ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಕೃಷ್ಣ ಷಷ್ಟಿ ಜನವರಿ.20.2025: ಈ ದಿನ ವಿಶೇಷವಾಗಿ ನಾಗಾರಾಧನೆಯನ್ನು ಮಾಡಿದರೆ, ಪೂರ್ಣ ಫಲ ಉಂಟಾಗುತ್ತದೆ.Astrology
ಮೇಷ ರಾಶಿ: ದೃಢವಾದ ನಿರ್ಧಾರವನ್ನು ಮಾಡಿ, ಎಲ್ಲ ವಿಷಯಗಳಿಂದಲೂ ಧನಾತ್ಮಕವಾದ ಚಿಂತನೆಯನ್ನು ಮಾಡಿಕೊಳ್ಳಿ. ಮಾನಸಿಕ ಕಿರಿಕಿರಿ, ಸ್ವಲ್ಪ ಅಸಮಾಧಾನ, ಆರೋಗ್ಯದಲ್ಲಿ ಚಿಂತೆ, ನಿರ್ಧಾರಗಳು ಅಚಂಚಲ. (ಪರಿಹಾರಕ್ಕಾಗಿ ಶಿವನ ಸ್ತೋತ್ರವನ್ನು ಪಾರಾಯಣ ಮಾಡಿ)
ವೃಷಭ ರಾಶಿ: ಶಿಕ್ಷಣದಲ್ಲಿ ಅಭಿವೃದ್ಧಿ, ಶೈಕ್ಷಣಿಕ ವಿಷಯಗಳಲ್ಲಿ ಜ್ಞಾನಾರ್ಜನೆಗೆ ಉತ್ತಮವಾದ ಮಹತ್ವ. ಅತ್ಯಂತ ಶುಭವಾದ ದಿನ, ಧನಾಗಮ ನಿಧಾನವಾದರೂ ಚೆನ್ನಾಗಿರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಎಲ್ಲಾ ಕಾರ್ಯದಲ್ಲೂ ಶುಭ. (ಪರಿಹಾರಕ್ಕಾಗಿ ನಾರಾಯಣನ ಸ್ಮರಣೆ ಮಾಡಿ)
ಮಿಥುನ ರಾಶಿ: ಒಳ್ಳೆಯ ದಿನ. ಕಾರ್ಯಗಳಲ್ಲಿ ಪ್ರವೃತ್ತಿ ಉಂಟಾಗುತ್ತದೆ, ಧನವನ್ನು ಯಾವ ಕಾರ್ಯಕ್ಕೆ ಮನೆಯೊಗಿಸಬೇಕು ಅದಕ್ಕೆ ಮಾತ್ರ ಖರ್ಚು ಮಾಡಿ, ವಿಪರೀತವಾದ ದುಂದು ಬೆಚ್ಚ ಬೇಡ. ಎಚ್ಚರಿಕೆಯಿಂದ ಕಾರ್ಯವನ್ನು ನಿರ್ವಹಿಸಿ. (ಪರಿಹಾರಕ್ಕಾಗಿ ದುರ್ಗಾದೇವಿಯ ಸ್ತೋತ್ರವನ್ನು ಕೇಳಿ)
ಕಟಕ ರಾಶಿ: ನಿಧಾನ ಗತಿಯ ಜಯ, ಸ್ವಲ್ಪ ವಿಳಂಬ, ರೀತಿಯ ಕೆಲಸಗಳು ಆಗುತ್ತವೆ. ಅತಿಯಾದ ಆತುರ ಬೇಡ, ಪ್ರೋತ್ಸಾಹವು ಸ್ವಲ್ಪ ನಿಧಾನ.. ಎಲ್ಲ ರೀತಿಯಲ್ಲೂ ನಿಧಾನ ಗತಿಯಲ್ಲಿ ಅನುಕೂಲವಾಗುತ್ತದೆ, ವಿದ್ಯಾರ್ಥಿಗಳಿಗೆ ಶುಭ. (ಪರಿಹಾರಕ್ಕಾಗಿ ಆಂಜನೇಯ ಸ್ವಾಮಿಯ ಪೂಜೆ ಮಾಡಿ)
ಸಿಂಹ ರಾಶಿ: ಅತಿಯಾದ ಆತ್ಮವಿಶ್ವಾಸ ಇದರಿಂದ ತೊಡಕುಂಟಾಗಬಹುದು. ಎಚ್ಚರಿಕೆ, ವಿದೇಶ ಪ್ರಯಾಣದ ಯೋಗ. ಕೆಲವು ಕಾರ್ಯಗಳಲ್ಲಿ ಅನವಶ್ಯಕ ತಿರುಗಾಟ, ವಾಹನ ಸುಖ, ದೈವ ಬಲ.
(ಪರಿಹಾರಕ್ಕಾಗಿ ಮಹಾವಿಷ್ಣು ಸಹಸ್ರನಾಮ ಹೇಳಿ)
ಕನ್ಯಾ ರಾಶಿ: ದೀರ್ಘವಾದ ಚಿಂತನೆ, ಆಲೋಚನೆ, ಮನಸ್ಸಿಗೆ ಕಿರಿಕಿರಿ.. ಒಳ್ಳೆಯ ಭಾವನೆ ಇದ್ದರೂ ಭಗವಂತನಲ್ಲಿ ಪ್ರಾರ್ಥನೆ ಇರಬೇಕು. ನಿರಂತರವಾಗಿ ಒಳ್ಳೆಯವರ ಸಂಪರ್ಕದಲ್ಲಿ ಇರಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆ ಮಾಡಿ)
ತುಲಾ ರಾಶಿ: ಯಾವುದೇ ವಿಚಾರವನ್ನು ಆಲೋಚನೆ ಮಾಡಿ ಒಪ್ಪಿಕೊಳ್ಳಿ ಶುಭವಾಗುತ್ತದೆ, ಸುಮ್ಮನೆ ಅನಾವಶ್ಯಕ ತೀರ್ಮಾನಗಳು ಬೇಡ. ವ್ಯಾಪಾರ ವ್ಯವಹಾರಗಳಲ್ಲಿ ವೃದ್ಧಿ, ಸ್ವಲ್ಪ ತಿರುಗಾಟ, ಕೋಪ ಬೇಡ, ಎಚ್ಚರಿಕೆಯಿಂದ ಮಾತನಾಡಿ. (ಪರಿಹಾರಕ್ಕಾಗಿ ಹಾಸರಸ್ವತಿಯ ಪ್ರಾರ್ಥನೆ ಮಾಡಿ)
ವೃಶ್ಚಿಕ ರಾಶಿ: ಆರೋಗ್ಯದಲ್ಲಿ ಚೇತರಿಕೆ, ಆಕಸ್ಮಿಕ ಘಟನೆಯಿಂದ ಲಾಭ, ಅತ್ಯುನ್ನತ ಅಧಿಕಾರದ ಹುದ್ದೆ. ತಂದೆ-ತಾಯಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಸ್ಮರಣೆ ಮಾಡಿ)
ಧನಸ್ಸು ರಾಶಿ: ಸದಾಕಾಲ ಯೋಚಿಸುತ್ತೀರಿ, ಇದರಿಂದ ಫಲವಿಲ್ಲ. ಯೋಚನೆಗೆ ನೀವು ಕಾರಣರಲ್ಲ, ಮಾಡಿದ ಕೆಲಸವೂ ಒಂದು ಕಾಲದಲ್ಲಿ ವಿಪರೀತವಾಗಿದೆ, ಅದರಿಂದ ಈ ಚಿಂತನೆಗಳು ನಿಮ್ಮಲ್ಲಿ ಸೇರಿ ಹೋಗಿವೆ. ವಿದ್ಯಾರ್ಥಿಗಳಿಗೆ ಶುಭ, ಲಕ್ಷ್ಯ ಕೊಟ್ಟು ಓದಬೇಕು. (ಪರಿಹಾರಕ್ಕಾಗಿ ಗಣಪತಿಯ ಸ್ಮರಣೆ ಮಾಡಿ)
ಮಕರ ರಾಶಿ: ಅತಿಯಾದ ಆಲೋಚನೆ, ದೊಡ್ಡದಾದ ನಿರ್ಧಾರವಿಲ್ಲ. ಚಂಚಲವಾದ ಮನಸ್ಥಿತಿ, ಭಗವಂತನ ದರ್ಶನದಿಂದ ಅನುಕೂಲವಾಗುತ್ತಿಲ್ಲ ಎಂಬ ಚಿಂತನೆ, ಅತಿಯಾದ ಕೊರತೆ ಕಾಣುತ್ತಿದೆ. (ಪರಿಹಾರಕ್ಕಾಗಿ ಆಂಜನೇಯ ಸ್ಮರಣೆ ಮಾಡಿ)
ಕುಂಭ ರಾಶಿ: ಒಳ್ಳೆಯ ದಿನಗಳು ಬಂದಿವೆ.. ಮಾಡಬೇಕಾದ ಕೆಲಸವೂ ಸಾಕಷ್ಟಿದೆ. ನಿಧಾನವಾಗಿ ಎಲ್ಲಾ ಕಾರ್ಯಗಳನ್ನು ತೂಗಿಸಿ ಅನುಕೂಲವಾಗುತ್ತದೆ, ಅತಿಯಾದ ಆಲೋಚನೆ ಬೇಡ, ಉತ್ಸಾಹಿಗಳಾಗಿರಿ. (ಪರಿಹಾರಕ್ಕಾಗಿ ಶನೇಶ್ಚರ ಮಂತ್ರವನ್ನು ಜಪ ಮಾಡಿ)
ಮೀನ ರಾಶಿ: ಶ್ರೇಷ್ಠವಾದ ದಿನ ಬಂದು ಮಿತ್ರರಲ್ಲಿ ಸಂತೋಷ, ಪ್ರಯಾಣ ಸುಖ, ಆತ್ಮವಿಶ್ವಾಸ, ಪೂರ್ಣವಾದ ಆರೋಗ್ಯ.. ಭಗವಂತನ ಅನುಗ್ರಹ, ಕೊರತೆ ಇಲ್ಲದ ವಿದ್ಯೆ, ಸರ್ಕಾರಿ ಸೌಲಭ್ಯ ಭಾಗ್ಯ ಎಲ್ಲವೂ ವೃದ್ಧಿಯಾಗುತ್ತದೆ. (ಪರಿಹಾರಕ್ಕಾಗಿ ಷಣ್ಮುಗನ ಸ್ಮರಣೆ ಮಾಡಿ)
ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 6-00AM ರಿಂದ 7-30 AM
ಯಮಗಂಡಕಾಲ: 1-30PMರಿಂದ 3-00PM
ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.