತತ ಯೋಚಿಸುತ್ತೀರಿ ಆದರೆ ಎಚ್ಚರಿಕೆ ಬಹಳ ಅಗತ್ಯ. (ಪರಿಹಾರಕ್ಕಾಗಿ ಸತ್ಯನಾರಾಯಣ ಸ್ವಾಮಿಯನ್ನು ಆರಾಧನೆ ಮಾಡಿ )
ಕಟಕ ರಾಶಿ: ಬಹಳ ಒಳ್ಳೆಯ ಮಾತುಗಳು ಯಾರನ್ನು ಬೇಕಾದರೂ ಮರಳು ಮಾಡುತ್ತೀರಿ ಆದರೆ ಎಚ್ಚರಿಕೆಯಿಂದ ಕಾರ್ಯಗಳನ್ನು ಮಾಡಿ ದುಡುಕಬೇಡಿ ಒಳ್ಳೆಯದಾಗುತ್ತದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. (ಪರಿಹಾರಕ್ಕಾಗಿ ಆಧ್ಯಾ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ)
ಸಿಂಹ ರಾಶಿ: ಮುನ್ನುಗ್ಗಬೇಕೆಂಬ ಧೈರ್ಯ, ಸಾಹಸ ಆದರೂ ಕೆಲವು ವಿಚಾರಗಳು ಹಿಂದೆಯೇ ನಿಲ್ಲಿಸಿರುತ್ತವೆ. ಎಷ್ಟು ಪ್ರಯತ್ನ ಪಟ್ಟರು ನಿಮ್ಮನ್ನು ಹಿಡಿದಿರುವುದು ಯಾರೆಂದು ಗೊತ್ತಾಗುವುದಿಲ್ಲ. ಮನಸ್ಸಿನಲ್ಲಿ ಯೋಚಿಸಬೇಡಿ ಧೈರ್ಯದಿಂದ ಮುನ್ನುಗ್ಗಿ, ಶುಭವಾಗುತ್ತದೆ. (ಪರಿಹಾರಕ್ಕಾಗಿ ನರಸಿಂಹನನ್ನು ಆರಾಧನೆ ಮಾಡಿ)
ಕನ್ಯಾ ರಾಶಿ: ಶುಭ ಸಮಯ. ಆದರೆ ವಿನಾಕಾರಣ ಚಿಂತೆ ಯೋಚಿಸತಕ್ಕಂತಹ ವಿಷಯದಲ್ಲೆಲ್ಲ ತಲೆಕೆಡಿಸಿಕೊಳ್ಳುತ್ತೀರಿ. ಇದರಿಂದ ಹೊರಬರಬೇಕು, ನಿರ್ಧಾರವಾಗಿ ಧ್ಯಾನವನ್ನು ಅಭ್ಯಾಸ ಮಾಡಿ. ಅನುಕೂಲವಾಗುತ್ತದೆ ಮನಸ್ಸು ಏಕಾಗ್ರವಾಗುತ್ತದೆ ಶುಭವಾಗುತ್ತದೆ. (ಪರಿಹಾರಕ್ಕಾಗಿ ಶ್ರೀ ಕೃಷ್ಣನನ್ನು ಪೂಜೆ ಮಾಡಿ)
ತುಲಾ ರಾಶಿ: ನಿಮಗೇನು ಅಂತಹ ಅಪಾಯವಿಲ್ಲ ಏಕೆ ಚಿಂತಿಸುತ್ತೀರಿ, ಆಕಾಶವೇ ತಲೆ ಮೇಲೆ ಬಿದ್ದೋಯಿತೋ ಎಂಬಂತೆ ಬಹಳವಾದ ಚಿಂತೆ. ಈ ಚಿಂತೆಯಿಂದ ಮಾನಸಿಕ ಆರೋಗ್ಯ ಕೆಡುತ್ತದೆ, ಚಿಂತಿಸಬೇಡಿ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಲಲಿತಾ ಕುಂಕುಮಾರ್ಚನೆಯನ್ನು ಮಾಡಿಸಿ)
ವೃಶ್ಚಿಕ ರಾಶಿ: ಒಳ್ಳೆಯ ಧನಾಗಮ, ಬಂಧು ಮಿತ್ರರ ಸೌಖ್ಯ, ಶುಭ ಸುದ್ದಿ, ಅತ್ಯಂತ ಶುಭದಿನ, ಉಲ್ಲಾಸದಾಯಕ ವಾತಾವರಣ ಅನಾಚಾರಗಳು ಇಲ್ಲ. ಆದರೆ ಸ್ವಲ್ಪ ವ್ಯತ್ಯಾಸದಿಂದ ಅತಿಯಾದ ಕೋಪ.. ಕೋಪವನ್ನು ನಿಧಾನ ಶಮನ ಮಾಡಿಕೊಳ್ಳಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಆಂಜನೇಯನ ಪೂಜೆ ಮಾಡಿ)
ಧನಸ್ಸು ರಾಶಿ: ಒಳ್ಳೆಯದಾಗುತ್ತದೆ. ಧನಾಗಮನವಾಗುತ್ತದೆ, ಅತ್ಯಂತ ಒಳ್ಳೆಯ ದಿನ, ಬಂದು ಮಿತ್ರರ ಸೌಖ್ಯ, ಎಲ್ಲರ ಜೊತೆ ಮಾತನಾಡಬೇಕು ಎಂಬ ಹಂಬಲ, ಭಗವಂತನ ಕೃಪಾ ದೃಷ್ಟಿ, ಶುಭವಾಗುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ಪೂಜೆ ಮಾಡಿಸಿ)
ಮಕರ ರಾಶಿ: ಅತ್ಯಂತ ಕಠಿಣವಾದ ಮಾತುಗಳು, ಮಾತಿನಿಂದ ಹಲವರಿಗೆ ಬೇಸರ, ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ. ಈ ದಿನ ಅಷ್ಟೊಂದು ಕ್ಷೇಮವಲ್ಲ ಎಚ್ಚರಿಕೆ. (ಪರಿಹಾರಕ್ಕಾಗಿ ಅಷ್ಟಲಕ್ಷ್ಮಿಯರ ಸ್ಮರಣೆ ಮಾಡಿ)
ಕುಂಭ ರಾಶಿ: ಮನಸ್ಸಿಗೆ ಸ್ವಲ್ಪ ಆಲಸ್ಯ, ಸ್ವಲ್ಪಮಟ್ಟಿನ ಚಿಂತೆ, ಸ್ವಲ್ಪ ದುಃಖ ಆದರೆ ಒಳ್ಳೆಯದಾಗುತ್ತದೆ. ಚಿಂತಿಸಬೇಡಿ, ಭೋಜನ ಸೌಖ್ಯ, ಶುಭವಾಗುತ್ತದೆ. (ಪರಿಹಾರಕ್ಕಾಗಿ ಶಿವನನ್ನು ಆರಾಧನೆ ಮಾಡಿ)
ಮೀನ ರಾಶಿ: ಶುಭದಿನ, ಉತ್ತಮವಾದ ವಾತಾವರಣ, ಮನೆಯಲ್ಲಿ ನೆಮ್ಮದಿ, ಸತ್ಯ ಜ್ಞಾನದಿಂದ ಜೀವನ ಮಾಡಬೇಕೆಂಬ ಆಸೆ, ಮನಸ್ಸಿಗೆ ತೃಪ್ತಿಯಿದೆ. ಎಲ್ಲಾ ರೀತಿಯಲ್ಲೂ ಶುಭ. (ಪರಿಹಾರಕ್ಕಾಗಿ ಸರ್ವಮಂಗಳೆ ಅಮ್ಮನವರ ಪೂಜೆ ಮಾಡಿ)
ರಾಹುಕಾಲ: 4-30PM ರಿಂದ 6-00PM
ಗುಳಿಕಕಾಲ: 3-00PM ರಿಂದ 4-30 PM
ಯಮಗಂಡಕಾಲ: 12-00PMರಿಂದ 1-30PM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572